ಕೊಪ್ಪಳ: ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಕುಕನೂರು ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ವಿವಾಹ ಪೂರ್ವದಿಂದಲೂ ಸಂಬಂಧಿಕರೇ ಆಗಿದ್ದ ಕೊಲೆ ಆರೋಪಿ ಅರಕೇರಿ ಗ್ರಾಮದ ದೇವರಡ್ಡೆಪ್ಪ ಭಾವಿಕಟ್ಟಿ ಹಾಗೂ ಗೀತಾ (25) ಆರು ವರ್ಷಗಳ ಹಿಂದೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು.
ಮಕ್ಕಳಾಗದ ಕಾರಣಕ್ಕೆ ಅವರ ನಡುವೆ ಹಲವು ಬಾರಿ ವಾದ, ಸಂಘರ್ಷ. ಆಗಿತ್ತು. ಇದೇ ರೀತಿ ಸೆ. 7ರಂದು ತಡರಾತ್ರಿ ತಮ್ಮ ಮನೆಯಲ್ಲಿ ಸಂಘರ್ಷ ಶುರುವಾಗಿದ್ದು, ಪತ್ನಿಗೆ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಪತಿ ಗಾಯಗೊಳಿಸಿ ಕೊಲೆ ಮಾಡಿದ್ದಾನೆ ಎಂದು ಮೃತ ಗೀತಾ ಅವರ ಸಹೋದರ ಸಿದ್ದರೆಡ್ಡಿ ಗಿರಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ.
ಆರೋಪಿ, ಅವರ ತಂದೆ ಮಲ್ಲಾರಡ್ಡೆಪ್ಪ ಭಾವಿಕಟ್ಟಿ ಹಾಗೂ ಇತರರು ಗೀತಾ ಅವರ ಪೋಷಕರಿಗೆ ಸುಳ್ಳುಹೇಳಿ ಅವಸರದಿಂದಲೇ ಮೃತದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.
ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೀತಾ ಅವರ ತಂದೆ ಈಶಪ್ಪ ‘ಮಾವನ ಮಗನಿಗೇ ಮಗಳನ್ನು ಕೊಟ್ಟಿದ್ದೆ. ಎರಡು ದಿನಗಳ ಹಿಂದೆ ರಾತ್ರಿ ನಮ್ಮ ಮನೆಗೆ ಬಂದು ಊಟ ಮಾಡಿ ಗಂಡನ ಮನೆಗೆ ಹೋಗಿದ್ದಳು. ರಾತ್ರಿ ವೇಳೆ ಕುಡಿದು ಬಂದ ಗಂಡ ಆಕೆಯನ್ನು ಹೊಡೆದು ಕೊಂದಿದ್ದಾನೆ. ಆಕೆಗೆ ಮಕ್ಕಳಾಗಿಲ್ಲ ಎನ್ನುವ ಒಂದು ಕಾರಣಕ್ಕೆ ಆಕೆಯನ್ನು ಕೊಂದಿದ್ದಾನೆ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Viral news: ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ..!
ಘಟನೆ ಸಂಬಂಧ ಅಪ್ಪ ಹಾಗೂ ಮಗನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.