ಮುಧೋಳ : ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಹಿನ್ನೆಲೆ ನಗರದಲ್ಲಿ ಪೌರ ಕಾರ್ಮಿಕರು ಹಾಗೂ ವಾಹನ ಚಾಲಕರು ಹರ್ ಘರ್ ತಿರಂಗಾ (harghar tiranga) ಅಭಿಯಾನದ ಅಂಗವಾಗಿ ಮ್ಯಾರಾಥಾನ್ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ನಡೆದ ಮ್ಯಾರಾಥಾನ್ ದಲ್ಲಿ ದೇಶಭಕ್ತಿ ಗೀತೆ ಹಾಗೂ ಭಾರತ ಮಾತಾಕಿ ಜೈ ಘೋಷಣೆ ಕೂಗುತ್ತ ಕಾರ್ಮಿಕರು ತಮ್ಮ ವಾಹನದೊಂದಿಗೆ ಪಾಲ್ಗೊಂಡರು.