Vijay Famous actor enters politics.. Unveils own party's flag, symbol

Vijay: ಖ್ಯಾತ ನಟ ರಾಜಕೀಯಕ್ಕೆ‌ ಎಂಟ್ರಿ.. ಸ್ವಂತ ಪಕ್ಷದ ಧ್ವಜ, ಚಿಹ್ನೆ ಅನಾವರಣ.. (ವಿಡಿಯೋ ನೋಡಿ)

Vijay: ಖ್ಯಾತ ನಟ ರಾಜಕೀಯಕ್ಕೆ‌ ಎಂಟ್ರಿ.. ಸ್ವಂತ ಪಕ್ಷದ ಧ್ವಜ, ಚಿಹ್ನೆ ಅನಾವರಣ.. (ವಿಡಿಯೋ ನೋಡಿ)

ಚೆನ್ನೈ: ತಮಿಳುನಾಡು ರಾಜಕೀಯಕ್ಕೆ‌ ಅಧಿಕೃತವಾಗಿ ಮತ್ತೊಬ್ಬ ಖ್ಯಾತ ನಟ ( Vijay)ಎಂಟ್ರಿಯಾಗಿದ್ದು, ಇಂದು ಅಧಿಕೃತವಾಗಿ ಪಕ್ಷದ ಧ್ವಜ ಮತ್ತು ಲಾಂಛನವನ್ನು ಬಿಡುಗಡೆ ಮಾಡಿದ್ದಾರೆ.

Join Our Telegram: https://t.me/dcgkannada

ಹೌದು, ನಟ ವಿಜಯ್ (Vijay) ಇಂದು ತಮ್ಮ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡುವ ಮೂಲಕ ತಮ್ಮ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಚೆನ್ನೈನ ಪನಾಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಕೇಂದ್ರೀಕರಿಸಿರುವ ವಿಜಯ್ ಅವರ ರಾಜಕೀಯ ಪ್ರಯಾಣದ ಮೊದಲ ಪ್ರಮುಖ ಹೆಜ್ಜೆ ಇದಾಗಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.

ತಮಿಳಗ ವೆಟ್ರಿ ಕಳಗಂ ಪಕ್ಷವು ಭಾರತೀಯ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲಿರುವ ಮಧ್ಯೆಯೇ ವಿಜಯ್ ಅವರ ಚಿತ್ರವನ್ನು ಹೊಂದಿರುವ ಹಳದಿ ಧ್ವಜದ ಪೊಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವಿಜಯ್ ಫೆಬ್ರವರಿಯಲ್ಲಿ ತಮ್ಮ ಪಕ್ಷದ ಹೆಸರನ್ನು (ತಮಿಳಗ ವೆಟ್ರಿ ಕಳಗಂ) ಘೋಷಿಸಿದ್ದರು. ಇದೀಗ ಆನೆಗಳುಳ್ಳ ಕೆಂಪು ಹಳದಿ ಬಣ್ಣದ ಧ್ವಜವನ್ನು ವಿಜಯ್ ಅನಾವರಣಗೊಳಿಸಿದ್ದಾರೆ.

ಇದನ್ನೂ ಓದಿ: Kodimathada shree: ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ!

ಸೆಪ್ಟೆಂಬ‌ರ್ ಅಂತ್ಯದಲ್ಲಿ ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದಿಂದ ರ್ಯಾಲಿಯನ್ನು ಆಯೋಜಿಸಲಾಗಹವುದು ಎಂದು ಮೂಲಗಳು ತಿಳಿಸಿವೆ.

Latest News

ಇ.ಆರ್.ಟಿ ಅನುಷ್ಠಾನ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ

ಇ.ಆರ್.ಟಿ ಅನುಷ್ಠಾನ; ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ

ಧಾರವಾಡ, ಜೂನ್‌16: ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಧಾರವಾಡ, ಜೂನ್‌ 16: ಮಳೆಗಾಲದ ಸಂಕಷ್ಟ ಸಂದರ್ಭದಲ್ಲಿಯೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಾರ್ವಜನಿಕ ಸ್ನೇಹಿಯಾಗಿ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ನೀಟ್ ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನ ಆಕಾಶಗೆ 604 ಅಂಕ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ನೀಟ್

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ರಸ್ತೆ ಕಾಮಗಾರಿ ಅಪೂರ್ಣ : ಟೋಲ್ ಸಂಗ್ರಹಕ್ಕೆ ವಿರೋಧ

ಮುದ್ದೇಬಿಹಾಳ : ಹುನಗುಂದ ತಾಲ್ಲೂಕಿನಿಂದ ತಂಗಡಗಿ ಮುಖಾಂತರ ತಾಳಿಕೋಟಿಯವರೆಗೆ ನಿರ್ಮಿಸಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು

ಬಸವಸಾಗರ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬಸವಸಾಗರ ಜಲಾಶಯದಿಂದ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ನಾರಾಯಣಪುರ: ಬಸವಸಾಗರವು ಶೇ.83 ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಕ್ರಸ್ಟ್ ಗೇಟ್‌ಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಕ್ರಸ್ಟ್ ಗೇಟ್ ಮೂಲಕ 5 ಸಾವಿರ ಕ್ಯೂಸೆಕ್ ಹಾಗೂ ಎಂಪಿಸಿಎಲ್ ಖಾಸಗಿ ಜಲವಿದ್ಯುತ್ ಸ್ಥಾವರದಿಂದ 3 ಸಾವಿರ ಕ್ಯೂಸೆಕ್ ಸೇರಿ 8 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ ಒಳಹರಿವು ಸದ್ಯ 20 ಸಾವಿರ ಕ್ಯೂಸೆಕ್‌ನಷ್ಟಿದೆ

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ನಾರಾಯಣಪುರ: ನಾರಾಯಣಪುರ ಮಾರ್ಗವಾಗಿ ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹಾಗೂ ಕೊಡೇಕಲ್ ಮಾರ್ಗವಾಗಿ ತಾಳಿಕೋಟಿಗೆ ಹೊಸ ಬಸ್ ಸಂಚಾರ ಶನಿವಾರ ಯಾದಗಿರಿ ಸಾರಿಗೆ ಡಿಸಿ (ಡಿವಿಜನಲ್ ಕಂಟ್ರೋಲರ್) ಅವರಿಗೆ ಬರೆದ ಮನವಿಯನ್ನು ಸಾರಿಗೆ ನಿಯಂತ್ರಕ ಐ.ಎ ಕರಣಿ ಅವರಿಗೆ ಗ್ರಾಮಸ್ಥರ ಸಲ್ಲಿಸಿದರು. ಈ ವೇಳೆ ಮುಖಂಡ ಸಂಗಮೇಶ ತಾಳಿಕೋಟಿ ಮಾತನಾಡಿ ಜಿಲ್ಲೆಯ ಗಡಿಗ್ರಾಮವಾಗಿರುವನಾರಾಯಣಪುರ ಸೇರಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಗ್ರಾಮಸ್ಥರಿಗೆ ರಾತ್ರಿ ವೇಳೆ ನಾರಾಯಣಪುರ ಮಾರ್ಗವಾಗಿ ಬಸ್ಸುಗಳ ಸಂಚಾರ ಇಲ್ಲದೆ