ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2023-24ನೇ ಸಾಲಿನಲ್ಲಿ 4.40 ಲಕ್ಷ ರೂ.ಲಾಭ ಗಳಿಸಿದೆ ಎಂದು TAPCMS ನಿರ್ದೇಶಕ ಎಂ.ಎಸ್.ಸರಶೆಟ್ಟಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಟಿಎಪಿಸಿಎಂಎಸ್‌ನ 67ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾಡಿದರು.
ಹೆಸರು ಕಾಳು ಖರೀದಿ ಕೇಂದ್ರ ತೆರೆಯಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ನಮ್ಮ ಭಾಗದಲ್ಲಿ ಉದ್ದು ಬೆಳೆಯುವುದಿಲ್ಲ.ಸರ್ಕಾರ ಖರೀದಿ ಕೇಂದ್ರ ತೆರೆಯಲು ಸೂಚಿಸಿದ್ದರೂ ನಮ್ಮಲ್ಲಿ ತೆರಯಲು ಉದ್ದು ಉತ್ಪಾದನೆ ಇಲ್ಲ. ಹೀಗಾಗಿ ಕೇಂದ್ರ ತೆರೆದಿಲ್ಲ ಎಂದು ತಿಳಿಸಿದರು.
ಸಂಘದ ಪ್ರಭಾರಿ ವ್ಯವಸ್ಥಾಪಕ ಹಾಗೂ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ ಮಾತನಾಡಿ, ಸಭೆಯಲ್ಲಿ ಚರ್ಚಿಸುವ ವಿಷಯಗಳನ್ನು ಓದಿ ಹೇಳಿದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ ಮಾತನಾಡಿದರು.
ಹಿರಿಯ ನ್ಯಾಯವಾದಿ ಆರ್.ಬಿ.ಪಾಟೀಲ್,ಸಂಘದ ಅಧ್ಯಕ್ಷ ಮನೋಹರ ಮೇಟಿ(ಬಸರಕೋಡ), ಉಪಾಧ್ಯಕ್ಷ ಜಿ.ಬಿ.ಹತ್ತೂರ, ನಿರ್ದೇಶಕರಾದ ಚಿದಾನಂದ ಸೀತಿಮನಿ, ಶಂಕರಗೌಡ ಹಿಪ್ಪರಗಿ, ಎಂ.ಕೆ.ಮುತ್ತಣ್ಣವರ,ಪಿ.ಪಿ.ಯಾಳವಾರ,ಶ್ರೀದೇವಿ ಮಾಲಗತ್ತಿ, ಚನ್ನಮ್ಮ ಲಕ್ಕುಂಡಿ ಇದ್ದರು.
ಸಂಘದ ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಬ್ಬಂದಿ ಎಂ.ಎಸ್.ಪಾಟೀಲ್, ಎಸ್.ಎಂ.ಚೌದ್ರಿ, ಬಿ.ಎಂ.ಬಿರಾದಾರ, ಎಸ್.ಜಿ.ಕೊಳ್ಳಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಇದನ್ನೂ ಓದಿ: Muddebihal news: ಅಲ್ಪಸಂಖ್ಯಾತರಿಗೆ 20 ವರ್ಷದ ಬಳಿಕ ದೊರೆತ ಸ್ಥಾನ: ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ-ಗೊಳಸಂಗಿ
ಟಿಎಪಿಸಿಎಂಎಸ್‌ನಿಂದ ರೈತರು ಬೆಳೆದ ಒಕ್ಕಲುತನ ಹುಟ್ಟುವಳಿ ಮಾರಾಟ ಮಾಡಿಸುವಲ್ಲಿ ಹೆಚ್ಚಿಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಾ ಬಂದಿದೆ. ರೈತರಿಗೆ ಸುಧಾರಿಸಿದ ಗೊಬ್ಬರ ವಿತರಿಸಿ ಅನುಕೂಲ ಕಲ್ಪಿಸಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ
ಎಂ.ಎಸ್.ಮೇಟಿ ಹೇಳಿದರು.