ಮುದ್ದೇಬಿಹಾಳ : ತಾಳಿಕೋಟಿ ತಾಲ್ಲೂಕಿನ ಹಗರಗೊಂಡ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಅವಮಾನ ಮಾಡಿ ಅಪವಿತ್ರಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಗರಗುಂಡ ಗ್ರಾಮದಲ್ಲಿ ಆ.20 ರಂದು ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನಿಸಿದ ಕುರಿತು ಗ್ರಾಮಸ್ಥ ಸೋಮಪ್ಪ ಸಿದ್ದಪ್ಪ ಗಾಡಿ ಪೊಲೀಸರಿಗೆ ದೂರು ನೀಡಿದ್ದರು.
Join Our Telegram: https://t.me/dcgkannada
ಘಟನೆ ಕುರಿತು ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ನೇತೃತ್ವದ ತಂಡ ಅದೇ ಗ್ರಾಮದ ಯಲ್ಲಾಲಿಂಗ ಸಿದ್ದಪ್ಪ ಚಿಗರಿ ಎಂಬಾತ ರಾಯಣ್ಣನವರ ಭಾವಚಿತ್ರಕ್ಕೆ ಅಪಮಾನಿಸಿದ್ದಾಗಿ ಒಪ್ಪಿಕೊಂಡಿದ್ದು ಆತನನ್ನು ದಸ್ತಗಿರಿ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಪ್ರಕರಣದ ಪತ್ತೆಗೆ ಶ್ರಮಿಸಿದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ತಾಳಿಕೋಟಿ ಪಿಎಸ್‌ಐ ರಾಮನಗೌಡ ಸಂಕನಾಳ ಹಾಗೂ ತಂಡಕ್ಕೆ ಎಸ್ಪಿ ಅವರು ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: Muddebihal news: ಅಪೂರ್ಣ ಸೇತುವೆ ಕಾಮಗಾರಿ; ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿ ಮಂಜೂರಾತಿಗೆ ಪತ್ರ