ಚೆನ್ನೈ: ಆಡಳಿತರೂಢ ಡಿಎಂಕೆಗೆ ಬಿಜೆಪಿ (BJP) ಜೊತೆಗೆ ಯಾವುದೇ ರಹಸ್ಯ ಸಂಬಂಧದ ಅಗತ್ಯವಿಲ್ಲ ಎಂದು ಡಿಎಂಕೆ ನಾಯಕರೂ ಆದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ (MK Stalin) ಹೇಳಿದ್ದಾರೆ.
Join Our Telegram: https://t.me/dcgkannada
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾನುವಾರ ಇಲ್ಲಿ ನಡೆದ ಮಾಜಿ ಸಿಎಂ ಕರುಣಾನಿಧಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಡಿಎಂಕೆ ರಹಸ್ಯ ಮೈತ್ರಿ ಮಾಡಿಕೊಂಡಿದೆ ಎಂದು ಎಐಎಡಿಎಂಕೆ ಆರೋಪಿಸಿತ್ತು.
ಈ ಆರೋಪಕ್ಕೆ ತೀರುಗೇಟು ನೀಡಿರುವ ಸ್ಟಾಲಿನ್, ಅಧಿಕಾರಕ್ಕಾಗಿ ನಾವು ಎಂದಿಗೂ ಸಿದ್ಧಾಂತದ (BJP) ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಇದೇ ವೇಳೆ ಕಾರ್ಯಕ್ರಮಕ್ಕೆ ಬರುವಂತೆ ನೀಡಿದ ಆಹ್ವಾನವನ್ನು ಮರುಮಾತಿಲ್ಲದೇ ರಾಜನಾಥ್ ಸಿಂಗ್ ಸ್ವೀಕರಿಸಿದರು. ತಮ್ಮ ನಿದ್ದೆಯನ್ನೂ ಬದಿಗೊತ್ತಿ ಚೆನ್ನೈಗೆ ಆಗಮಿಸಿದರು. ಅವರ ಭಾಷಣ ಇತಿಹಾಸದ ಪುಟಗಳಲ್ಲಿ ಸೇರುವಂತಿತ್ತು ಎಂದು ಸ್ಟಾಲಿನ್ ಹೊಗಳಿದ್ದಾರೆ.
ಇದನ್ನೂ ಓದಿ: BSNL 4G ಸೇವೆ ಅಕ್ಟೋಬರ್‌ಗೆ?