ಬಾಗಲಕೋಟೆ: ಈಜಲು ಹೋಗಿ ಕೃಷ್ಣ ನದಿಯಲ್ಲಿ (Krishna Rever) ಮುಳುಗಿ ಸಾವನ್ನಪ್ಪಿದ ಬಾಗಲಕೋಟೆ ಜಿಲ್ಲೆಯ ಕಂಕಣವಾಡಿ ಗ್ರಾಮದ ವ್ಯಕ್ತಿಯ ಕುಟುಂಬಸ್ಥರಿಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ್ (RB Timmapur) ಅವರು ಐದು ಲಕ್ಷ ರೂಪಾಯಿಗಳ ಪರಿಹಾರದ (compensation) ಚೆಕ್ ವಿತರಣೆ ಮಾಡಿದರು.
Join Our Telegram: https://t.me/dcgkannada
ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ವ್ಯಕ್ತಿ ಈಶ್ವರ ಸಿದ್ದಣ್ಣನವರ್ (74), ಕಳೆದ ಕೆಲವು ದಿನಗಳ ಹಿಂದೆ ಕೃಷ್ಣ ನದಿ ಉಕ್ಕಿ ಹರಿಯುತ್ತಿದ್ದ ಸಂದರ್ಭದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು.
ಹೀಗಾಗಿ, ಇಂದು ಸಚಿವ ಆರ್.ಬಿ.ತಿಮ್ಮಾಪೂರ್ ಮೃತ ವ್ಯಕ್ತಿಯ ಕುಟುಂಬಸ್ಥರನ್ನ ಭೇಟಿಯಾಗಿ ಸಾಂತ್ವನ ಹೇಳಿದರು. ನಂತರ ಪರಿಹಾರದ (Compensation) ಚೆಕ್ ವಿತರಣೆ ಮಾಡಿದರು.
ಇದನ್ನೂ ಓದಿ: Murder Case: ವಿಚ್ಛೇದನ ಕೇಳಿದ ಪತ್ನಿ.. ದೇಗುಲಕ್ಕೆ ಕರೆದುಕೊಂಡು ಹೋಗಿ ಹತ್ಯೆಗೈದ ಪತಿ..!
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಲರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.