ಅಧ್ಯಕ್ಷರಾಗಿ ಪ್ರಶಾಂತ ಹಂಚಾಟೆ, ಉಪಾಧ್ಯಕ್ಷರಾಗಿ ಸುನೀಲ್ ದೇವಗಿರಕರ್ ಅವಿರೋಧ ಆಯ್ಕೆ

ಅಧ್ಯಕ್ಷರಾಗಿ ಪ್ರಶಾಂತ ಹಂಚಾಟೆ, ಉಪಾಧ್ಯಕ್ಷರಾಗಿ ಸುನೀಲ್ ದೇವಗಿರಕರ್ ಅವಿರೋಧ ಆಯ್ಕೆ

ಇಳಕಲ್: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಇಲಕಲ್ಲ ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಇಲಕಲ್ಲ ನಗರದ ಚಾರ್ಟರ್ಡ್ ಟ್ಯಾಕ್ಸ್ ಪ್ರ್ಯಾಕ್ಟೀಶನರ್ ಪ್ರಶಾಂತ ಹಂಚಾಟೆ ಹಾಗೂ ಉಪಾಧ್ಯಕ್ಷರಾಗಿ ನಗರದ ವ್ಯಾಪಾರಸ್ಥರಾದ ಸುನೀಲ್ ದೇವಗಿರಿಕರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಬಿ.‌ಎನ್. ಪೋಲಿಸ್ ಪಾಟೀಲ್ ಅವರು ಹೇಳಿದರು.

ನಗರದ ಶ್ರೀ ‌ಹಿಂಗುಲಾಂಬಿಕಾ ದೇವಿ ದೇವಸ್ಥಾನದ ಸಭಾಂಗಣದಲ್ಲಿ‌ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಘೋಷಿಸಿಲಾಯಿತು.

ನಿರ್ದೇಶಕರಾಗಿ ಪ್ರಕಾಶ ದೇವಗಿರಿಕರ್, ಜಮದಗ್ನಿ ಮಹೇಂದ್ರಕರ, ಲಕ್ಷ್ಮಣ ದಾಯಪುಲ್ಲೆ, ರಮೇಶ ಹಂಚಾಟೆ, ಸಂತೋಷ ದೇವಗಿರಿಕರ್, ರಾಮಚಂದ್ರ ಕಠಾರೆ, ಶ್ರೀಮತಿ ರೇಣುಕಾ ದೇವಗಿರಿಕರ್, ಶ್ರೀಮತಿ ಭಾಗ್ಯಶ್ರೀ ಹಂಚಾಟೆ, ಶ್ರೀಮತಿ ಗೀತಾಬಾಯಿ ಲೋಕರೆ ಅವರು ಚುನಾಯಿತರಾಗಿದ್ದಾರೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಚುನಾವಣಾಧೀಕಾರಿಗಳಾದ ಬಿ. ಎನ್. ಪೋಲಿಸ್ ಪಾಟೀಲ ಅವರು ಮಾತಾನಾಡಿ ಎಲ್ಲ ನಿರ್ದೇಶರಿಗೆ ಶುಭ ಕೋರಿದರು. ಸಭೆಯಲ್ಲಿ ನಿರ್ದೇಶಕರಾದ ಪ್ರಕಾಶ ದೇವಗಿರಿಕರ್, ಜಮದಗ್ನಿ ಮಹೇಂದ್ರಕರ ಹಾಗೂ ಶ್ರೀಮತಿ ಗೀತಾಬಾಯಿ ಲೋಕರೆ ಮಾತನಾಡಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.

ನೂತನ ಆಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ ಹಂಚಾಟೆ ಹಾಗೂ ಸುನೀಲ್ ದೇವಗಿರಿಕರ್ ಅವರು ಎಲ್ಲ ಶೇರುದಾರರ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರ ಸಹಕಾರ ಕೋರಿದರು. ಸಮಾಜದ ಮುಖಂಡರಾದ ಶ್ರೀ ನಾರಾಯಣರಾವ ಅಂಬೋರೆ ಅವರು ಉಪಸ್ಥಿತರಿದ್ದರು. ನಂತರ ನಡೆದ ಶ್ರೀ ಹಿಂಗುಲಾಂಬಿಕಾ ದೇವಿಯ ಪೂಜೆಯಲ್ಲಿ ಮಹಾಮಂಗಳಾರತಿಯಲ್ಲಿ ಪಾಲ್ಘೊಂಡು ಶ್ರೀ ದೇವಿಯ ಆಶೀರ್ವಾದ ಪಡೆದರು.

Latest News

ಮಾಜಿ ಶಾಸಕ ನಡಹಳ್ಳಿ ಆಗ್ರಹ:                                                           ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮಾಜಿ ಶಾಸಕ ನಡಹಳ್ಳಿ ಆಗ್ರಹ: ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮುದ್ದೇಬಿಹಾಳ : ರಾಜ್ಯದಲ್ಲಿ 199 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಾಂಗ್ರೆಸ್ ಸರ್ಕಾರ ರೈತರ ಐದು

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ಸಂಸ್ಥೆಯ ವತಿಯಿಂದ ಸೆ.11 ರಂದು ಬೆಳಗ್ಗೆ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಸೆ.9 ರಂದು ಬರಪರಿಸ್ಥಿತಿ ಅವಲೋಕನಕ್ಕೆ ಟಾಸ್ಕಫೋರ್ಸ್ ಸಭೆ

ಸೆ.9 ರಂದು ಬರಪರಿಸ್ಥಿತಿ ಅವಲೋಕನಕ್ಕೆ ಟಾಸ್ಕಫೋರ್ಸ್ ಸಭೆ

ಮುದ್ದೇಬಿಹಾಳ : ಬರಪರಿಸ್ಥಿತಿ,ಕುಡಿವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಚರ್ಚೆ ನಡೆಸಲು ಸೆ.9 ರಂದು ಬೆಳಗ್ಗೆ 9 ಕ್ಕೆ ಪಟ್ಟಣದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷರು, ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆಯಲ್ಲಿ ಟಾಸ್ಕಫೋರ್ಸ್ ಸಭೆ ನಿಗದಿಪಡಿಸಲಾಗಿದೆ. ಟಾಸ್ಕಫರ‍್ಸ್ ಸಭೆಗೆ ಎಲ್ಲ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ತಹಶೀಲ್ದಾರ್‌ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ಷೇತ್ರದ ಅವಳಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡುವಂತೆ ಮಾಜಿ ಶಾಸಕ ಎ.ಎಸ್.ಪಾಟೀಲ

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಮುದ್ದೇಬಿಹಾಳ : ಮತಕ್ಷೇತ್ರದ ರೈತರಿಂದ ಆಯ್ಕೆಯಾಗಿರುವ ನೀವು ಅವರ ಬದುಕಿಗೆ ಸಂಕಷ್ಟ ಎದುರಾದಾಗ ಸ್ಪಂದಿಸುವ ಕೆಲಸ ಮಾಡಬೇಕು.ಅದು ಬಿಟ್ಟು ಮೂವ್ವತ್ತು ವರ್ಷಗಳಿಂದ ಹಸಿ ಸುಳ್ಳುಗಳನ್ನೇ ಹೇಳುತ್ತಾ ರಾಜಕಾರಣ ಮಾಡಿಕೊಂಡು ಬಂದಿದ್ದೀರಿ.ಜನ ಇನ್ನು ಮುಂದೆ ನಿಮ್ಮನ್ನು ನಂಬುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಬರ ಘೋಷಣೆಗೆ ಆಗ್ರಹಿಸಿ ನಡೆದಿರುವ ಬಿಜೆಪಿಯ ಎರಡನೇ ದಿನದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು