ಮುಂಬೈ: ಜಿಯೋ (Jio) ಬಳಕೆದಾರರಿಗೆ ಇದೇ ದೀಪಾವಳಿಯಿಂದ ಉಚಿತವಾಗಿ 100gb ಕ್ಲಡ್ ಸಂಗ್ರಹಣೆಯನ್ನು ಕೊಡುಗೆ ನೀಡುವುದಾಗಿ ರಿಲಯನ್ಸ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ಘೋಷಣೆ ಮಾಡಿದ್ದಾರೆ.
Jion Our Telegram: https://t.me/dcgkannada
ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಫೋಟೋ, ವಿಡಿಯೋ ಹಾಗೂ ವಿವಿಧ ಡಿಜಿಟಲ್ ದಾಖಲೆ ಸಂಗ್ರಹಿಸಿ ಇಡಬಹುದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 47ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುವಾರ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ (AI) ಸೇವೆಗಳ ಬಲಿಷ್ಠ ಪ್ಲಾಟ್‌ಫಾರ್ಮ್ ರೂಪಿಸಲು ಜಿಯೋ ಬೈನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೂಲಕ ಬಲಿಷ್ಠ ಎಐ ಸೇವೆಗಳನ್ನು ರೂಪಿಸುತ್ತೇವೆ. ‘ಎಐ ಎವೆರಿವೇರ್ ಫಾರ್ ಎವರಿವನ್’ ಎಂಬ ಪರಿಕಲ್ಪನೆಯಲ್ಲಿ ಇದನ್ನು ಪ್ರಾರಂಭಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಜಾಮ್‌ನಗರದಲ್ಲಿ ಎಐ ಸಿದ್ಧ ಡೇಟಾ ಕೇಂದ್ರವನ್ನು ಸ್ಥಾಪಿಸಲು ಯೋಚಿಸಿದ್ದೇವೆ. ಇದು ಸಂಪೂರ್ಣ ವಾಗಿ ರಿಲಯನ್ಸ್ ಹಸಿರು ಶಕ್ತಿಯಿಂದ ಚಾಲಿತವಾಗುತ್ತದೆ. ಭಾರತದಲ್ಲಿಯೇ ವಿಶ್ವದ ಅತ್ಯಂತ ಕೈಗೆಟುಕುವ ಎಐ ಇಂಟರ್ ಫೇಸಿಂಗ್ ಸೃಷ್ಟಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Green gram: ಇಂದಿನಿಂದ ಹೆಸರು ಕಾಳು ಖರೀದಿ ಆರಂಭ
ಜಿಯೋ (Jio) ಅಧ್ಯಕ್ಷ ಆಕಾಶ್ ಅಂಬಾನಿ ಹಲವಾರು ಹೊಸ ಎಐ ಸೇವೆಗಳನ್ನು ಘೋಷಿಸಿದ್ದಾರೆ. ಇದು ಜಿಯೋ ಟಿವಿಒಎಸ್, ಹಲೋಜಿಯೋ, ಜಿಯೋ ಐಒಟಿ ಸಲ್ಯೂಷನ್, ಜಿಯೋ ಹೋಮ್ ಅಪ್ಲಿಕೇಷನ್ ಮತ್ತು ಜಿಯೋ ಪೋನ್ ಕಾಲ್ ಎಐ ಅನ್ನು ಸಹ ಒಳಗೊಂಡಿದೆ.