ಮುದ್ದೇಬಿಹಾಳ : ಸನ್ 2024-25ನೇ ಸಾಲಿನ ದಸರಾ ಕ್ರೀಡಾಕೂಟ ತಾಳಿಕೋಟಿ ಹಾಗೂ ಮುದ್ದೇಬಿಹಾಳದಲ್ಲಿ ನಡೆಯಲಿದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಾಯ್.ಕವಡಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪ್ರಕಟಣೆ ನೀಡಿರುವ ಅವರು, ಸೆ.21 ರಂದು ಬೆಳಗ್ಗೆ 10.30ಕ್ಕೆ ತಾಳಿಕೋಟಿ ತಾಲ್ಲೂಕಿನ ದಸರಾ ಕ್ರೀಡಾಕೂಟಗಳು ಎಸ್.ಕೆ.ಪಿಯು ಕಾಲೇಜು ಆವರಣದಲ್ಲಿ(ಪ್ರೌಢ ವಿಭಾಗ) ನಡೆಯಲಿದ್ದು ಸೆ.23 ರಂದು ಬೆಳಗ್ಗೆ 10ಕ್ಕೆ ಮುದ್ದೇಬಿಹಾಳ ತಾಲ್ಲೂಕಿನ ಕ್ರೀಡಾಕೂಟಗಳು ಮುದ್ದೇಬಿಹಾಳ ಎಂ.ಜಿ.ವಿ.ಸಿ ಕಾಲೇಜಿನಲ್ಲಿ ನಡೆಯಲಿವೆ.
ಪುರುಷ ಹಾಗೂ ಮಹಿಳೆಯರಿಗಾಗಿ ವಯಕ್ತಿಕ ಆಟಗಳಾದ ಓಟ, ಜಿಗಿತ, ಎಸೆತ ಹಾಗೂ ಗುಂಪು ವಿಭಾಗದಲ್ಲಿ ಖೋಖೋ, ಕಬಡ್ಡಿ, ವ್ಹಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತಪರ ಒಕ್ಕೂಟದಿಂದ ಪ್ರತಿಭಟನೆ, ಶಾಸಕ ಸ್ಥಾನದಿಂದ ಮುನಿರತ್ನ ವಜಾಕ್ಕೆ ಆಗ್ರಹ (ವಿಡಿಯೋ ನೋಡಿ)
ಹೆಚ್ಚಿನ ಮಾಹಿತಿಗೆ ಮೊ. 96863 85655 ಸಂಪರ್ಕಿಸಬಹುದಾಗಿದೆ.