ಕೊಪ್ಪಳ: ಗೂಳಿಯೊಂದು ಪ್ರತಿ ದಿನ ದೇವಾಲಯದ ಪ್ರದಕ್ಷಿಣೆ ಹಾಕುವ ಮೂಲಕ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
ಹೌದು, ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿರುವ ಯರಡೋಣಾ ಗ್ರಾಮದಲ್ಲಿರುವ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಗೂಳಿಯೊಂದು ಕಳೆದ ನಾಲ್ಕು ದಿನಗಳಿಂದ ಪ್ರತಿದಿನ ರಾತ್ರಿ ಗುಡಿಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದೆ. ಇದನ್ನು ಕಂಡ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.
Join Out Telegram: https://t.me/dcgkannada
ಈ ಗೂಳಿ ಗ್ರಾಮದ ನಿವಾಸಿಗಳು ಸಾಕಿದ್ದಲ್ಲ. ಊರವರು ಹೇಳುವ ಪ್ರಕಾರ ಗ್ರಾಮದ ಆರಾಧ್ಯ ದೈವ ಶ್ರೀ ಮುರಡಬಸವೇಶ್ವರ ದೇವಸ್ಥಾನಕ್ಕೆ ಬಿಟ್ಟಿರುವ ಗೂಳಿಯಾಗಿದೆ. ಇದು ಪ್ರದಕ್ಷಿಣೆ ಹಾಕುಬ ಮೂಲಕ ಗ್ರಾಮ ದೇವತೆ ಗೆ ಭಕ್ತಿ ಅರ್ಪಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಉತ್ತರ ಕರ್ನಾಟಕದಲ್ಲಿ ಗೂಳಿಗಳನ್ನು ದೇವರಿಗೆ ಬಿಡುವ ಪದ್ಧತಿ ಈಗಲೂ ಜಾರಿಯಲ್ಲಿದೆ. ಹಾಗೆ ದೇವರಿಗೆ ಬಿಟ್ಟ ಗೂಳಿಗಳ ಯೋಗಕ್ಷೇಮ ಆಯಾ ಊರವರು ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: Vijay: ಖ್ಯಾತ ನಟ ರಾಜಕೀಯಕ್ಕೆ ಎಂಟ್ರಿ.. ಸ್ವಂತ ಪಕ್ಷದ ಧ್ವಜ, ಚಿಹ್ನೆ ಅನಾವರಣ.. (ವಿಡಿಯೋ ನೋಡಿ)
ಯರಡೋಣಾ ಗ್ರಾಮದಲ್ಲಿ ನಿನ್ನೆ ಊರಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದರೆ, ಗೂಳಿ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಬರೋಬ್ಬರಿ 35 ಸುತ್ತುಗಳನ್ನು ಹಾಕಿದೆಯಂತೆ. ಇದು ಗ್ರಾಮದಲ್ಲಿ ದೊಡ್ಡ ಸುದ್ದಿಯಾಗಿ, ಸ್ಥಳೀಯರು ಗುಂಪು ಗುಂಪಾಗಿ ಬಂದು ಗೂಳಿಯನ್ನು ನೋಡಲು ಬರುತ್ತಿದ್ದಾರೆ.