ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದ ಒಂದನೇ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ರೇಣುಕಾ ರಾಮಕೋಟಿ ಲಮಾಣಿ ಅವರ ಪ್ರಭಾರ ಜವಾಬ್ದಾರಿಯನ್ನು ವಹಿಸಿ ನಂತರ ಆದೇಶ ಹಿಂಪಡೆದಿರುವ ಅಧಿಕಾರಿಗಳು ಲಮಾಣಿ ಅವರಿಗೆ ವಾರದಲ್ಲಿ ಕೇಂದ್ರ ತೋರಿಸಿ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು.ಇಲ್ಲದಿದ್ದರೆ ಕಾರ್ಯಕರ್ತೆಯರು ಧರಣಿ ನಡೆಸುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ನಾಗರತ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರೇಣುಕಾ ಲಮಾಣಿ ಅವರಿಗೆ ಹಾಗೂ ಶಾಂತಾ ಮಾಮನಿ ಅವರಿಗೆ ಈ ಘಟನೆಯಲ್ಲಿ ಅನ್ಯಾಯವಾಗಬಾರದು. ಅವರನ್ನು ದಾರಿ ತಪ್ಪಿಸುತ್ತಿರುವವರ ಮೇಲೆ ಅಧಿಕಾರಿಗಳು ಮೊದಲು ಕ್ರಮ ಜರುಗಿಸಬೇಕು.ಈ ಹಿಂದೆ ಪುರಸಭೆ ಸದಸ್ಯೆಯಾಗಿದ್ದ ನೀಲಮ್ಮ ಪಾಟೀಲ್ ಅವರು ಮರಳಿ ಕಾರ್ಯಕರ್ತೆ ಎಂದು ಹೇಗೆ ಸೇವೆ ಸಲ್ಲಿಸುತ್ತಾರೆ.ಅವರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವ ಹಣವನ್ನು ವಸೂಲಿ ಮಾಡಿ ತುಂಬಿಸಿಕೊಳ್ಳಬೇಕು.ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಾರ್ಯಕರ್ತೆ ರೇಣುಕಾ ಲಮಾಣಿ ಮಾತನಾಡಿ, ವಾರದಲ್ಲಿ ನನಗೆ ಕೆಲಸದ ಸ್ಥಳ ತೋರಿಸದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಹೂಡುತ್ತೇನೆ.ನನಗೆ ಪಿಲೇಕೆಮ್ಮ ನಗರದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡಲು ವರ್ಗಾವಣೆಗೆ ಸ್ವತಃ ಶಾಸಕರೇ ಮೇಲಧಿಕಾರಿಗಳಿಗೆ ಶಿಫಾರಸ್ಸು ಪತ್ರ ಕೊಟ್ಟಿದ್ದರು ಎಂದು ಅವರು ಇದೇ ವೇಳೆ ಹೇಳಿದರು.ಕಾರ್ಯಕರ್ತೆಯರಾದ ರೇಣುಕಾ ಹಡಪದ, ಸುವರ್ಣಾ ಕಾಳೆ ಸೇರಿದಂತೆ ಹಲವರು ಇದ್ದರು. ಅಂಗನವಾಡಿ ಕೇಂದ್ರವೊAದರಲ್ಲಿ ಕಾರ್ಯಕರ್ತೆಯರಿಬ್ಬರು ಪರಸ್ಪರ ಬಡಿದಾಡಿಕೊಂಡ ಘಟನೆಗೆ ಸಂಬAಧಿಸಿದAತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿವೆ.
ಕಾರ್ಯಕರ್ತೆಯರ ಜಗಳ ಹಾದಿಯಲ್ಲಿ, ಬೀದಿಯಲ್ಲಿ ನಡೆಯುತ್ತಿದ್ದರೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು, ಮೇಲಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕೂತಿರುವುದು ಸರ್ಕಾರದ ಹೆಸರಿಗೆ ಮಸಿ ಬಳಿಯುವುದಕ್ಕೆ ಪರೋಕ್ಷ ಕಾರಣ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.