ಮುದ್ದೇಬಿಹಾಳ : ಪಟ್ಟಣದ ಜನನಿಬೀಡ ಪ್ರದೇಶವಾದ ಅಂಬೇಡ್ಕರ್ ಸರ್ಕಲ್ ಹತ್ತಿರದಲ್ಲಿರುವ ಬೇಕರಿಯೊಂದರ ಬಾಗಿಲು ಬೀಗ ಮುರಿದು ಒಳ ಹೊಕ್ಕಿರುವ ಕಳ್ಳನೋರ್ವ ತನಗೆ ಸಿಕ್ಕಿದ್ದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಅ.21ರ ರಾತ್ರಿ ನಡೆದಿದೆ.
ಪಟ್ಟಣದ ನಿವಾಸಿ ಅಲ್ಲಾಭಕ್ಷ ಬಿದರಕೋಟಿ ಎಂಬುವರಿಗೆ ಸೇರಿದ ಕೇಕ್ ಪ್ಯಾಲೇಸ್ ಬೇಕರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಘಟನಾವಳಿಯ ದೃಶ್ಯಗಳು ಅವರದ್ದೇ ಅಂಗಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅಂಗಡಿಕಾರ ಅಲ್ಲಾಭಕ್ಷ ಬಿದರಕೋಟಿ, ಅಂಗಡಿಯಲ್ಲಿಟ್ಟಿದ್ದ 30 ಸಾವಿರ ರೂಪಾಯಿಗಳನ್ನು ಕದ್ದೊಯ್ದಿದ್ದಾನೆ.ಶೆರ‍್ಸ್ನ ಬೀಗ ಮುರಿಯುವುದು, ಒಳಗಡೆ ಹೋಗಿ ಕ್ಯಾಶ್ ಕೌಂಟರ್‌ನಿAದ ಬ್ಯಾಗ್ ತೆಗೆದುಕೊಳ್ಳುವುದು,ಬಾಯಾರಿಕೆ ಆದಾಗ ನೀರಿನ ಬಾಟಲ್‌ನ್ನು ಕಳುವು ಮಾಡಿಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ಪಿಎಸ್‌ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿ.ಎಸ್.ಐ ಆರ್.ಎಲ್.ಮನ್ನಾಭಾಯಿ
ಅವರನ್ನು ಮಾತನಾಡಿಸಿದಾಗ, ಘಟನೆ ಗಮನಕ್ಕೆ ಬಂದಿದ್ದು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದಾರೆ.ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಅತ್ಯಂತ ಜನನಿಬೀಡ ಪ್ರದೇಶದಲ್ಲಿ ಮಧ್ಯರಾತ್ರಿ ಯಾರ ಭಯವೂ ಇಲ್ಲದೇ ಮುಖಕ್ಕೆ ಮಾಸ್ಕ್ ಕೂಡ ಧರಿಸದೇ ಕಳುವು ಮಾಡಿರುವುದನ್ನು ಕಂಡಾಗ ಈತ ಬೇರೆ ಜಿಲ್ಲೆಯವನೇ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಬೇಕರಿ ಅಂಗಡಿಯಲ್ಲಿ ಕಳ್ಳತನ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ : ಬೇಕರಿ ಅಂಗಡಿಯಲ್ಲಿ ಕಳ್ಳತನ
Latest News
ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್
ಮುದ್ದೇಬಿಹಾಳ : ಲಕ್ಷಾಂತರ ಜನ ಹಿರಿಯರು,ಯುವಕರ ತ್ಯಾಗ,ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಅದನ್ನು
ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ
ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ
ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು
ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್
ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ
ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ
ಮುದ್ದೇಬಿಹಾಳ : ಕೆಎಸ್‌ಡಿಎಲ್ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬರ ಪರಿಸ್ಥಿತಿ ಕುರಿತು ಆ.11,12 ರಂದು ಅವಲೋಕನ ನಡೆಸಿ ಬೆಳೆ ವೀಕ್ಷಣೆ ಮಾಡಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಆ.11 ರದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಚರ್ಚೆ, ಮದ್ಯಾಹ್ನ 2.30ಕ್ಕೆ ಬರಪೀಡಿತ ಪ್ರದೇಶಗಳಾದ ಹರಿಂದ್ರಾಳ,ಹಡಲಗೇರಿ ಗ್ರಾಮಗಳಲ್ಲಿ ಹತ್ತಿ,ತೊಗರಿ,ಸಜ್ಜೆ ಬೆಳೆಗಳ ವೀಕ್ಷಣೆ,ಸಂಜೆ 4ಕ್ಕೆ ಢವಳಗಿ ಹೋಬಳಿಯ ಹತ್ತಿ ತೊಗರಿ ಬೆಳೆಗಳ ವೀಕ್ಷಣೆ
ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ
ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ







