ಕುರೇಕನಾಳ ತಾಂಡಾ : ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಅರಿತು ಆತ್ಮಗೌರವವನ್ನು ಹೆಚ್ಚಿಸಿಕೊಂಡಾಗ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ ಎಂದು ಜೈರಾಮ್ ಹರವತ್ ಗೋರ್ ಸೇನಾ ಕುರೇಕನಾಳ ತಾಂಡಾ ಅಧ್ಯಕ್ಷರು. ಹೇಳಿದರು. ಸದ್ಗುರು ಸೇವಾಲಾಲರ ಮಾಹರಾಜರು ಬಂಜಾರ ಸಾಂಸ್ಕೃತಿಕ ಜಾಗೃತಿ ಬಗ್ಗೆ ಮಾತನಾಡಿದರು.
Join Our Telegram: https://t.me/dcgkannada
ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಹೊಂದಿದೆ. ಪ್ರತಿಯೊಬ್ಬ ಬಂಜಾರ ಗೋರ್ ಸೇನಾ ಗೋರ್ ಸಿಕವಾಡಿ ಸಂಘಟನೆಯಲ್ಲಿ ಬಂಜಾರ ಸಮಾಜದ ವಿದ್ಯಾವಂತ ಯುವಕರು ಈ ಸಂಘಂಟನೆಯ ಮೂಲಕ ನಮ್ಮ್ ಸಮಾಜದಲ್ಲಿ ನಡೆದುಬಂದ ಹಾದಿ, ಸಂಸ್ಕೃತಿ, ಪರಂಪರೆ ಅರಿವು ತಿಳಿಯುವಂತಾಗುತ್ತದೆ. ಹಾಗೆ ಗೋರ್ ಬಂಜಾರ ಸಮಾಜದ ಪ್ರತಿಯೊಬ್ಬರೂ ವಿದ್ಯಾವಂತರಾಗುವ ಮೂಲಕ ಸಮಾಜವನ್ನು ಉನ್ನತಿಗೆ ಕೊಂಡೊಯ್ಯಬೇಕು ಜೈ ರಾಮ್ ಹರವತ್ ಗೋರ್ ಸೇನಾ ಕುರೇಕನಾಳ ತಾಂಡಾ ಅಧ್ಯಕ್ಷರು ಹೇಳಿದರು.
ಇದನ್ನೂ ಓದಿ: Heart attack: ಸಿಎಂ ಪರ ಸುದ್ದಿಗೋಷ್ಠಿ ವೇಳೆ ಹೃದಯಾಘಾತ.. ಸ್ಥಳದಲ್ಲಿಯೇ ವ್ಯಕ್ತಿ ಓರ್ವ ದುರ್ಮರಣ..! Video
ಶ್ರವಣ ಮಾಸದ 30ದಿನ ಮನೆ ಮನೆಯಲ್ಲಿ ಸತಗರು ಸೇವಾಲಾಲ್ ಮಹಾರಾಜ ರ ಭೋಗ್ ಕಾರ್ಯಕ್ರಮ ನಡೆಯುತ್ತಿರುವದರಿಂದ ಶ್ರವಣ ಮಾಸದ ಪ್ರಯುಕ್ತ ಜೈರಾಮ್ ಹರವತ್ ಗೋರ್ ಸೇನಾ ಕುರೇಕನಾಳ ತಾಂಡಾ ಅಧ್ಯಕ್ಷರು ಮನೆಯ ಆವರಣದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಂಜಾರ ಸಮಾಜದ ಅನೇಕ ಲೇಖಕರು, ಬರಹಗಾರರು, ಅಂಕಣಕಾರರು, ಸಾಹಿತಿಗಳಿದ್ದರೂ ಅವರುಗಳನ್ನು ಕಡೆಗಣಿಸಲಾಗುತ್ತಿದೆ. ಅವರಿಗೆ ಸಿಗಬೇಕಾದ ಯೋಗ್ಯ ಸ್ಥಾನಮಾನಗಳು, ಗೌರವ ಪ್ರತಿಷ್ಟೆಗಳು ಸಿಗುತ್ತಿಲ್ಲ. ಬಂಜಾರ ಸಮುದಾಯಕ್ಕೆ ಸೇರಿದ ಶಾಸಕರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವರನ್ನು ನೇರವಾಗಿ ನೀವು ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸುವಂತಾಗಿದೆ ಎಂದರು.
ಚಂದು ಹರಾವತ್ ಅವರು ಬಂಜಾರ ಸಂಸ್ಕೃತಿ ಕುರಿತು ಮಾತನಾಡಿದರು. ನಮ್ಮ ತಾಯಂದಿರು ಮೊದಲು ನಮ್ಮ ಸಮಾಜದ ಬಗ್ಗೆ ಅರಿತರೆ ಸಾಕು ಸಮಾಜ ಬೆಳೆಯಲ್ಲೂ ಅಸಾಧ್ಯವಾಗುತ್ತದೆ ಇದು ತಿಳ್ಳಿಸಿದರು.
ಹರಿಕೃಷ್ಣ ಮೂಡ್, ಜೈ ರಾಮ್ ಹರವತ್, ಕೃಷ್ಣ್ ಜಾಧವ, ವಿನೋದ ಪವಾರ್, ಮಲಪ್ಪ ಪವಾರ್, ಸೀತಾಬಾಯಿ, ಪವಾರ್ ಬಾಲಚಂದ್ರ ಮೋತಿಲಾಲ್ ನಾಯಕ್, ಗೋಪಾಲ ಹರಾವತ್, ಸಂತೋಷ ಪವಾರ್ ಮತ್ತಿತರರು ಇದ್ದರು