ಮುದ್ದೇಬಿಹಾಳ : ಕೋಲ್ಕತ್ತಾ ನಗರದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ತರಬೇತಿ ಅವಧಿಯಲ್ಲಿ ಅತ್ಯಾಚಾರ ಎಸಗಿ ಹತ್ಯೆ ಹಾಗೂ ಉತ್ತರಾಖಂಡ ರಾಜ್ಯದ ರುದ್ರಾಪೂರದಲ್ಲಿ ನರ್ಸ್ ಒಬ್ಬರನ್ನು ಅತ್ಯಾಚಾರ ಮಾಡಿ ಹತ್ಯೆಗೈದಿರುವ ಘಟನೆಯನ್ನು ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಕರ್ನಾಟಕ ಮುಸ್ಲಿಂ ಫೋರಂ ಸಂಘಟನೆಯಿಂದ ಮೌನವಾಗಿ ಪ್ರತಿಭಟನೆ ನಡೆಸಲಾಯಿತು.
Join Our Telegram: https://t.me/dcgkannada
ಪಟ್ಟಣದ ಕಿಲ್ಲಾದ ಟಿಪ್ಪು ಸುಲ್ತಾನ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಹಾಯ್ದು ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಮೌನವಾಗಿಯೇ ಹೊರ ಹಾಕಿದರು.
ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಾತನಾಡಿದ ಡಾ.ಎ.ಎಂ.ಮುಲ್ಲಾ, ಇಂತಹ ಘಟನೆಗಳು ದೇಶದಲ್ಲಿ ಮಹಿಳೆಯರು ಅಸುರಕ್ಷಿತ ಎಂಬ ಭಾವನೆಗೆ ಮತ್ತಷ್ಟು ಸಾಕ್ಷಿ ಒದಗಿಸುತ್ತವೆ.ದೇಶದಲ್ಲಿ ಬೇಟಿ ಬಚಾವ್ ಬೇಟಿ ಪಡಾವ್ ಎಂಬ ಘೋಷವಾಕ್ಯ ಇದ್ದರೂ ಬೇಟಿ ಬಚಾವ್ ಆಗದೇ ಇರುವುದು ದುರ್ದೈವ.ಅಲ್ಲಿಯ ಸರ್ಕಾರದ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದು ಅಲ್ಲಿನ ಸರ್ಕಾರದಲ್ಲಿರುವ ಜನಪ್ರತಿನಿಧಿಗಳು ವಿವೇಚನೆ ಇಲ್ಲದ ವ್ಯಕ್ತಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ಜೀವ ಕಾಪಾಡುವ ವೈದ್ಯರ ಜೀವಕ್ಕೆ ಇಲ್ಲಿ ಭದ್ರತೆ ಇಲ್ಲದಂತಾಗಿದೆ. ಇಂತಹ ಅತ್ಯಾಚಾರ ಎಸಗುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಅತ್ಯಾಚಾರಿಗಳಲ್ಲಿ ಶಿಕ್ಷೆಯ ಬಗ್ಗೆ ಭಯ ಹುಟ್ಟಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಸಲ್ಲಿಸಲಾಯಿತು.
ಮುಸ್ಲಿಂ ಫೋರಂ ಅಧ್ಯಕ್ಷ ಡಿ.ಎಂ.ಚೌದ್ರಿ, ಅಬ್ದುಲಜಬ್ಬಾರ ಗೋಲಂದಾಜ,ಪುರಸಭೆ ಸದಸ್ಯರಾದ ಮಹೆಬೂಬ ಗೊಳಸಂಗಿ,ರಿಯಾಜ್ ನಾಯ್ಕೋಡಿ, ಮೌಲಾನಾ ಅಲ್ಲಾಭಕ್ಷö್ಯ ಖಾಜಿ, ಹುಸೇನ್ ಮುಲ್ಲಾ, ಹುಸೇನ ಮೌಲಾನಾ, ಮುನ್ನಾ ಮಕಾನದಾರ, ಸಾಹೇಬಲಾಲ ದೇಸಾಯಿ, ರಫೀಕ ಜಾನ್ವೇಕರ, ರಫೀಕ ನಾಗರಾಳ, ಅಬ್ದುಲ ಜಬ್ಬಾರ ಮಕಾನದಾರ ಮೊದಲಾದವರು ಇದ್ದರು.
ಇದನ್ನೂ ಓದಿ: ಆ.24 ರಂದು ಕೆಯುಸಿ ಬ್ಯಾಂಕ್‌ನ 65ನೇ ವಾರ್ಷಿಕ ಮಹಾಸಭೆ
ಪಿಎಸ್‌ಐ ಸಂಜಯ ತಿಪರೆಡ್ಡಿ ಹಾಗೂ ಸಿಬ್ಬಂದಿ ಭದ್ರತೆ ಒದಗಿಸಿದ್ದರು.