ಪ್ಯಾರಿಸ್ : ಭಾರತದ ಕುಸ್ತಿಪಟು ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ (Silver medal) ನೀಡುವ ಕುರಿತು ಸಲ್ಲಿಸಿಕೆಯಾಗಿರುವ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ನ್ಯಾಯಾಲಯ ತೀರ್ಪನ್ನು ಆಗಸ್ಟ್ 11ಕ್ಕೆ ಮುಂದೂಡಿದೆ.
Join Our Telegram: https://t.me/dcgkannada
ವಿನೇಶ್ ಫೋಗಟ್ ಮೇಲ್ಮನವಿಯ ತೀರ್ಪನ್ನು ಆಗಸ್ಟ್ 11ರಂದು 6 ಗಂಟೆಯೊಳಗಾಗಿ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.
ಅಧಿಕ ತೂಕ ಹೊಂದಿದ್ದಕ್ಕಾಗಿ ವಿನೇಶ್‌ರನ್ನು ಅನರ್ಹಗೊಳಿಸಲಾಗಿತ್ತು. ಆದರೆ ವಿನೇಶ್, ಬೆಳ್ಳಿ ಪದಕ (Silver medal)/ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಇದೀಗ ತೀರ್ಪು ನೀಡುವ ಗಡುವನ್ನು ವಿಸ್ತರಿಸಿ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: Murder Case: ಪೆಟ್ರೋಲ್ ಎರಚಿ ಯುವ ಉದ್ಯಮಿ ಕೊಲೆ ಪ್ರಕರಣ.. 2ನೇ ಆರೋಪಿ ಬಂಧಿಸಿ ಸ್ಥಳ ಮಹಜರು ಮಾಡಿದ ಖಾಕಿ ಪಡೆ
ಫೋಗಟ್ ತೂಕ ಮಿತಿಗಿಂತ 100 ಗ್ರಾಂ ಜಾಸ್ತಿ ಇದೆ ಎಂಬ ಕಾರಣಕ್ಕೆ ಅವರನ್ನು ಫೈನಲ್‌ನಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳಿಸಿ ದೂರ ಇಡಲಾಗಿತ್ತು. ಇದು ಸಾಕಷ್ಟು ಭಾರತೀಯ ಕ್ರೀಡಾ ಪ್ರೇಮಿಗಳ ಆಕ್ರೋಶಕ್ಕೂ ಎಡೆಮಾಡಿಕೊಟ್ಟಿತ್ತು. ಫೋಗಟ್ ಅವರು ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಅಮೆರಿಕದ ಸಾರಾ ಆ್ಯನ್ ಹಿಲ್ಡ್‌ಬ್ಯಾಂಟ್‌ರನ್ನು ಎದುರಿಸಬೇಕಾಗಿತ್ತು.