ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮದ ಯುವ ಉದ್ಯಮಿ ರಾಹುಲ್ ಬಿರಾದಾರ ಪ್ರೇಮ ಪ್ರಕರಣದಲ್ಲಿ (Murder Case) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಹಾಗೂ ಆರೋಪಿಯಾಗಿದ್ದ ಯುವತಿ ತಂದೆ ಪರಶುರಾಮ ಮದರಿ ಅವರ ಜೀಪ ಚಾಲಕ ನೀಲಕಂಠ ಹರನಾಳನನ್ನು ಶನಿವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Join Our Telegram: https://t.me/dcgkannada
ಘಟನೆಯ ಕುರಿತು ಮಾಹಿತಿ ನೀಡಿದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮೇ 26 ರಂದು ನಡೆದಿದ್ದ ಢವಳಗಿಯ ರಾಹುಲ್ ಬಿರಾದಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಆರೋಪಿ ಜೈಲಿನಲ್ಲಿದ್ದು ಜೀಪ ಚಾಲಕ ನೀಲಕಂಠ ಹರನಾಳನನ್ನು ಬಂಧಿಸಿದ್ದೇವೆ.
ಪ್ರಕರಣದಲ್ಲಿ (Murder Case) ಯುವತಿ ಐಶ್ವರ್ಯಾ ಶಿಕ್ಷಣ ಮುಂದುವರೆಸಿರುವ ಕಾರಣ ಆಕೆಗೆ ಜಾಮೀನು ಸಿಕ್ಕಿದ್ದು ಇನ್ನುಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಸದ್ಯಕ್ಕೆ ಬಂಧಿತನಾದ ನೀಲಕಂಠನಿಂದ ಘಟನೆಯ ದಿನ ಏನೇನು ನಡೆದಿದೆ ಎಂಬುದನ್ನು ಸ್ಥಳ ಮಹಜರು ನಡೆಸಿದ್ದು ವಿಚಾರಣೆ ಮುಂದುವರೆಸಿದ್ದೇವೆ. ಘಟನೆಯ ದಿನ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Bidarakundi RMSA school: ಆ.13,14 ರಂದು ಬಿದರಕುಂದಿ ಶಾಲೆಯಲ್ಲಿ ಬಾಕಿ ಸೀಟು ಪ್ರವೇಶಕ್ಕೆ ಕೌನ್ಸಲಿಂಗ್
ನನ್ನ ಮಗನನ್ನು ಕಳೆದುಕೊಂಡು ಮೂರು ತಿಂಗಳು ಗತಿಸಿವೆ.ಆದರೆ ಕೆಲವರು ಪ್ರಕರಣದಲ್ಲಿ ನಾವು ಹಿಂದೆ ಸರಿದಿದ್ದೇವೆ ಎಂಬ ವದಂತಿ ಹರಡಿಸಿದ್ದರು. ಆದರೆ ಪೊಲೀಸರ ಮೇಲೆ ನಮಗೆ ನಂಬಿಕೆ ಇದ್ದು ಅವರು ತನಿಖೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಈ (Murder Case) ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ನಮಗೆ ಸಮಾಧಾನವಿಲ್ಲ. ನಾವು ಯಾರೊಂದಿಗೂ ರಾಜಿ ಆಗಿಲ್ಲ ಎಂದು ರಾಹುಲ್ ಬಿರಾದಾರನ ತಂದೆ ರಾಮನಗೌಡ ಬಿರಾದಾರ ತಿಳಿಸಿದ್ದಾರೆ.