ಗಂಗಾವತಿ : ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣವಾದ ಪಂಪಾ ಸರೋವರದಲ್ಲಿ ನಿನ್ನೆ ರಾತ್ರಿ ಚಿರತೆ ಹಾಗೂ ಕರಡಿ ಪ್ರತ್ಯಕ್ಷವಾದ ಘಟನೆ ಜರುಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಐತಿಹಾಸಿಕ ರಾಮಾಯಣದಲ್ಲಿ ಉಲ್ಲೇಖ ಇರುವ ಕಿಷ್ಕಿಂಧೆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಪಂಪಾ ಸರೋವರದಲ್ಲಿ ಎರಡು ದಿನಗಳ ಹಿಂದೆ ಚಿರತೆ ಹಾಗೂ ಕರಡಿ ಪ್ರತ್ಯಕ್ಷವಾಗಿದ್ದ ಕ್ಷೇತ್ರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಭಯದ ವಾತಾವರಣ ಉಂಟಾಗಿದೆ.
ಪ್ರತಿದಿನ ಸಾವಿರಾರು ಭಕ್ತರು ಬರುವ ಈ ಪ್ರದೇಶದಲ್ಲಿ ಚಿರತೆ, ಕರಡಿಗಳ ಪ್ರತ್ಯಕ್ಷವಾಗಿ ನಿನ್ನೆ ತಡರಾತ್ರಿ ದೇವಸ್ಥಾನದ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ಯುವ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ದೇವಸ್ಥಾನದ ಗರ್ಭಗುಡಿಗೆ ಆಹಾರ ಅರಸಿ ಬಂದ ಕರಡಿಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ವಿಘ್ನೇಶ್ವರ ಮೂರ್ತಿ ವಿಸರ್ಜನೆ ಡಿಜೆ ಕುಣಿತ : ಪಟಾಕಿ ಸಿಡಿದು ಅಂಧನಾದ ಯುವಕ
ಈ ಪಂಪಾಸರೋವರದ ಲಕ್ಷ್ಮಿ ದೇಗುಲದ ಮೂರುಕಡೆ ಕಲ್ಲು ಬಂಡೆಗಳ ನೊಳಗೊಂಡು ಮಧ್ಯದಲ್ಲಿ ಇದರು ಕಾರಣ ಸಂಬಂಧಿಸಿದ ಇಲಾಖೆಯು ಕಾಡು ಪ್ರಾಣಿಗಳಿಂದ ಅಗುವ ಅನಾಹುತ ಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ.
ಕಿಷ್ಕಿಂಧೆಯ ಪಂಪಾ ಸರೋವರದಲ್ಲಿ ಚಿರತೆ, ಜಾಂಬವಂತ ಪ್ರತ್ಯಕ್ಷ pic.twitter.com/WQFdXzBAj0
— dcgkannada (@dcgkannada) September 12, 2024