ರಾಮನಗರ: ಪಕ್ಕದ ಮನೆಯ ಮಗುವನ್ನೇ ಕಿಡ್ನಾಪ್ (kidnap case) ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟ ಕಿರಾತಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಮಂಜುನಾಥ ನಗರದ ಸಂತೋಷ ಎಂಬುವವರ 6 ವರ್ಷದ ಹೆಣ್ಣುಮಗುವನ್ನು ಪಕ್ಕದ ಮನೆಯ ದರ್ಶನ್ (22) ಕಿಡ್ನಾಪ್ ಮಾಡಿ ಮಗುವಿನ ಬಾಯಿ, ಕೈ, ಕಾಲಿಗೆ ಪ್ಲಾಸ್ಟರ್ ಸುತ್ತಿ ಬಂಧಿಸಿಟ್ಟಿದ್ದು 2ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ ಎನ್ನಲಾಗಿದೆ. ಪೋಷಕರು ಸ್ಥಳೀಯರ ಸಹಾಯದಿಂದ ಮಗುವನ್ನು ಹುಡುಕಿಕೊಂಡು ಹೋದಾಗ ರಾಮನಗರ ಬೋಳಪ್ಪನ ಕೆರೆ ಬಳಿ ಮಗು ಪತ್ತೆಯಾಗಿದ್ದು ಮಗುವಿನ ರಕ್ಷಣೆ ಮಾಡಿದ ಸ್ಥಳೀಯರು, ಬಳಿಕ ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Rameshwaram cafe blast: ಬಿಜೆಪಿ ಕಚೇರಿ ಸ್ಫೋಟಕ್ಕೆ ಯತ್ನ!
ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.