ಇಳಕಲ್: ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಪೂಜ್ಯ ಗುರುಮಹಾಂತಶ್ರೀಗಳ ಸಾನಿಧ್ಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಅಮಲಝೆರಿ-ಮಳ್ಳಿಗೇರಿಯ ಶ್ರೀಗುರುದೇವಾಶ್ರನದ ಪೂಜ್ಯ ಜ್ಞಾನಮಯಾನಂದ ಮಹಾಸ್ವಾಮಿಗಳು ಶ್ರೀಮಠದ ಭಕ್ತರ ಸಮ್ಮುಖದಲ್ಲಿ ನೇರವೇರಿಸಿದರು.
Join Our Telegram: https://t.me/dcgkannada
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಗುರುಮಹಾಂತಶ್ರೀಗಳು, ತ್ಯಾಗ ಮತ್ತು ಬಲಿದಾನದ ಮೂಲಕ ಹಿರಿಯರು ಗಳಿಸಿಕೊಟ್ಟಿದ್ದಾರೆ. ನಮ್ಮ ಪೂರ್ವಜರು ದೇಶದ ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಂಬ ಸಂದೇಶವನ್ನು ಸಾರಿದ್ದಾರೆ. ದೇಶ ಕಾಯುವ ಸೈನಿಕರು ಮಳೆ, ಗಾಳಿ, ಬಿಸಿಲು ಚಳಿಯನ್ನದೆ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಗಡಿ ಕಾಯುತ್ತಿರುವದರಿಂದ ಇಂದು ನಾವು ನೆಮ್ಮದಿಂಧ ಜೀವನ ಸಾಗಿಸುತ್ತಿದ್ದೇವೆ. ಅಂತಹ ಗಡಿಕಾಯುವ ಯೋಧರನ್ನು ನಾವು ಇಂದು ಸ್ಮರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Mudhol: ಬೇಡರ ಊರಲ್ಲಿ ಮಧ್ಯರಾತ್ರಿ ಧ್ವಜಾರೋಹಣ
ಈ ಸಂದರ್ಭದಲ್ಲಿ ಪೂಜ್ಯರು ಹಾಗೂ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.