ದೆಹಲಿ: ನಜಾಫ್‌ಗಢ ಪ್ರದೇಶದಲ್ಲಿ ಮಹಿಳೆಯೊಬ್ಬಳನ್ನು ತನ್ನ ಫಿಯಾನ್ಸಿ ಮತ್ತು ಆತನ ಸ್ನೇಹಿತನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಹತ್ಯೆ (Mother murder) ಮಾಡಿರುವ ಘಟನೆ ಸಂಭವಿಸಿದೆ.
ಆರೋಪಿಗಳನ್ನು ಮೋನಿಕಾ, ನರೇಲಾ ನಿವಾಸಿ ನವೀನ್ ಕುಮಾರ್ ಮತ್ತು ಆತನ ಸ್ನೇಹಿತ ಹರಿಯಾಣದ ಸೋನಿಪತ್‌ನ ಯೋಗೇಶ್ ಅಲಿಯಾಸ್ ಯೋಗಿ ಎಂದು ಗುರುತಿಸಲಾಗಿದೆ. ಸದ್ಯ, ಈ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Join Our Telegram: https://t.me/dcgkannada
ಮೋನಿಕಾ ಎಂಬ ಮಹಿಳೆ ತನ್ನ ತಾಯಿ (Mother murder) ಒಬ್ಬಂಟಿಯಾಗಿ ವಾಸವಿದ್ದು ನಿನ್ನೆಯಿಂದ ತಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅನುಮಾನಗೊಂಡ ಪೊಲೀಸರು ಮನೆಯ ಬಾಗಿಲು ಒಡೆದು ಪರಿಶೀಲಿಸಿದಾಗ ಮೋನಿಕಾ ತಾಯಿ ಸುಮಿತ್ರ ಕೊಲೆಯಾಗಿರುವುದು ಕಂಡುಬಂದಿದೆ.
ಅನುಮಾನಗೊಂಡು ತನಿಖೆ ಮುಂದುವರೆಸಿದ ಪೊಲೀಸರು ಕಟ್ಟಡದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Rape case: ಕರುನಾಡಿನಲ್ಲಿ ಮತ್ತೊಂದು ಕುಕೃತ್ಯ.. ತಾಯಿ ಕೊಲೆಗೈಯುವಾಗಿ ಹೆದರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ..!
ಈ ವೇಳೆ ಮುಂಜಾನೆ 2.18ರ ಸಮಯದಲ್ಲಿ ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರು ಫ್ಲಾಟ್ ಗೆ ಬಂದಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದೇ ಮೃತಳ ಪುತ್ರಿ ಮೋನಿಕಾ ಮತ್ತು ಆಕೆಯ ಸ್ನೇಹಿತರೇ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಪ್ರಾಥಮಿಕ ಹಂತದ ತನಿಖೆಯಲ್ಲಿ ಈ ಕೊಲೆಗೆ ಆಸ್ತಿ ಕಲಹ ಕಾರಣ ಎಂದು ಶಂಕಿಸಲಾಗಿದೆ. ಆದರೆ ತನಿಖೆ ಮುಗಿದ ಬಳಿಕವೇ ಸಂಪೂರ್ಣ ಮಾಹಿತಿ ಹೊರಬರಲಿದೆ ಎಂದು ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.