ಗದಗ : ಮಾಜಿ ಪ್ರಿಯಕರನ ಜೊತೆ ಸೇರಿ ಪತಿಗೆ ಚಿಕನ್ ಮಸಾಲ ತಿನ್ನಿಸಿ ಕೊಲೆ ಮಾಡಿ (Murder case) ಅಪಘಾತದ ಕಥೆ ಕಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಈ ಪ್ರಕರಣವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಜುನಾಥ್ ಮೀಸಿ ಎಂಬಾತ ಕಳೆದ ಕೆಲ ದಿನಗಳ ಹಿಂದೆ ಗದಗ ಹೆದ್ದಾರಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಈ ವೇಳೆ ತನಿಖೆ ಆರಂಭಿಸಿದ ಗದಗ ಗ್ರಾಮೀಣ ಪೊಲೀಸರು ಮೃತನ ಪತ್ನಿ ಶಿವಮ್ಮನನ್ನು ವಿಚಾರಣೆ ವೇಳೆ ರಾತ್ರಿ ಮನೆಯಿಂದ ಹೋದವರು ಅಪಘಾತಗೊಂಡು ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಳು.
ಆದರೆ, ಇದ್ಯಾವುದನ್ನೂ ನಂಬದ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸುತ್ತಾರೆ. ಈ ವೇಳೆ ಖಾಕಿ ಪಡೆ ಶ್ವಾನ ನೇರವಾಗಿ ಮೃತನ ಪತ್ನಿಯ ಮನೆಗೆ ಕರೆದುಕೊಂಡು ಬಂದಿದೆ. ಬಳಿಕ ವಿಚಾರಣೆ ನಡೆಸಿದಾಗ ಒಂದೊಂದಾಗಿ ವಿಷಯ ಬಿಚ್ಚಿದ್ದಾಳೆ.
ಪತ್ನಿ ಶಿವಮ್ಮ ಮಂಜುನಾಥ್ ಯಲಬುರ್ಗಾ ಎಂತಾತನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಆದರೆ, ಅವರಿಬ್ಬರ ಮಾತುಕತೆಗೆ ಮೃತ ಮಂಜುನಾಥ್ ಅಡ್ಡಿಯಾಗುತ್ತಿದ್ದ. ಈ ಕಾರಣಕ್ಕೆ ಮಾಜಿ ಪ್ರೀಯತಮನ ಜೊತೆ ಸೇರಿ ಪಕ್ಕಾ ಪ್ಲಾನ್ ಮಾಡಿ ಪತಿಗೆ ಚಿಕನ್ ಮಸಾಲ ತಿನ್ನಿಸಿ ಬಳಿಕ ಹರಿತವಾದ ಆಯುಧದಿಂದ ಕೊಲೆ ಮಾಡಿ, ಬಳಿಕ ಹೆದ್ದಾರಿಯಲ್ಲಿ ಅಪಘಾತವಾಗಿದೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದರು.
ಇದನ್ನೂ ಓದಿ: Actor Darshan: ಗಳಗಳನೆ ಕಣ್ಣೀರಿಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಸದ್ಯ, ಈ ಘಟನೆಯ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪತ್ನಿಯ ಈ ಅನೈತಿಕ ಸಂಬಂಧಕ್ಕೆ ಅತ್ತ ಪತಿ ಮಸಣ ಸೇರಿದರೆ, ಇತ್ತ ನಾಲ್ಕು ವರ್ಷದ ಮಗು ಅನಾಥವಾಗಿದೆ.