ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರಂಭಗೊಂಡಿರುವ ಕರೇಕಲ್ಲ ಪಾಟೀಲ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಿಂದ ಬಡವರಿಗೆ ಅನುಕೂಲ ಕಲ್ಪಿಸುವ ಕಾರ್ಯ ಆಗಬೇಕು ಎಂದು ಅಂಕಲಿಮಠದ ವೀರಭದ್ರ ಸ್ವಾಮೀಜಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಪಟ್ಟಣದಲ್ಲಿ ನೂತನ ಕರೇಕಲ್ಲ ಪಾಟೀಲ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮತ್ತು ಡಯಾಗ್ನಸ್ಟಿಕ್ ಸ್ಕ್ಯಾನ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊದಲಿನ ಆಹಾರ ಪದ್ಧತಿಯಿಂದ ಆರೋಗ್ಯದಿಂದ ಇದ್ದೇವು.ಆಧುನಿಕ ಕಾಲದಲ್ಲಿ ಆಹಾರ ಪದ್ಧತಿಯಿಂದ ಹಲವು ಕಾಯಿಲೆಗಳು ಬರುತ್ತಿವೆ. ಸಿರಿವಂತರಿಗೆ ತುಸು ತುಟ್ಟಿ, ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯವ ವ್ಯವಸ್ಥೆ ಮಾಡಿ ಎಂದು ಸಲಹೆ ಮಾಡಿದರು.
ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಉತ್ತಮ ಜ್ಞಾನ ಹಾಗೂ ಕೌಶಲ್ಯ,ನುರಿತ ಅನುಭವಿಗಳಾಗಿರುವ ವೈದ್ಯರು ಇಲ್ಲಿ ಚಿಕಿತ್ಸೆಗೆ ದೊರೆಯುತ್ತಿರುವುದು ನಮ್ಮ ತಾಲ್ಲೂಕಿನ ಭಾಗ್ಯ ಎಂದರು.
ಇದನ್ನೂ ಓದಿ: ವಿಘ್ನೇಶ್ವರ ಮೂರ್ತಿ ವಿಸರ್ಜನೆ ಡಿಜೆ ಕುಣಿತ : ಪಟಾಕಿ ಸಿಡಿದು ಅಂಧನಾದ ಯುವಕ
ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ಶಿವಾಚಾರ್ಯರು, ದೇವರಹಿಪ್ಪರಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ, ವಿಜಯಪುರದ ಬಿದರಿ ಆಸ್ಪತ್ರೆ ವೈದ್ಯ ಡಾ.ಆರ್.ಸಿ.ಬಿದರಿ,ಕರೇಕಲ್ ಪಾಟೀಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ಬಸನಗೌಡ ಕರೇಕಲ್ಲ ಪಾಟೀಲ್, ಡಾ.ಅನುಪಮಾ ಕರೇಕಲ್ ಪಾಟೀಲ್, ಜೀರಲಭಾವಿ ಆನಂದಯ್ಯ ಸ್ವಾಮೀಜಿ, ಪರಮಾನಂದ ಸ್ವಾಮೀಜಿ, ಕೃಷ್ಣಾನಂದ ಶರಣರು, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಬಾಲಾಜಿ ಶುರ‍್ಸ್ ಚೇರಮನ್ ಹಣಮಂತಗೌಡ್ರು ಪಾಟೀಲ್, ನಿರ್ದೇಶಕರಾದ ರಾಹುಲಗೌಡ ಪಾಟೀಲ್, ಕೆಎಸ್‌ಆರ್‌ಟಿಸಿ ನಿವೃತ್ತ ಡಿಸಿ ವಿ.ಎಸ್.ಪಾಟೀಲ್, ವಿಜಯಪುರ ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಪಾಟೀಲ್, ಡಾ.ಶೈಲಜಾ ಬಿದರಿ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಜಯಪುರದ ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ್, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ನಿವೃತ್ತ ಡಿಎಚ್‌ಒ ಡಾ.ನೇತಾಜಿ ಬಿರಾದಾರ, ಅನುಗ್ರಹ ಆಸ್ಪತ್ರೆ ವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ, ಡಾ.ಅನಿಲಕುಮಾರ ಶೇಗುಣಸಿ, ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಡಾ.ಅಜಿತ ಕನಕರಡ್ಡಿ ಮೊದಲಾದವರು ಇದ್ದರು.