ಬೆಂಗಳೂರು: 3991 ಪುಟಗಳ ಸುದೀರ್ಘ ಚಾಜ್ ಶೀಟ್ ಸಲ್ಲಿಕೆಯ ಬೆನ್ನಲ್ಲೇ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಈ ಅರ್ಜಿ ರದ್ದಾಗುವುದು ಖಚಿತವಾಗಿದ್ದರೂ ಕಾನೂನು ಪ್ರಕ್ರಿಯೆ ಆರಂಭಿಸಲು ದರ್ಶನ್ ಪರ ವಕೀಲರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೋಮವಾರ ಮುಕ್ತಾಯಗೊಳ್ಳಲಿದೆ. ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ಕಾರಾಗೃಹದಿಂದಲೇ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ವಿಡಿಯೊ ಕಾನ್ಸರನ್ಸ್ ಮೂಲಕ ತಾವಿದ್ದ ಕಾರಾಗೃಹಗಳಿಂದಲೇ ಸೋಮವಾರ ಹಾಜರಾಗಲಿದ್ದಾರೆ.
ಇದೇ ವೇಳೆ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಎಲ್ಲ 17 ಜನ ಆರೋಪಿಗಳ ಕೈ ಸೇರಲಿದೆ. ಚಾರ್ಜ್ ಶೀಟ್ ಕೈ ಸೇರಿದ ಬಳಿಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ಸೋಮವಾರ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪವಿತ್ರಾ ಬಿಟ್ಟು ಯಾರೂ ಜಾಮೀನಿಗೆ ಅರ್ಜಿ ಹಾಕಿಲ್ಲ:
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆಯಾಗಿರುವ ಘಟನೆ ನಡೆದು ಮೂರು ತಿಂಗಳು ಕಳೆದಿವೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ 17 ಆರೋಪಿಗಳ ಬಂಧನವಾಗಿಯೂ ಮೂರು ತಿಂಗಳು ಕಳೆದಿದೆ. ಈ ನಡುವೆ ಪವಿತ್ರಾ ಗೌಡ ಬಿಟ್ಟು ಬೇರೆ 16 ಆರೋಪಿಗಳು ಒಮ್ಮೆಯೂ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ.
ಎ.1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಾದರೂ ಅವರ ಜಾಮೀನು ಅರ್ಜಿ ವಜಾ ಆಗಿತ್ತು.
ಇದನ್ನೂ ಓದಿ: Viral news: ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಪಾಪಿ ಪತಿ..!
ವಕಾಲತ್ತಿಗೆ ಸಹಿ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಇಂದು ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಈಗಾಗಲೇ ಪತ್ನಿ ಹಾಗೂ ಸಹೋದರ ದಿನಕರ್ ಜತೆ ದರ್ಶನ್ ಅವರು ಚರ್ಚೆ ನಡೆಸಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಪತ್ನಿ ಹಾಗೂ ಸಹೋದರ ಜತೆ ಚರ್ಚೆ ಮಾಡಿದ ಬಳಿಕ ದರ್ಶನ್ ವಕಾಲತ್ತಿಗೆ ಸಹಿ ಹಾಕಿದ್ದರು ಎನ್ನಲಾಗಿದೆ.