ರಾಯಚೂರು: (Raichuru) ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಮಂಚಕ್ಕೆ ಕರೆದ ಸರ್ಕಾರಿ ಶಾಲೆಯೊಂದರ ಪ್ರಭಾರ ಮುಖ್ಯ ಶಿಕ್ಷಕನಿಗೆ ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಶಿಕ್ಷಕಿಯನ್ನು ಮಂಚಕ್ಕೆ ಕರೆದ ಮುಖ್ಯ ಶಿಕ್ಷಕನನ್ನು ರಾಯಚೂರು (Raichuru) ಹೊರವಲಯದಲ್ಲಿರುವ ಸರ್ಕಾರಿ ಶಾಲೆಯ ಮೆಹಬೂಬ್ ಅಲಿ ಎಂದು ಗುರುತಿಸಲಾಗಿದೆ.
Join Our Telegram: https://t.me/dcgkannada
ಈತ ತರಬೇತಿಗೆ ಬಂದಿದ್ದ ಶಿಕ್ಷಕಿಯ ಜೊತೆ ಅನುಚಿತವಾಗಿ ವರ್ತಿಸಿ, ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ಈ ವಿಷಯ ತಿಳಿದ ಕೂಡಲೇ ಶಿಕ್ಷಕಿಯ ಕುಟುಂಬಸ್ಥರು ಶಾಲೆಗೆ ಆಗಮಿಸಿ ಅಲಿ ಬಟ್ಟೆ ಹರಿದು ಸ್ಥಳೀಯರೊಂದಿಗೆ ಸೇರಿ ಮನಬಂದಂತೆ ಥಳಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ “ರಾತ್ರಿ ಮಲಗೋದಕ್ಕೆ ಬಾ 10 ಸಾವಿರ ಕೊಡುತ್ತೇನೆ” ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿ ಹಿಂಸೆ ಕೊಟ್ಟಿದ್ದಾನೆ. ಇದನ್ನು ಶಿಕ್ಷಕಿ ನಮಗೆ ತಿಳಿಸಿದ್ದು ಕೂಡಲೇ ಶಾಲೆಗೆ ಆಗಮಿಸಿ ವಿಚಾರಿಸಿದೆವು. ಮೊದಲು ನಿರಾಕರಿಸಿದ ಆತ ನಂತರ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಶಿಕ್ಷಕಿಯ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ವಕೀಲ ಮೇಲಿನಕೇರಿ ಮರ್ಡರ್ ಕೇಸ್.. ನಾಲ್ಕೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ..!
ಶಿಕ್ಷಕಿಯು ವಿಚಾರವನ್ನು ಇಲಾಖೆಯ ಮೇಲಾಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ ಬಡಿಗೇರ್ ವಿಚಾರಣೆ ಕಾಯಂ ಅಮಾನುಗೊಳಿಸಿ ಆದೇಶ ಹೊರಡಿಸಿದ್ದಾರೆ.