ಗಂಗಾವತಿ : ಕಲಬುರ್ಗಿ ನಗರದ ಹೊರವಲಯದ ಸಿರನೂರು ನಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಸಮಿತಿ ಸೇಡಂ ಹಾಗೂ ವಿಕಾಸ ಅಕಾಡೆಮಿ ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವ ಏಳು ಮತ್ತು ಕೊತ್ತಲ ಸ್ವರ್ಣ ಸಂಭ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಕೇಂದ್ರದ ಅಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರು ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಜರುಗಿತು.
ಈ ವಿವಿಧ ಸ್ಪರ್ಧೆಗಳಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ್ಕೇರಾ ಕ್ಯಾಂಪಿನ ಶ್ರೀ ಹರೇ ಶ್ರೀನಿವಾಸ ಭಜನಾ ಮಂಡಳಿ ಜಾನಪದ ಕೋಲಾಟದಲ್ಲಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗಂಗಾವತಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಈ ಸಂದರ್ಭದಲ್ಲಿ ಚನ್ನವೀರಪ್ಪ ಗುಡ್ಡದ ಎನ್ ತ್ರಿವೇಣಿ, ಸಿಹೆಚ್ ತುಳಸಿ ಹಾಗೂ ಸಿಹೆಚ್ ನವೀನ್ ನೇತೃತ್ವದ
ಶ್ರೀ ಹರೇ ಶ್ರೀನಿವಾಸ ಭಜನಾ ಮಂಡಳಿ ಸದಸ್ಯರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ಗಂಗಾವತಿ ತಾಲೂಕಿನ ವಿಕಾಸ ಅಕಾಡೆಮಿಯ ಜಿಲ್ಲಾ ಪ್ರಮುಖರಾದ. ರಮೇಶ್ ಕುಲಕರ್ಣಿ ಮರಳಿ ತಾಲೂಕ ಸಂಯೋಜಕರಾದ ಮಂಜುನಾಥ ಹೊಸಕೇರಾ ವಿಕಾಸ ಅಕಾಡೆಮಿ ಸದಸ್ಯರಾದ ಸತ್ಯನಾರಾಯಣ ಜಂಗಮರ ಕಲ್ಗುಡಿ, ಹೊಸ್ಕೇರಾ ಕ್ಯಾಂಪಿನ ಚಿಲಕುರಿ ಶೇಷಗಿರಿರಾವ್, ಉಪ್ಪಲಪಾಟಿ ನಾಗೇಶ್ವರರಾವ್, ಮೋಹನ್ ಕೃಷ್ಣ ಹೊಸಕೇರಾ ಕ್ಯಾಂಪ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರ್ಗಿ ವಿಭಾಗ ಮಟ್ಟದ ಮಹಿಳಾ ಕೋಲಾಟ ಸ್ಪರ್ಧೆ, ಪ್ರಥಮ ಸ್ಥಾನ ಪಡೆದ ಗಂಗಾವತಿಯ ಶ್ರೀ ಹರೇ ಶ್ರೀನಿವಾಸ ಭಜನಾ ಮಂಡಳಿ pic.twitter.com/JPNcBANaFN
— dcgkannada (@dcgkannada) September 24, 2024
ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿತ, ನಾಲ್ವರು ಯುವಕರಿಗೆ ಗಂಭೀರ ಗಾಯ