Rampur Public Fund Festival Committee completes 58 years

ರಾಂಪುರ ಸಾರ್ವಜನಿಕ ಗಜಾನನ ಉತ್ಸವ ಸಮಿತಿಗೆ 58 ವರ್ಷ ಭರ್ತಿ

ರಾಂಪುರ ಸಾರ್ವಜನಿಕ ಗಜಾನನ ಉತ್ಸವ ಸಮಿತಿಗೆ 58 ವರ್ಷ ಭರ್ತಿ

ಮುಧೋಳ : ರನ್ನನಗರಿ ಮುಧೋಳದ ಗಣೇಶ ಉತ್ಸವಕ್ಕೆ ತನ್ನದೆಯಾದ ಇತಿಹಾಸ ಇದೆ. 58 ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರು ಸೇರಿ ಮೊದಲ ಭಾರಿಗೆ ಇಲ್ಲಿನ ರಾಂಪುರ ಗಲ್ಲಿಯಲ್ಲಿ ಹಿಂದು ಧರ್ಮ ಜಾಗೃತಿಗಾಗಿ ಸಾರ್ವಜನಿಕ ಗಣೇಶ ಉತ್ಸವ ಪ್ರಾರಂಭವಾಗಿದ್ದು ಒಂದು ವರ್ಷವೂ ಬಿಡದೆ ನಡೆದುಕೊಂಡು ಬಂದ ನಗರದ ಮೊದಲ ಮಹಾಗಣಪತಿ ಉತ್ಸವ ಇದಾಗಿದೆ.

ನಗರಕ್ಕೂ ಪಕ್ಕದ ಮಹಾರಾಷ್ಟ್ರದ ಕೆಲವು ನಗರಗಳಿಗೂ ಆರ್ಥಿಕ, ಸಾಮಾಜಿಕ, ಕೌಟಿಂಬಿಕ, ಧಾರ್ಮಿಕ ಅವಿನಾಭಾವ ಸಂಬಂಧಗಳಿಂದ ಇಲ್ಲಿ ಹೆಚ್ಚಾಗಿ ಮರಾಠಿ ಭಾಷಿಕರು ಹೆಚ್ಚಾಗಿದ್ದ ಸಮಯವದು, ನಗರದಿಂದ ಇಬ್ಬರು ವ್ಯಕ್ತಿಗಳು ಪ್ರತಿನಿತ್ಯ ಪುಣೆ ನಗರಕ್ಕೆ ವಿವಿದ ವಾಣಿಜ್ಯ ಸಾಮಗ್ರಿಗಳನ್ನು ಸಾಗಿಸಲು ಟ್ರಕ್ ಚಾಲಕರಾಗಿ ಕಾಯಕ ಮಾಡುವಾಗ ಮಹಾರಾಷ್ಟ್ರದ ಪುಣೆ ನಗರದಲ್ಲಿ ಭಾರಿ ಪ್ರಮಾಣದ ಸಾರ್ವಜನಿಕ ಗಣೇಶೋತ್ಸವ ನೋಡಿ ಬಂದು ನಮ್ಮೂರಲ್ಲಿ ಯಾಕೆ ಮಾಡಬಾರದು ಎಂದು ತಿರ್ಮಾನಿಸಿ ಪ್ರಾರಂಭಿಸಿದ ಸಾರ್ವಜನಿಕ ಗಜಾನನ ಉತ್ಸವ ಸಮಿತಿಯ ಗಣೇಶನೇ ಮುಧೋಳದ ಪ್ರಪ್ರಥಮ ಸಾರ್ವಜನಿಕ ಗಣಪತಿ.

ಕೇವಲ ಕೆಲವು ಸಮುದಾಯದ ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪನೆ ಮಾಡುವ ಈ ಸಂಪ್ರದಾಯವನ್ನು ಪ್ರಪ್ರಥಮವಾಗಿ ಸಾರ್ವಜನಿಕವಾಗಿ 1968ರಲ್ಲಿ ಪ್ರಾರಂಭಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶ ಉತ್ಸವ ನಂತರ ಕಡಿಮೆಯಾಗಿ ನಂತರ ಅರವತ್ತರ ದಶಕದಲ್ಲಿ ಮತ್ತೆ ಪ್ರಾರಂಭವಾಯಿತು. ಅಂತಹ ಸಮಯದಲ್ಲಿ ಮೊದಲಿನಿಂದಲು ಹಿಂದು ಸಂಪ್ರದಾಯ, ಸಂಸ್ಕೃತಿಗೆ ಹೆಚ್ಚು ಪ್ರಾದ್ಯಾನ್ಯತೆ ಕೊಡುತ್ತಿದ್ದ ಮುಧೋಳ ಸಂಸ್ಥಾನದ ಬಾಜಿರಾವ್, ವೆಂಕಟೇಶ, ಮಾಲೋಜಿರಾವ್ ಘೋರ್ಪಡೆ ರಾಜರ ಕುಟುಂಬ ಸ್ವತಂತ್ರ್ಯ ನಂತರವೂ ಈ ತರಹದ ಸಂಪ್ರದಾಯಕ್ಕೆ ಆಧ್ಯತೆ ನೀಡುತ್ತಾ ಬಂದಿದೆ.

ಇತಿಹಾಸ: ಟ್ರಕ್ ಚಾಲಕರಾಗಿದ್ದ ಇಬ್ಬರನ್ನು ಕರೆದುಕೊಂಡು ಮಹಾರಾಷ್ಟದ ಪುಣೆ ನಗರದಲ್ಲಿ ಗಣೇಶ ಉತ್ಸವ ನೋಡಿಕೊಂಡು ಬಂದ ರಾಂಪುರ ಗಲ್ಲಿಯ ಬ್ರಾಹ್ಮಣ ಹಾಗೂ ಮರಾಠಾ ಸಮುದಾಯ ಜೊತೆಗೆ ಇತರ ಹಿಂದು ಮುಖಂಡರು 1968ರಲ್ಲಿ ಪ್ರಥಮ ಭಾರಿಗೆ ಸಾರ್ವಜನಿಕ ಗಜಾನನ ಉತ್ಸವ ಸಮಿತಿ ಸ್ಥಾಪನೆ ಮಾಡಿ ಗಣೇಶ ಉತ್ಸವವನ್ನು ಬಹು ವಿಜೃಂಭಣೆಯಿಂದ ಪ್ರಾರಂಭಿಸಿದರು. ಮೊದಲ ವರ್ಷ ಐದು ದಿನದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಸಲುವಾಗಿ ಮುಷ್ಟಾನ ಭೋಜನವನ್ನು ಸಾರ್ವಜನಿಕರಿಗೆ ದಾರಿ ಹೋಕರಿಗೆ ಹಾಕಿ ಖ್ಯಾತಿ ಪಡೆದ ಈ ಸಮಿತಿ ಅಂದಿನಿಂದ ಇಂದಿನವರೆಗೆ ಏಳು ದಿನದ ಗಣೇಶ ಉತ್ಸವದ ವಿಸರ್ಜನ ಮುಂಚೆ ಅದೇ ಮೃಷ್ಠಾನ್ನ ಭೋಜವನನ್ನು ಹಾಕುತ್ತಾ ಬಂದಿದ್ದಾರೆ. ಈ ಗಣೇಶ ಉತ್ಸವದಲ್ಲಿ ಪ್ರಸಾದ ಸವಿಯದ ಮುಧೋಳಿಗರು ಇಲ್ಲ, ಎನ್ನಬಹುದಾದಷ್ಟು ಇಲ್ಲಿನ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ಇರುತ್ತದೆ.

ಮಹಾರಾಷ್ಟ್ರದ ಸಂಪ್ರದಾಯ ಹಾಗೂ ಸಂಘಟನೆ ಮತ್ತು ಹಿಂದು ಧರ್ಮದ ಉಳಿವಿಗಾಗಿ ಸ್ಥಾಪನೆಯಾದ ಈ ಗಣೇಶ ಉತ್ಸವ ಸಮಿತಿ ಅದರಂತೆ ಆ ಉದ್ದೇಶ ಈಡೇರಿಕೆಗಾಗಿ ಸಾಕಷ್ಟು ಯತ್ನಗಳು ನಡೆಯುತ್ತಾ ಬಂದಿವೆ. ಹೀಗಾಗಿ ಈ ಗಣೇಶ ಎಲ್ಲರಿಗೂ ಮಾದರಿಯಾಗಿದ್ದಾನೆ. ಜೊತೆಗೆ ತೆರಬಂಡಿ, ವಿದ್ಯಾರ್ಥಿಗಳ ನೃತ್ಯ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಸೇರಿದಂತೆ ಐವತ್ತು ವರ್ಷ ಮೇಲ್ಪಟ್ಟ ಹಿರಿಯರಿಗೆ ಸೈಕಲ್ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು ಐವತ್ತನೆಯ ವರ್ಷದ ಸಂಭ್ರಮಾಚರಣೆಯಲ್ಲಿ ಲೋಗೋ ಬಿಡುಗಡೆ ಕಾರ್ಯ ಪ್ರಾರಂಭವಾಗಿದ್ದು ಅಂದಿನಿಂದ ಇಂದಿನವರೆಗೆ ಮುಂಚಿತವಾಗಿ ಲೋಗೋ ಬಿಡುಗಡೆ ಕಾರ್ಯಕ್ರಮ ಜರುತ್ತದೆ. ಮುಂಬೈದಲ್ಲಿನ ಲಾಲಬಾಗ್ ರಾಜಾ ರೀತಿಯಲ್ಲಿ ಇಲ್ಲಿ ಡಬಲ್ ಶೇಟ್ ಗಣೇಶ ಸ್ಥಾಪನೆ ಸಾಮಾನ್ಯವಾಗಿದೆ.

ಸಂಘಟಿಕರು, ರಾಂಪುರ ಗಲ್ಲಿಯಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದರಿಂದ ಈ ಉತ್ಸವವನ್ನು ದಾಖಲಿಸಿ ಇಂದಿನವರೆಗೆ ನಡೆಸಿಕೊಂಡು ಬಂದಿರುವ ಅಣ್ಣಾರಾವ್ ಭಕ್ಷಿ, ಭೀಮರಾವ್ ಟಂಕಸಾಲಿ, ಮಾಧವರಾವ್ ಮಸೂರಕರ, ಬಾಬುರಾವ ಮಾನೆ, ಶಂಕರ ಘೋರ್ಫಡೆ, ರಾಘವೇಂದ್ರ ಭಕ್ಷಿ, ಡಾ.ಜಿ.ಎಸ್..ಬೀಡೆ, ಮಾಜಿ ಎಂ.ಪಿ ಎಸ್. ಟಿ. ಪಾಟೀಲ್ ರತ್ನಾಕರ ಮಸೂರಕರ ಅಂದು ಪ್ರಾರಂಭಿಸಿದ ಗಣೇಶ ಉತ್ಸವವನ್ನು ಅವರ ಕುಟುಂಬಸ್ತರು ಇಂದಿಗೂ ಈ ಗಲ್ಲಿಯ ಮುಖಂಡರು ಯುವಕರು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿರುತ್ತಾರೆ.

“ಹಿಂದು ಸಂಪ್ರದಾಯ,ಸಂಸ್ಕೃತಿ ಉಳಿದು ಬೆಳೆಯುವ ಸದುದ್ದೇಶದಿಂದ ಕಳೆದ ೫೮ ವರ್ಷಗಳಿಂದ ಈ ಗಣೇಶ ಉತ್ಸವ ಸಮಿತಿ ಕಾರ್ಯ ಮಾಡಿ ರಾಜ್ಯ ಮಟ್ಟದ ತೆರಬಂಡಿ,ಸೈಕಲ್ ರೇಶ ಸ್ಪರ್ಧೆಗನ್ನು ಆಯೋಜನೆ ಮಾಡುತ್ತಾ ಬಂದಿದೆ”
ವಸಂತ ಮಾನೆ
ವೆಂಕಟೇಶ ಗುಡೆಪ್ಪನವರ

Latest News

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?:                ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?: ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡುವಂತೆ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ:                   ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ: ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಮುದ್ದೇಬಿಹಾಳ : ಮನುಷ್ಯನಿಗೆ ದೈವ ಬಲದೊಂದಿಗೆ ಗುರುವಿನ ಅವಶ್ಯಕತೆ ಬಹಳವಿದೆ. ಇದರಿಂದಲೇ ಇಂದಿನ ಆಧುನಿಕ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಯರಝರಿ ಜಿಪಂ ಭಾಗದ ರೈತರು ಬುಧವಾರದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಶಾಸಕರು,ಸರಕಾರಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಳೆ ಕೊರತೆ ಇದೆ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ ಹೇಳಿಕೆಯನ್ನು ತಗೆದುಕೊಂಡರೋ ಗೊತ್ತಿಲ್ಲ.ಸದ್ಯಕ್ಕೆ ಮುಖ್ಯಮಂತ್ರಿಗಳು ಪತ್ರವ್ಯವಹಾರ ನಿಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದೇನೆ.ನನ್ನದು ಸಿದ್ಧಾಂತದ ಮೇಲೆ ಹೋರಾಟ ನಡೆಯುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ತಮ್ಮನ್ನು ಎದುರಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನನ್ನ ಮಾನಸಿಕ ಸ್ಥಿತಿ ಹೇಗಿದೆ ? ಎಂಬುದನ್ನು ಮತ್ತೊಬ್ಬರಿಂದ ಹೇಳಿಸಿಕೊಳ್ಳಬೇಕಾಗಿಲ್ಲ.ಮಾನಸಿಕ ಚಿಕಿತ್ಸೆಯ ಬಗ್ಗೆ ಕೊಟ್ಟಿರುವ ಮಾತಿಗೆ ನಾನು