ಗೊಳಸಂಗಿ: ಇದು ಪ್ರಸ್ತುತ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಸದ್ಯ ನಿಡಗುಂದಿ ತಾಲೂಕಿನ ಅಂಗಡಗೇರಿ ಗ್ರಾಮದ ರೈತರ ಹಾಗು ಯುವಕರ ಅಳಲು ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ನಮ್ಮೂರಿಗೂ ಕೂಡ ನೀರಾವರಿ ಭಾಗ್ಯ ಬರುತ್ತದೆ ನಮ್ಮ ಬದುಕು ಕೂಡ ಹಸನಾಗುತ್ತದೆ ಎಂದು ಕಾಯ್ದುಕೊಂಡು ಕುಳಿತ ರೈತರಿಗೆ ಇನ್ನೂ ದೊರೆಯದ ನೀರಾವರಿ ಭಾಗ್ಯ ಪಟ್ಟಣದಲ್ಲಿ ನಿರುದ್ಯೋಗವನ್ನು ಅನುಭವಿಸಿ ತಮ್ಮುರಿನತ್ತ ಬಂದು ವ್ಯವಸಾಯ ಕೃಷಿ ಮಾಡಬೇಕೆಂಬ ಹಂಬಲವಿರುವ ಅನೇಕ ಯುವಕರಲ್ಲಿ ನಮ್ಮೂರಿಗೆ ನೀರಾವರಿ ಭಾಗ್ಯ ಇಂದಲ್ಲ ನಾಳೆ ಲಭಿಸುವುದು ಎಂಬ ಆಶಾಭಾವನೆ ಇಟ್ಟುಕೊಂಡ ರೈತ ಯುವಕರ ಆಕ್ರೋಶದ ಕಟ್ಟೆ ಹೊಡೆಯುತ್ತಿದೆ.
ಜನಪ್ರತಿನಿಧಿಗಳ ಹಾಗೂ ಶಾಸಕರ ಮುತ್ತಿಗೆ ಹಾಕುವ ಕಾಲ ಇನ್ನೇನು ದೂರವಿಲ್ಲ ಎಂಬ ಭಾವನೆ ರೈತ ಹಾಗೂ ಯುವಕರಲ್ಲಿ ಮೂಡುತ್ತಿದೆ ಸುತ್ತಮುತ್ತಲ ಎಲ್ಲ ಗ್ರಾಮಗಳಿಗೂ ನೀರಾವರಿ ವ್ಯವಸ್ಥೆ ಆದರೂ ಕೂಡ ಅಂಗಡಗೇರಿ ಗ್ರಾಮದ ಪಾಲಿಗೆ ಇನ್ನೂ ಕನಸಾಗಿ ಉಳಿದ ನೀರಾವರಿ ವ್ಯವಸ್ಥೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಾವರಿಯ ಭಾಗ್ಯ ಇದೆ ತೆಲಗಿ, ಮಟ್ಟಿಹಾಳ,ಚೀರಲದಿನ್ನಿ, ಕೂಡಗಿ,ಮಸೂತಿ,ಮಲಘಾನ, ಸಿದ್ದನಾಥ ಕವಲಗಿ, ಅರಷಣಗಿ, ಗಣಿ, ಚೀಮ್ಮಲಗಿ, ವಂದಾಲ, ಈಗಾಗಲೇ ನೀರಾವರಿಯ ಭೂಮಿಗಳಾಗಿದ್ದು ಜಾಕ್ವೇಲ್ ಮುಖಾಂತರ ನೀರಾವರಿಯ ಸೌಲಭ್ಯವನ್ನು ಏಕೆ ಒದಗಿಸಲಾಗುತಿಲ್ಲ…..?
ಕಾರಣ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲವೋ ಅಥವಾ ನಮ್ಮೂರಿನ ಅಂಗಡಗೇರಿ ಗ್ರಾಮದ ಯಾವ ಜನಪ್ರತಿನಿಧಿಗಳಿಗೂ ಅರವಿಗೆ ಬಂದಿಲ್ಲವೊ ಅಥವಾ ನಮ್ಮ ಊರು ಅತ್ಯಂತ ಎತ್ತರ ಪ್ರದೇಶದಲ್ಲಿದೆಯೊ ಅಥವಾ ಶಾಸಕರಿಗೆ ಇಚ್ಚಾಶಕ್ತಿಯ ಕೊರತೆಯೋ ಅಥವಾ ನಮ್ಮ ಊರಿನಿಂದ ಯಾರೊಬ್ಬರೂ ಮತದಾನ ಮಾಡಿಲ್ಲವೆಂದು ಸಂಶಯವಿದೆಯಾ….? ಎಂಬುವುದನ್ನೂ ಗ್ರಾಮದ ಜನ ಚರ್ಚಿಸುತ್ತಿದ್ದಾರೆ.
ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೂ ನೀರಾವರಿಯಾದರೂ ಕೂಡಾ ನಮ್ಮೂರಿಗೆ ಇನ್ನೂ ನೀರಾವರಿಯ ಸೌಲಭ್ಯ ದೊರಕುತ್ತಿಲ್ಲ.ನೀರಾವರಿ ಆದರೆ ರೈತರ ಬಾಳು ಹಸನಾಗುವುದು ಎಂಬ ಆಶಾಭಾವನೆಯೊಂದಿಗೆ ರೈತರು ಇನ್ನೂ ಕಾಲಕಳೆಯುತ್ತಿದ್ದಾರೆ. ಇನ್ನೂ ಆದಷ್ಟು ಬೇಗ ಸರ್ಕಾರ ಮತ್ತು ಶಾಸಕರು ನಮ್ಮೂರಿನತ್ತ ಕಣ್ಣಾಯಿಸಿ ರೈತರ ಗೊಳು ಆಲಿಸುವರೆಂದು ಅಂದುಕೊಂಡಿದ್ದೇವೆ.ಈ ತಾರತಮ್ಯವನ್ನು ಹೋಗಲಾಡಿಸಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡುವುದನ್ನು ಬಿಟ್ಟು ಬಸವನ ಬಾಗೇವಾಡಿ ಹಾಗೂ ನಿಡುಗುಂದಿ ತಾಲೂಕು ಸಂಪೂರ್ಣ ನೀರಾವರಿ ಗ್ರಾಮಗಳನ್ನಾಗಿ ಮಾಡಬೇಕು ನೀರು ಪ್ರತಿಯೊಂದು ಗ್ರಾಮಕ್ಕೂ ಅತಿ ಅವಶ್ಯಕ ಕೃಷಿ ಜನ ಜಾನುವಾರುಗಳಿಗೆ. ನೀರು ಒದಗಿಸಿ ಆದಷ್ಟು ಬೇಗ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಕಣ್ಣು ಹಾಯಿಸಿ ಶೀಘ್ರದಲ್ಲಿ ಅಂಗಡಗೇರಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ನೀರಾವರಿ ಗೊಳಿಸಲು ಮತ್ತು ಅದಕ್ಕೆ ಬೇಕಾಗುವ ಎಲ್ಲಾ ತಯಾರಿಗಳನ್ನು ಶೀಘ್ರದಲ್ಲಿ ಮಾಡಬೇಕೆಂದು ರೈತರು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದಾರೆ.