Shivaji Murthy Unveiling Program: Srikanta Shetty is a Puneetha who fills the restricted seat

ಶಿವಾಜಿ ಮೂರ್ತಿ ಅನಾವರಣ ಕಾರ್ಯಕ್ರಮ: ಶ್ರೀಕಾಂತ ಶೆಟ್ಟಿ ನಿರ್ಬಂಧದ ಸ್ಥಾನ ತುಂಬಿದ ಪುನೀತ

ಶಿವಾಜಿ ಮೂರ್ತಿ ಅನಾವರಣ ಕಾರ್ಯಕ್ರಮ: ಶ್ರೀಕಾಂತ ಶೆಟ್ಟಿ ನಿರ್ಬಂಧದ ಸ್ಥಾನ ತುಂಬಿದ ಪುನೀತ

ಭಾರತ ಸ್ವರ್ಗಕ್ಕೆ ದ್ವಾರ ; ಪುನೀತ ಕೆರೆಹಳ್ಳಿ

ಮುಧೋಳ: ಭಾರತ ಸ್ವರ್ಗಕ್ಕೆ ದ್ವಾರ ಇಲ್ಲಿ ಹುಟ್ಟಿದವರು ಎಲ್ಲವನ್ನೂ ದೈವಸಮಾನವಾಗಿ ಕಾಣುತ್ತಾರೆ ಇಲ್ಲಿನ ಸಂಸ್ಕಾರ ಸಂಸ್ಕೃತಿ ಅಂತದ್ದು ಎಂದು‌ ದೇವಾನುದೇವತೆಗಳು‌ ಭಾರತದ ಬಗ್ಗೆ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲಿ‌‌ ರಾಜರ ಆಡಳಿತವಿದ್ದಾಗ. ಪ್ರತಿಯೊಬ್ಬ‌ ರಾಜ ತಾನು ಯುದ್ದಗೆದ್ದ ಬಳಿಕ‌ ಜಯದ ಸಂಕೇತವಾಗಿ ಒಂದು ದೇವಾಲಯ ಕಟ್ಟಿಸುತ್ತಿದ್ದರು. ಇಂತಹ ಸುಸಂಸ್ಕೃತ ರಾಷ್ಟ್ರದ‌‌ ಮೇಲೆ‌ ಇಸ್ಲಾಂ‌ ಧರ್ಮದ‌ ಕ್ರೂರತೆಯ ದಾಳಿ‌ ನಡೆದು‌ ನಮ್ಮ ಸಂಸ್ಕೃತಿಯ ಮೇಲೆ‌ ಹಾನಿಯೆಸಗಿತು ಎಂದು ಪುನೀತ ಕೆರೆಹಳ್ಳಿ ಹೇಳಿದರು.

ಶನಿವಾರ ನಗರದ ವೆಂಕಟೇಶ ಮಹಾರಾಜ ಕೆರೆಯ ಹತ್ತಿರ ಶಿವಾಜಿ ನಗರದಲ್ಲಿ  ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ಅನಾವರಣಾ ಸಮಾರಂಭದಲ್ಲಿ ಅನೀರಿಕ್ಷಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಧರ್ಮಪಾಲನೆಗೆ ಹೆಸರಾಗಿದ್ದ ಪೃಥ್ವಿರಾಜ್‌ ಚೌವಾಣ ಮಹ್ಮದ ಘೋರಿಯ ಸೈನ್ಯ ನಿರಾಯುಧವಾಗಿದ್ದಾಗ ಕತ್ತಿ‌ ಎತ್ತುವುದಿಲ್ಲ‌. ಆದರೆ ಸೂರ್ಯಾಸ್ತದ ಸಮಯದಲ್ಲಿ‌ ನಿರಾಯಧರಾದ ಪೃಥ್ವಿರಾಜ್‌ ಚೌವಾಣ್ ಸೈನ್ಯದ ಮೇಲೆ ಘೋರಿ ದಾಳಿ‌ ಮಾಡಿ ಮೋಸದಿಂದ ಯುದ್ದ ಗೆಲ್ಲುತ್ತಾನೆ. ಇಸ್ಲಾಮಿಗರಿಗೆ ನಿಯತ್ತು ಇಲ್ಲ ಎಂಬುದು ಇತಿಹಾಸದಿಂದಲೇ‌ ಗೊತ್ತಾಗುತ್ತದೆ ಎಂದರು.

ನಮ್ಮ ರಾಜರು ಆರಂಭದಲ್ಲಿ ಯದ್ದವನ್ನು ಸೋತಿರುವ ಇತಿಹಾಸವೇ ಇಲ್ಲ. ಆದರೆ ನಾವು ಧರ್ಮಪಾಲನೆಯಿಂದ‌ ಯುದ್ದವನ್ನು ಸೋತಿರುವೆವು. ಆದರೂ ಇಂದಿಗೂ ನಮ್ಮ ಧರ್ಮ ತನ್ನ ಶ್ರೇಷ್ಠತೆ ಕಾಪಾಡಿಕೊಳ್ಳುವುದಕ್ಕೆ ನಮ್ಮ ಧರ್ಮನಿಷ್ಠೆಯೇ‌ ಕಾರಣ ಎಂದರು.

ರಜಪೂತರು ನಮ್ಮ ಧರ್ಮ‌ ರಕ್ಷಣೆಗೆ ಅಪಾರ‌ ಕೊಡುಗೆ ನೀಡಿದ್ದಾರೆ ಒಬ್ಬರ ನಂತರ‌ ಒಬ್ಬರಂತೆ‌ ಮುಸ್ಲಿಂ ರಾಜರು ಮುಕ್ಕಾಲು ಭಾಗ ಭಾರತವನ್ನು‌ ವಶಪಡಿಸಿಕೊಂಡಿರುತ್ತಾರೆ. 15-16ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ‌ ಓರ್ವ ಜಹಾಗೀರದಾರನ ಮಗನಾಗಿ ಹುಟ್ಟಿ ಛತ್ರಪತಿ‌ ಶಿವಾಜಿ‌ ಮಹಾರಾಜ ಕ್ರೌರ್ಯಕ್ಕೆ ಕ್ರೌರ್ಯ, ಶೌರ್ಯಕ್ಕೆ‌ ಶೌರ್ಯದಿಂದ ವೈರಿಗಳ‌ ಭಾಷೆಯಲ್ಲಿಯೇ ಉತ್ತರ ನೀಡಿ‌ ಹಿಂದು ಧರ್ಮರಕ್ಷಣೆಗೆ ಕಂಕಣ ಕಟ್ಟಿ‌ನಿಂತ ಕೀರ್ತಿ‌ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದರು.

  ಕನ್ಹೇರಿಮಠದ ಶ್ರೀ ಅದೃಷ್ಯ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿ ಮಾತನಾಡಿ ಶಿವಾಜಿ ಮಹಾರಾಜರ ತತ್ವ ಆದರ್ಶ ಇಂದಿನ‌ಜನರಿಗೆ ಸ್ಪೂರ್ತಿ ಅವರಲ್ಲಿನ ಶೌರ್ಯ,ಸಾಹಸದ ವ್ಯಕ್ತಿತ್ವ ಅನುಕರಣೀಯ ಎಂದು ಅವರ ಜೀವನದ ಹಲವಾರು ಘಟನೆಗಳನ್ನು ನೆನಪಿಸಿದರು.

 ಶಿರೋಳದ ರಾಮಾರೂಢ ಮಠದ ಶ್ರೀ ಶಂಕರಾರೂಢ ಮಹಾ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ಯಾಮ‌ ನಿಂಬಾಳಕರ, ಆನಂದ ತೋಟದಾರ,ಸುರೇಶ ಶಿಂಧೆ,ಯುವರಾಜ ಪವಾರ,ಸಾಗರ ರಜಪೂತ ,ಮಂಜುನಾಥ ಘೋರ್ಪಡೆ,ಸುನೀಲ ನಿಂಬಾಳಕರ,ಸದಾ ಜಾದವ ಸೇರಿದಂತೆ ಇತರರು ಇದ್ದರು.

ಶ್ರೀ ಕಾಂತ ಶೆಟ್ಟಿಗೆ‌ ನಿರ್ಬಂಧ ಕೋಮು ಸಾಮರಸ್ಯಕ್ಕೆ ಧಕ್ಕೆ : ನಗರದ ಶಿವಾಜಿ ನಗರದಲ್ಲಿ ಹಿಂದು ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಅವರ ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರಿ ಪ್ರಮಾಣದಲ್ಲಿ ಹಿಂದು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯ ಭಾಷಣಕಾರರಾಗಿ ಶ್ರೀಕಾಂತ ಶೆಟ್ಟಿ ಪಾಲ್ಗೊಳ್ಳುವವರಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಮತೀಯವಾಗಿ ಸಣ್ಣ ಘಟನೆ ಸಂಭವಿಸಿದರೂ ರಾಜ್ಯ, ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರ ಪಡೆಯುತ್ತದೆ. ಬಳಿಕ ವಿವಿಧ ಅನ್ಯ ಧಮೀರ್ಯ ನಾಯಕರು ಭೇಟಿ ನೀಡಿ ಭಾಷಣ ಮಾಡುವುದರಿಂದ ಸಾಮರಸ್ಯದ ಜೀವನಕ್ಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಇರುತ್ತದೆ. ಮುಧೋಳದಲ್ಲಿದ್ದ ಮತೀಯ ದ್ವೇಷಮಯ ವಾತಾವರಣ ತಿಳಿಯಾಗುತ್ತಿದ್ದು, ಉಭಯ ಕೋಮಿನವರು ಹಿಂದಿನ ಕಹಿ ಘಟನೆ ಮರೆತು ಸಾಮರಸ್ಯದಿಂದ ಇದ್ದಾರೆ. ಮತ್ತೆ ಈ ಪ್ರದೇಶದಲ್ಲಿ ಶ್ರೀಕಾಂತ ಶೆಟ್ಟಿ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ಸಾಮರಸ್ಯ ಹದಗೆಡಬಹುದು. ಅವರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿವಿಧೆಡೆ ಪ್ರಕರಣವೂ ದಾಖಲಾಗಿದೆ ಎಂಬ ಒಕ್ಕಣೆ ಜಿಲ್ಲಾಡಳಿತದ ಆದೇಶದಲ್ಲಿದೆ. ಈ ಕಾರಣಕ್ಕಾಗಿ ಅವರ ಬದಲಿಗೆ ಪುನೀತ ಕೆರೆಹಳ್ಳಿ ಅಗಮಿಸಿ ಭಾಷಣ ಮಾಡಿದರು.

ನಗರದೆಲ್ಲೆಡೆ ಪೋಲಿಸ್ ಬಂದೂಬಸ್ತ ಎದ್ದು ಕಾಣುತ್ತಿತ್ತು ಯಾವೂದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.

Latest News

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ  :       ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಮಹೆಬೂಬ ನಗರದ ಪಕ್ಕದಲ್ಲಿರುವ ಆಶ್ರಯ ಕಾಲನಿಯಲ್ಲಿ ವಾಸವಿದ್ದ ಸುಡಗಾಡ ಸಿದ್ಧ ಜನಾಂಗದ ಇಬ್ಬರು ಯುವಕರು, ಓರ್ವ ಯುವತಿ ಕಾಲುವೆಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಸಮ್ಮ ಚೆನ್ನಪ್ಪ ಕೊಣ್ಣೂರ(21),

ಐದು ದಿನಗಳ ಹೋರಾಟ ಅಂತ್ಯ :                                       ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ  ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತ ಘೋಷಣೆ ಮಾಡಿದ್ದು ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯಗೊAಡಿದೆ. ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕಬ್ಬಿನ ವಾಹನಗಳನ್ನು ತಡೆದು ನಿಲ್ಲಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ಹೋರಾಟ ಆರಂಭಿಸಿದ್ದರು.ಇಲ್ಲಿನ