Traffic stopped for about 6 km

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ತಾಳಿಕೋಟೆ: ಡೋಣಿ ನದಿಯ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಜಲಾವೃತವಾಗಿರುವದು ಒಂದು ಕಡೆಯಾದರೆ ಹಡಗಿನಾಳ ಗ್ರಾಮದ ಮೂಲಕ ಮೂಲಕ ಸಂಚರಿಸುವ ಮೂಕೀಹಾಳ ಗ್ರಾಮದ ಹತ್ತಿರದ ಹಳ್ಳದಲ್ಲಿಯೂ ಶುಕ್ರವಾರ ಸಾಯಂಕಾಲ ಪ್ರವಾಹದ ಉಕ್ಕಿ ಬಂದಿದ್ದರಿಂದ ಸಂಪೂರ್ಣ ಸಂಚಾರ ವ್ಯವಸ್ಥೆಯೇ ಕಡಿತಗೊಂಡ ಪರಿಣಾಮ ತಾಳಿಕೋಟೆಯಿಂದ ಮೂಕೀಹಾಳ ಗ್ರಾಮದ ಹಳ್ಳದ ವರೆಗಿನ 6 ಕೀಲೋ ಮೀಟರ್ ವಾಹನಗಳ ದಟ್ಟನೆ ನಿಂತಲ್ಲೇ ನಿಂತುಕೊಂಡಿವೆ.

ವಿಜಯಪುರ ಹಾಗೂ ಮುದ್ದೇಬಿಹಾಳ ಮಾರ್ಗದ ಕಡೆಯಿಂದ ಆಗಮಿಸಿದ ವಾಹನಗಳೂ ಸಹ ಸುಮಾರು 5 ಕೀಲೋ ಮೀಟರ್‌ವರೆಗೆ ನಿಂತಿದ್ದರೆ ಇತ್ತ ಮಿಣಜಗಿ ಕಡೆಯ 3 ಕೀಲೋ ಮೀಟರ್ ವರೆಗೆ ವಾಹನಗಳು ನಿಂತುಕೊಂಡಿದ್ದವು.

ಕೆಲವರು ಈ ಸಂಚಾರ ಸಂಪರ್ಕ ಕಡಿತಗೊಂಡಿರುವ ಸುದ್ದಿಯನ್ನು ಅರೀತುಕೊಂಡ ಖಾಸಗಿ ವಾಹನದೊಂದಿಗೆ ಸುಮಾರು 80 ಕೀಲೋ ಮೀಟರ್ ಅಂತರದ ಕೊಡೇಕಲ್ಲ, ನಾರಾಯಣಪೂರ, ನಾಲತವಾಡ ಮೂಲಕ ಮುದ್ದೇಬಿಹಾಳದ ಸಂಪರ್ಕವನ್ನು ಪಡೆದುಕೊಂಡರೆ ಇನ್ನೂ ಕೆಲವರು ದೇವರ ಹಿಪ್ಪರಗಿ ಮೂಲಕ 140 ಕೀಲೋ ಮೀಟರ್ ಅಂತರದಿಂದ ವಿಜಯಪುರ ನಗರವನ್ನು ಸಂಪರ್ಕಕ್ಕೆ ಪಡೆದುಕೊಂಡರು.

ಈ ಪ್ರವಾಹದ ದಟ್ಟನೆ ಅರೀಯದೇ ಆಗಮಿಸಿದ್ದ ಮುದ್ದೇಬಿಹಾಳದ ನ್ಯಾಯವಾದಿಗಳಾದ ಎಂ.ಎನ್.ಯರಗಲ್ಲ, ಪಿ.ಬಿ.ಜಾಧವ, ಎಸ್.ಸಿ.ಹಿರೇಮಠ, ಎನ್.ಆರ್.ಮೋಕಾಸಿ ಅವರು ಸುಮಾರು 80 ಕೀಲೋ ಮೀಟರ್ ಅಂತರದಿಂದ ಮುದ್ದೇಬಿಹಾಳಕ್ಕೆ ತೆರಳಿದರಲ್ಲದೇ ಈ ರಸ್ತೆ ಸಂಪರ್ಕ ಚ್ಯಾಲ ಇದ್ದರೆ ಕೇವಲ 30 ಕೀಲೋ ಮೀಟರ್‌ದಲ್ಲಿ ಮುದ್ದೇಬಿಹಾಳಕ್ಕೆ ಹೋಗುತ್ತಿದ್ದೇವೆಂದು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರಲ್ಲದೇ ಈ ನದಿಗೆ ಮೇಲ್ಮಟ್ಟದ ಸೇತುವೆಯನ್ನು ತ್ವರಿತಗತಿಯಲ್ಲಿ ನಿರ್ಮಾಣ ಮಾಡಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.

Latest News

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್‌ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ