ಪಟನಾ: ಎಸ್ಸಿ, ಎಸ್ಟಿ ಒಳಮೀಸಲಿನಲ್ಲಿ ಕೆನೆಪದರ ಇರಬೇಕು ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯದ ವಿರುದ್ದ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವೇಳೆ ಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಇಲ್ಲಿ ಲಾಠಿ ಪ್ರಹಾರ ನಡೆಸಿದ್ದು, ಆಕಸ್ಮಿಕವಾಗಿ ಜಿಲ್ಲಾಧಿಕಾರಿಗೂ ಲಾಠಿ ಬೀಸಿದ್ದಾರೆ. (Viral video)
ಪ್ರತಿಭಟನೆಯ ಅಂಗವಾಗಿ ಜನನಿಬಿಡ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರ ವಿರುದ್ಧ ಲಾಠಿಚಾರ್ಜ್ ಸಂದರ್ಭ ಪೊಲೀಸರು ಜಿಲ್ಲಾಧಿಕಾರಿಗೆ ದೊಣ್ಣೆಯಿಂದ ಹೊಡೆದಿರುವ ವಿಲಕ್ಷಣ ಘಟನೆ ನಡೆದಿದೆ.
Join Our Telegram: https://t.me/dcgkannada
ಪಟನಾದ ದಾಕ್ ಬಂಗಲೆ ಚೌಕ್‌ನಲ್ಲಿ ಭೀಮ್ ಆರ್ಮಿ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ದರು. ಪರಿಸ್ಥಿತಿ ನಿಯಂತ್ರಣಕ್ಕೆ ಎಸ್ ಡಿಎಂ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪ್ರತಿಭಟನಾ ನಿರತರ ಮೇಲೆ ಲಾಠಿ ಪ್ರಯೋಗಿಸುವ ವೇಳೆ, ಸಾಮಾನ್ಯ ರಂತೆ ನಿಂತಿದ್ದ ಎಸ್‌ಡಿಎಂ ಮೇಲೆಯೂ ಆಕಸ್ಮಿಕವಾಗಿ ಬೀಸಿದ್ದಾರೆ. (Viral video)
ಇದನ್ನೂ ಓದಿ: Sperm collection: ಹಾಸಿಗೆ ಹಿಡಿದ ಪತಿಯ ವೀರ್ಯ ಸಂಗ್ರಹಕ್ಕೆ ಕೋರ್ಟ್ ಅನುಮತಿ!
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.