ಕರಾಚಿ: ವ್ಯಕ್ತಿಯೊಬ್ಬ ಸಮಾಧಿ ಮಾಡಿದ ಮಹಿಳೆಯ ಶವವನ್ನು ಅಗೆದು ಅತ್ಯಾಚಾರವೆಸಗಿದ (Rape case) ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಮುಹಮ್ಮದ್ ಸಲೀಂ (40) ಎಂಬಾತನೇ ಈ ಕುಕೃತ್ಯಗೈದ ಆರೋಪಿ ಎಂದು ಗುರುತಿಸಿ, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಪಾಕಿಸ್ತಾನದ ಕೊರಂಗಿ ಸ್ಮಶಾನದಲ್ಲಿ ಈ ಘಟನೆ ನಡೆದಿದೆ. ಶಂಕಿತ ವ್ಯಕ್ತಿ ಸಮಾಧಿ ಅಗೆದು ಶವಕ್ಕೆ ಅತ್ಯಾಚಾರವೆಸಗಿದ್ದನ್ನು ಸ್ಥಳೀಯರು ಗಮನಿಸಿ, ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಮೃತ ತಾಯಿಯ ಮಗ ದೂರು ನೀಡಿದ್ದಾರೆ. ಈ ದೂರಿನ್ವಯ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Join Our Telegram: https://t.me/dcgkannada
ಗುರುವಾರ ಸಂಜೆ ತನ್ನ ತಾಯಿಯನ್ನು ಸ್ಮಶಾನದಲ್ಲಿ ಸಮಾಧಿ ಮಾಡಿರುವುದಾಗಿ ದೂರುದಾರರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಮಾತನಾಡಿ, ಆರೋಪಿಯು ನಾಲ್ವರು ಮಹಿಳೆಯರ ಶವಗಳ ಮೇಲೆ ಲೈಂಗಿಕ ದೌರ್ಜನ್ಯ (Rape case) ಎಸಗಿದ್ದನ್ನು ಬಹಿರಂಗಪಡಿಸಿದ್ದಾನೆ.
ಬಂಧಿತ ಶಂಕಿತನನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ರವಾಸಿಲಾಗಿದೆ.
ಮೃತ ಮಹಿಳೆಯ ಸಂಬಂಧಿಕರು ಮರು ಸಮಾಧಿ ಮಾಡಿದ್ದಾರೆ.
ಇದನ್ನೂ ಓದಿ: Accident: ಐದು ಜನರ ಜೀವ ಉಳಿಸಿದ ವಾಂತಿ..!
ಈ ಕುರಿತು ಹೆಚ್ಚಿನ ತನಿಖೆಗಾಗಿ ಶವವನ್ನು ಹೊರತೆಗೆಯಲು ಪೊಲೀಸರು ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಪಡೆಯಬೇಕು. 8 ವರ್ಷಗಳ ಹಿಂದೆ ಕೋರಂಗಿಯ ಸ್ಮಶಾನದಲ್ಲಿ ಇದೇ ರೀತಿಯ ಅಪರಾಧ ಎಸಗಿದ್ದಕ್ಕಾಗಿ ಶಂಕಿತ ವ್ಯಕ್ತಿಯನ್ನು ಜನರು ಹಿಡಿದಿದ್ದರು ಎಂದು ಮಾಹಿತಿ ನೀಡಿದ್ದಾರೆ.
Police arrested a 40-year-old Muslim Man Muhammad Saleem and booked him on digging up the grave of a recently-buried woman and Raping with the corpse, in a graveyard in Karachi. https://t.co/0pUysfhRON pic.twitter.com/6Yp0U0msIu
— Faraz Pervaiz (@FarazPervaiz3) August 10, 2024