ಮುದ್ದೇಬಿಹಾಳ : ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತು (ರಿ)ಬೆಂಗಳೂರು ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕೊಡಮಾಡುವ ಶಿಕ್ಷಕರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಗೆ ಹಡಲಗೇರಿಯ ವಸತಿಯುಕ್ತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ರವಿ ಕಟ್ಟಿಮನಿ ಆಯ್ಕೆಯಾಗಿದ್ದಾರೆ.
ವಿಜಯಪುರ ಜಿಲ್ಲೆ ತಿಡಗುಂದಿಯ ಕಾಯಕಯೋಗಿ ರಾಮಾಯಣ ಶಿಕ್ಷಣ ಸಂಸ್ಥೆಯ ಮಾನಸ ಗಂಗೋತ್ರಿ ವಸತಿ ಶಾಲೆಯಲ್ಲಿ ಫೆ.8 ರಂದು ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೆವಿಜಿಎಸ್ ವಿಜಯಪುರ ಜಿಲ್ಲಾಧ್ಯಕ್ಷ ಗಣೇಶ್ ಕಾಂಬಳೆ ಹಾಗೂ ಹೇಳಿದ್ದಾರೆ.







