ಮುದ್ದೇಬಿಹಾಳ : ರಾಜ್ಯದ ನೂತನ ವಕೀಲರಿಗೆ ನೀಡುತ್ತಿರುವ ಮಾಸಿಕ ಸ್ಟೈಫಂಡ್ ಮತ್ತು ಅವಧಿಯನ್ನು ಹೆಚ್ಚಿಸಬೇಕು ಎಂದು ವಕೀಲ ಚೇತನ ಶಿವಶಿಂಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾರ್ಖಂಡ್ ಸರ್ಕಾರ ಅಲ್ಲಿನ ವಕೀಲರಿಗೆ ಮಾಸಿಕ ಐದು ಸಾವಿರ ರೂ. ಗಳನ್ನು ಐದು ವರ್ಷಗಳ ಕಾಲ ನೀಡುತ್ತಿದೆ. ವಕೀಲಿ ವೃತ್ತಿಯ ಆರಂಭಿಕ ಹಂತಗಳನ್ನು ಯುವ ವಕೀಲರು ಸಾಕಷ್ಟು ಕಷ್ಟದಲ್ಲಿ ಕಳೆಯುತ್ತಿದ್ದು ಸಧ್ಯ ನೀಡಲಾಗುತ್ತಿರುವ ರೂ. 2000/- ಸ್ಟೈಫಂಡ್ ಕೇವಲ 2 ವರ್ಷಗಳಿಗೆ ನೀಡಲಾಗುತ್ತಿದ್ದು ಅದು ನೆಪಮಾತ್ರಕ್ಕೆ ನೀಡಿದಂತಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಐಬಿಇ ಪರೀಕ್ಷೆಯೂ ಸಹ ಸರಿಯಾಗಿ ನಡೆಯದೇ ಯುವ ವಕೀಲರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಕೀಲಿ ವೃತ್ತಿಯನ್ನು ಬಿಡುತ್ತಿದ್ದಾರೆ. ಕೂಡಲೇ ಸರ್ಕಾರ ಯುವ ವಕೀಲರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Muddebihal: ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ಎಷ್ಟು…? 250, 350, 394 ಕೋಟಿ ರೂಪಾಯಿ..?!
ಸಿ.ಎಂ ಸಿದ್ಧರಾಮಯ್ಯನವರೂ ಕೂಡ ವಕೀಲರಾಗಿದ್ದು ಯುವ ವಕೀಲರ ಕಷ್ಟಗಳನ್ನು ಅರಿತಿದ್ದು ಯುವ ವಕೀಲರಿಗೆ ನೀಡುತ್ತಿರುವ ಸ್ಟೈಫಂಡ್ ಹೆಚ್ಚಿಸಬೇಕು ಎಂದು ವಿನಂತಿಸಿದ್ದಾರೆ.