ಮಂಗಳೂರು: ಪ್ರೇಮ ವೈಫಲ್ಯದಿಂದ ಯುವಕನೋರ್ವ ಯುವತಿಗೆ ಕತ್ತರಿಯಿಂದ ಇರಿದ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನಲ್ಲಿ (Alvas college) ಸಂಭವಿಸಿದೆ.
ತುಮಕೂರು ಮೂಲದ ಮಂಜುನಾಥ್ ಈ ಕುಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
Join Our Telegram: https://t.me/dcgkannada
ತನ್ನ ಪ್ರಮೇವನ್ನು ತಿರಸ್ಕರಿಸಿದ
ಪಿಯುಸಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಲು ಪ್ರಯ್ನಸಿದ ಘಟನೆ ಮೂಡಬಿದರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನಲ್ಲಿ (()Alvas college) ಘಟನೆ ನಡೆದಿದೆ.
ಮಂಜುನಾಥ್ ಆಳ್ವಾಸ್ ಕಾಲೇಜಿನ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಇದಕ್ಕೆ ಆಕೆ ಒಪ್ಪದ ಹಿನ್ನೆಲೆ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕೊಲೆ ಯತ್ನ ಆರೋಪದಡಿ ಪೊಲೀಸರು ಆರೋಪಿ ಮಂಜುನಾಥ್ ನನ್ನು ಬಂಧಿಸಿದ್ದಾರೆ.