ಟೆಂಪೋ ಟ್ರಾವೆಲ್ಸ್-ಕಾರು ಮುಖಾಮುಖಿ ಡಿಕ್ಕಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು,ನಾಲ್ವರಿಗೆ ಗಾಯ

ಟೆಂಪೋ ಟ್ರಾವೆಲ್ಸ್-ಕಾರು ಮುಖಾಮುಖಿ ಡಿಕ್ಕಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು,ನಾಲ್ವರಿಗೆ ಗಾಯ

ಮುದ್ದೇಬಿಹಾಳ : ಟೆಂಪೋ ಟ್ರಾವೆಲ್ಸ್ ಹಾಗೂ ಕಾರು ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಹೊಡೆದು ವಾಹನಗಳು ಪಲ್ಟಿ ಹೊಡೆದ ಪರಿಣಾಮ ಟೆಂಪೋಟ್ರಾವೆಲ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನುಳಿದ ನಾಲ್ವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಆಲಮಟ್ಟಿ ರಸ್ತೆಯಲ್ಲಿ ಬರುವ ಮಾದಿನಾಳ ಕ್ರಾಸ್‌ನಲ್ಲಿ ಗುರುವಾರ ನಡೆದಿದೆ.

ತಾಲ್ಲೂಕಿನ ಜಟ್ಟಗಿ ತಾಂಡಾದ ನಿವಾಸಿ ಕಸ್ತೂರಿಬಾಯಿ ಕೃಷ್ಣಪ್ಪ ಲಮಾಣಿ(50) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.ಟಿಟಿಯಲ್ಲಿ ಪ್ರಯಾಣಿಸುತ್ತಿದ್ದ ಗೆದ್ದಲಮರಿ ತಾಂಡಾದ ಗುರು ರಾಯಪ್ಪ ಲಮಾಣಿ, ಜಟ್ಟಗಿಯ ಬಸಪ್ಪ ಕರೆಪ್ಪ ಹರಿಂದ್ರಾಳ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಶೆಳ್ಳಗಿಯ ಚಂದ್ರಶೇಖರ ಭೀಮಣ್ಣ ಅಂಬಿಗೇರ ಹಾಗೂ ಸುರಪೂರದ ಸಂಜಯ ಮೋಹನಲಾಲ ಓಸ್ವಾಲ್ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ನಿಡಗುಂದಿಯಿAದ ಮುದ್ದೇಬಿಹಾಳದ ಕಡೆಗೆ ಬರುತ್ತಿದ್ದು ಮುದ್ದೇಬಿಹಾಳದಿಂದ ನಿಡಗುಂದಿ ಕಡೆಗೆ ಟೆಂಪೋಟ್ರಾವೆಲ್ಸ್ ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪಘಾತದ ರಭಸಕ್ಕೆ ಟಿಟಿ ವಾಹನ ಹಾಗೂ ಕಾರು ಎರಡು ಪಲ್ಟಿ ಹೊಡೆದಿವೆ.

ಘಟನಾ ಸ್ಥಳಕ್ಕೆ ಸಿಪಿಐ ಮೊಹ್ಮದ ಫಸಿವುದ್ದೀನ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ಭಂಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಪಘಾತ ಆಲಮಟ್ಟಿ-ಮುದ್ದೇಬಿಹಾಳ ರಸ್ತೆ ಮುಖ್ಯರಸ್ತೆಯಲ್ಲಿಯೇ ಸಂಭವಿಸಿದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ಪೊಲೀಸ್ ಸಿಬ್ಬಂದಿ ಮಹೇಶ ಹೂಗಾರ, ಮಹಾಂತೇಶ ಮುಳವಾಡ,ಶಾಂತಗೌಡ ಬನ್ನೆಟ್ಟಿ ನಿಯಂತ್ರಿಸಿದರು.ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest News

ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್‌ಗೆ ಹೊಸಮನಿ ನಾಮನಿರ್ದೇಶನ

ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್‌ಗೆ ಹೊಸಮನಿ ನಾಮನಿರ್ದೇಶನ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕು ಕುಂಟೋಜಿ ಗ್ರಾಮದ ನಿವಾಸಿ, ಬಸವನ ಬಾಗೇವಾಡಿ ತಾಲೂಕಿನ

ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ:                                            3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ: 3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ವಿಜಯಪುರ : ಇತ್ತೀಚಿಗೆ ಬೀಸಿದ‌‌ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ

ಇನ್ನೊಬ್ಬರ ಬೆಳವಣಿಗೆ ನೋಡಿ ಉರಿಯಬೇಡಿ-ಸಿದ್ಧಲಿಂಗ ದೇವರು

ಇನ್ನೊಬ್ಬರ ಬೆಳವಣಿಗೆ ನೋಡಿ ಉರಿಯಬೇಡಿ-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ದ್ವೇಷ ಮಾಡದೇ ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಿ.ಪರಸ್ಪರ ಕಾಲೆಳೆಯಬೇಡಿ.ದ್ವೇಷ ಮಾಡಬೇಡಿ.ಇನ್ನೊಬ್ಬರ

ಶ್ರದ್ಧೆಯಿಂದ ಹಬ್ಬದಾಚರಣೆಗಳಲ್ಲಿ ತೊಡಗಿ-ಪೇಶ ಇಮಾಮ್

ಶ್ರದ್ಧೆಯಿಂದ ಹಬ್ಬದಾಚರಣೆಗಳಲ್ಲಿ ತೊಡಗಿ-ಪೇಶ ಇಮಾಮ್

ಮುದ್ದೇಬಿಹಾಳ : ಯಾರು ರಂಜಾನ್ ಮಾಸದಲ್ಲಿ ಶ್ರದ್ಧೆಯಿಂದ ನಮಾಜ್, ರೋಜಾ, ಕುರಾನ್ ತಿಲಾವತ್ ಹಾಗೂ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಮತಕ್ಷೇತ್ರದ ತಾಳಿಕೋಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಜಾಗೆ ಗುರುತಿಸುವುದನ್ನು ಬಿಟ್ಟು ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ಎಂದು ಶಾಸಕ ಸಿ.ಎಸ್.ನಾಡಗೌಡ ಮಾಜಿ ಶಾಸಕ ನಡಹಳ್ಳಿ ಅವರಿಗೆ ಪ್ರಶ್ನಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಶಾಸಕರಾಗಿದ್ದುಕೊಂಡು ಐದು ವರ್ಷ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶ್ರಮಿಸದೇ ನಿದ್ದೆ ಮಾಡಿದ್ರಾ ನೀವು ? ಎಂದ ನಾಡಗೌಡ, ನಿಮಗೇಕೆ ಜಾಗೆ ಗುರುತಿಸಲಾಗಲಿಲ್ಲ.ನಿಮ್ಮಲ್ಲಿ ಇಚ್ಛಾಶಕ್ತಿ

ಮಾ.20 ರಂದು ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆ,ಸಾಮೂಹಿಕ ವಿವಾಹ

ಮಾ.20 ರಂದು ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆ,ಸಾಮೂಹಿಕ ವಿವಾಹ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.20 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿದೆ. ಜಾತ್ರೆಯ ನಿಮಿತ್ಯ ಬೆಳಗ್ಗೆ 8.30ಕ್ಕೆ 101 ಕುಂಭಮೇಳ ಹಾಗೂ ಅಗ್ನಿಪ್ರವೇಶ ಕಾರ್ಯಕ್ರಮ ಜರುಗಲಿದೆ.ಮದ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿವೆ. ಕಾರ್ಯಕ್ರಮದ ನೇತೃತ್ವ ದೇವಿ ಆರಾಧಕ ಶಾಂತಪ್ಪ ಪೂಜಾರಿ ಅವರು ವಹಿಸಿಕೊಂಡಿದ್ದು ದಿವ್ಯ ಸಾನಿಧ್ಯವನ್ನು ಬಿಲ್‌ಕೆರೂರನ ಸಿದ್ಧಲಿಂಗ ಶಿವಾಚಾರ್ಯರು, ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಾತಾ ಮಂಜಮ್ಮ ಜೋಗತಿ,ಬಸವನ ಬಾಗೇವಾಡಿಯ