ಮುದ್ದೇಬಿಹಾಳ : ಯುವಕರು ಗ್ರಾಮದಲ್ಲಿ ಬರೀ ಸಂಗೊಳ್ಳಿ ರಾಯಣ್ಣನ (Sangolli Rayanna) ಮೂರ್ತಿ ಇಟ್ಟು ಕಾರ್ಯಕ್ರಮ, ಜಯಂತಿ ಮಾಡದೇ ಅವರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ಸಿಡಿದೇಳುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸರೂರು-ಅಗತೀರ್ಥ ಹಾಲುಮತ ಗುರುಪೀಠದ ಶಾಂತಮಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗೋನಾಳ ಎಸ್.ಎಚ್. ಗ್ರಾಮದಲ್ಲಿ ಗುರುವಾರದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ (Sangolli rayanna) ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Join Our Telegram: https://t.me/dcgkannada
ಯುವಕರು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಸಮಾಜದ ಒಳ್ಳೆಯ ಕೆಲಸದ ಜೊತೆಗೆ ಕೈಜೋಡಿಸಬೇಕು.ಮೂಢನಂಬಿಕೆಗಳಿಗೆ ಜೋತು ಬೀಳಬೇಡಿ ಎಂದರು.
ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎನ್.ಮದರಿ ಮಾತನಾಡಿ, ರಾಯಣ್ಣನವರ ತ್ಯಾಗ ಬಲಿದಾನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದೆ.ಮೂರ್ತಿಗಳ ಪ್ರತಿಷ್ಠಾಪನೆಯ ಜೊತೆಗೆ ಅವರ ಧೈರ್ಯ,ಸಾಹಸದ ಗುಣಗಳು ಯುವಕರಲ್ಲಿ ಬರಬೇಕು ಎಂದರು.
ಇದನ್ನೂ ಓದಿ: Rain effect: ಧಾರಾಕಾರವಾಗಿ ಸುರಿದ ಮಳೆ.. ಹುನಗುಂದ ಮಾರುಕಟ್ಟೆ ಪ್ರದೇಶ ಜಲಾವೃತ..
ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಎಂ.ಎಚ್.ಹಾಲಣ್ಣವರ, ಡಾ. ಈರಗಂಟೆಪ್ಪ ತಳ್ಳೊಳ್ಳಿ,ಕೆ.ಆರ್. ಬಿರಾದಾರ ಅವರು ಮಾತನಾಡಿದರು.
ಡಾ.ಎಸ್.ಕೆ.ಹರನಾಳ ರಾಯಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬಿಜೆಪಿ ಮುಖಂಡ ಮಲಕೇಂದ್ರಾಯಗೌಡ ಪಾಟೀಲ,ವಕೀಲ ಎಚ್.ವಾಯ್.ಪಾಟೀಲ, ಸಂಗಮೇಶ ಗುಂಡಕನಾಳ, ಬಸವರಾಜ ಗುಳಬಾಳ, ಹಣಮಂತ ಕುರಿ,ಶಾಂತಪ್ಪ ಕಂಬಳಿ, ಎಸ್.ಎ. ಬಿರಾದಾರ, ಬಸವರಾಜ ಬಿರಾದಾರ(ಬಂಗಾರಗುಂಡ), ರೇಣುಕಾ ನಾಗಾವಿ ಹಲವರು ಇದ್ದರು.
ಶ್ರೀಶೈಲ್ ಹೂಗಾರ ನಿರೂಪಿಸಿದರು.