ಇಳಕಲ್: ನಗರಸಭೆ ಕಾರ್ಯಾಲಯದ ಆವರಣದಲ್ಲಿ ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಅವರು 78ನೇ ಸ್ವಾತಂತ್ರೋತ್ಸವದ ಧ್ಜಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಲಕ್ಷಾಂತರ ಸ್ವಾತಂತ್ರ ಹೊರಾಟಗಾರರ ತ್ಯಾಗ ಬಲಿದಾನದ ಫಲದಿಂದಾಗಿ ಇಂದು ನಾವು ಸ್ವತಂತ್ರ ಭಾರತವನ್ನು ಹೊಂದಿದ್ದೇವೆ. ಅವರು ಗಳಿಸಿಕೊಟ್ಟ ಸ್ವಾತಂತ್ರವನ್ನು ನಾವೇಲ್ಲ ಉಳಿಸಿ, ಅಭಿವೃದ್ದಿಪಥದತ್ತ ಕೊಂಡೊಯ್ಯಬೇಕಾದ ಜವಾಬ್ದಾರಿ ನಮ್ಮ, ನಿಮ್ಮೇಲರ ಮೇಲಿದೆ ಎಂದರು.
Join Our Telegram: https://t.me/dcgkannada
ಇದೊಂದು ದಿನ ನಮ್ಮ ಪೂರ್ವಜರನ್ನು ನೆನಪಿಸಿಕೊಂಡರೆ ಸಾಲದು ಪ್ರತಿ ನಿತ್ಯ ಆ ಮಹಾನುಭಾವರನ್ನು ನೆನೆದು ನಮ್ಮ ನಮ್ಮ ಕೆಲಸಕ್ಕೆ ಅಣಿಯಾಗಬೇಕು, ಅಲ್ಲದೆ ಅವರು ತಂದುಕೊಟ್ಟ ಸ್ವಾತಂತ್ಯ ಕ್ಕೆ ಪ್ರತಿಯಾಗಿ ನಮ್ಮ ಸುತ್ತಮುತ್ತಲಿನ ಪ್ರದೇಶ, ಓಣಿ, ನಗರವನ್ನು ಸ್ವಛವಾಗಿರಿಸಿದರೆ ನಮ್ಮ ಪೂರ್ವಜರಿಗೆ ಗೌರವನೀಡಿದಂತಾಗುತ್ತದೆ ಎಂದು ಹೇಳಿದರು.
ಈ ವೇಳೆ ಪುಟ್ಟ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಗಳಲ್ಲಿ ನೋಡುಗರ ಗಮನಸೆಳೆದರು.
ಇದನ್ನೂ ಓದಿ: Mudhol: ಬೇಡರ ಊರಲ್ಲಿ ಮಧ್ಯರಾತ್ರಿ ಧ್ವಜಾರೋಹಣ
ಧಜಾರೋಹಣ ಕಾರ್ಯಕ್ರಮದಲ್ಲಿ ಸರಕಾರಿ ಕೇಂದ್ರ ಶಾಲೆಯ ಹಾಗೂ ಮೌಲಾನಾ ಆಝಾದ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು, ನಗರ ಸಭೆ ಸದಸ್ಯರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.