ಲೇಖನ: ಹರೀಶ
ಪರಿಸರ ರಕ್ಷಣೆಗಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಎಂದು ಸರ್ಕಾರ ಹಾಗೂ ತಜ್ಞರು ಎಷ್ಟೇ ಹೇಳಿದರೂ ಮೂರ್ತಿಕಾರು ಮಾತ್ರ ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಗಣೇಶ (POP Ganesh) ಮೂರ್ತಿಗಳನ್ನ ತಯಾರು ಮಾಡುತ್ತಿದ್ದಾರೆ.
ಆದರೆ, ಇಲ್ಲೊಂದು ಕುಟುಂಬ ಮಾತ್ರ ಶತಮಾತ ಮಾನಗಳಿಂದಲೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಮಾಡಿಕೊಂಡು ಬಂದಿದೆ.
Join Our Telegram: https://t.me/dcgkannada
ಹೌದು, ಗಣೇಶಪುರದ ಭಾರತ ನಗರದ ಸಂತೋಷ ಚಿತ್ರಗಾರ ಕುಟುಂಬ ಶತಮಾನಗಳಿಂದಲೂ ಮಣ್ಣಿನ ಗಣೇಶ ಮೂರ್ತಿ ನಿರ್ಮಾಣ ಮಾಡಿಕೊಂಡು ಬಂದಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್(POP), ವಿವಿಧ ಬಗೆಯ ಗಣೇಶನ ಮೂರ್ತಿಗಳಿಗೆ ರಾಸಾಯನಿಕ ಬಣ್ಣಗಳನ್ನು ಲೇಪಿಸುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಈ ಕಾರಣ ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳತ್ತ ಒಲವು ಹೆಚ್ಚಿದೆ.
ಸಂಸ್ಥೆಗಳು, ಯುವಕರ ಸಂಘಗಳು ಸೇರಿ ಹಲವರು ಪರಿಸರ ಸ್ನೇಹಿ ಗಣೇಶ ತಯಾರಿಕರ ಬಳಿ ಬಂದು ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಇಡುತ್ತಿದ್ದಾರೆ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕ ಸಂತೋಷ ಚಿತ್ರಗಾರ.
ಪೂರ್ವಿಕರಿಂದ ಬಂದ ಕಲೆ:
ಇವರ ಪೂರ್ವಿಕರು ಮಣ್ಣಿನ ಗಣಪತಿ ಮೂರ್ತಿಯನ್ನೇ ಪೂಜಿಸುತ್ತಿದ್ದರು. ತಯಾರಿಸುತ್ತಿದ್ದರು. ಹೀಗಾಗಿ, ಸಂತೋಷ ಚಿತ್ರಗಾರ ಹಾಗೂ ಅವರ ಕುಟುಂಬದವರು ಸೇರಿ ಇದೀಗ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಮಾಡುತ್ತಿದ್ದಾರೆ.
ಒಂದು ತಿಂಗಳ ಮುಂಚಿತವಾಗಿ ನಿಮಗೆ ಬೇಕಾದ ರೀತಿಯ ಗಣೇಶ ಮೂರ್ತಿ ಮಾಡಲು ಹೇಳಿದ್ರೆ ಅದೇ ತರಹದ ಗಣೇಶ ಮೂರ್ತಿ ಮಾಡಿಕೊಡುತ್ತಾರೆ.
ನಿವೃತ್ತ ಸೈನಿಕ:
ಸಂತೋಷ ಚಿತ್ರಗಾರ ಅವರು ದೇಶ ಸೇವೆ ಮಾಡಿ,ಇದೀಗ ನಿವೃತ್ತಿ ಹೊಂದಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಸೈನ್ಯದಲ್ಲಿ ಇದ್ದಾಗಲೂ ಗಣೇಶ ಮೂರ್ತಿ ಮಾಡಲು ರಜೆ ಹಾಕಿ ಬಂದು ಪರಿಸರ ಸ್ನೇಹಿ ಗಣೇಶ ನಿರ್ಮಾಣ ಮಾಡುತ್ತಿದ್ದರು. ಇವರು ಡ್ರಾಯಿಂಗ್ ಕೋರ್ಸ್ ಹಾಗೂ ಮೂರ್ತಿ ತಯಾರಿಕೆ ಕೋರ್ಸ್ ಮುಗಿಸಿದ್ದಾರೆ. ಹೀಗಾಗಿ ಇವರಿಂದ ಸುಂದರ ಮೂರ್ತಿ ನಿರ್ಮಾಣವಾಗುತ್ತಿವೆ.
ಪಿಒಪಿಯಿಂದ ಜಲಚಲರಕ್ಕೆ ಕಂಟಕ:
ಪಿಒಪಿ ಬಣ್ಣದ ಗಣಪತಿ ಮೂರ್ತಿಗಳನ್ನು ಕೆರೆ, ಬಾವಿಗಳಿಗೆ ಬಿಡುವುದರಿಂದ ಅಲ್ಲಿನ ನೀರು ಕಲುಷಿತಗೊಳ್ಳುತ್ತದೆ. ಜಲಚರಗಳು ರಾಸಾಯನಿಕ ಬಣ್ಣದ ನೀರನ್ನು ಕುಡಿಯುವುದರಿಂದ ಪ್ರಾಣ ಕಳೆದುಕೊಳ್ಳುತ್ತವೆ. ಇದಷ್ಟೇ ಅಲ್ಲದೇ ಪಿಒಪಿ ಗಣೇಶ ಮೂರ್ತಿಗಳು ಕರಗದೇ ಹಾಗೇ ಉಳಿದು ನೀರಿ ಸೆಲೆ ನಾಶವಾಗಿತ್ತದೆ. ಹೀಗಾಗಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ.
ನಾನು ಹಾಗೂ ನನ್ನ ಕುಟುಂಬ ಅನೇಕ ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ಪೂರ್ವಜರು ಮಣ್ಣಿನ ಗಣೇಶ ತಯಾರಿ ಮಾಡುತ್ತಿದ್ದರು. ಇತ್ತೀಚಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಪರಿಸರ ಸ್ನೇಹಿ ಗಣೇಶ ತಯಾರಿ ತೃಪ್ತಿ ನೀಡಿದೆ ಎನ್ನುತ್ತಾರೆ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಚಿತ್ರಕಾರ ಸಂತೋಷ.

ಇದನ್ನೂ ಓದಿ: ಬೈಕ್‌ಗೆ ಕಾರು ತಾಗಿದ್ದಕ್ಕೆ ಪಬ್ ಬೌನ್ಸರ್‌ನಿಂದ ರಂಪಾಟ.. ಪೊಲೀಸರು ಟ್ವಿಟ್ ಮಾಡಿದ ವಿಡಿಯೋ ವೈರಲ್..!