ಮುದ್ದೇಬಿಹಾಳ : ನಮ್ಮ ಸಂಘದ ಹಿಂದಿನ ಕಾರ್ಯದರ್ಶಿ ಮಾಡಿದ ಅವ್ಯವಹಾರದಿಂದ ಸಂಘಕ್ಕೆ ಲಾಭಾಂಶ ಕಡಿಮೆಯಾಗಿದೆ.ಅವರ ವ್ಯವಹಾರಗಳ ಬಗ್ಗೆ ಕೂಲಂಕಷ ತನಿಖೆ ನಡೆಸಲು ಅವರ ಮೇಲೆ ಕ್ರಿಮಿನಲ್ ದಾವೆ ಹೂಡಲು ಸಂಘ ತೀರ್ಮಾನಿಸಿದೆ ಎಂದು ಬಸರಕೋಡ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಹೇಮರೆಡ್ಡಿ ಮೇಟಿ ಹೇಳಿದರು.
ತಾಲೂಕಿನ ಬಸರಕೋಡದ ಶ್ರೀ ಪವಾಡ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಸೋಮವಾರ ಬಸರಕೋಡ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತದ 51 ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘವು ಕಳೆದ ವರ್ಷ 9 ಲಕ್ಷ ರೂ ನಿವ್ವಳ ಲಾಭಮಾಡಿತ್ತು. ಈ ವರ್ಷ ಆರು ಲಕ್ಷ ರೂ ನಿವ್ವಳ ಲಾ¨s Àಮಾಡಿದೆ. ಕಳೆದ ವರ್ಷಕ್ಕಿಂತ ಕಡಿಮೆ ಲಾಭ ಬರಲು ಕಾರಣ ಹಿಂದಿನ ಠೇವಣಿದಾರರ ಬಡ್ಡಿ ಅನುಮಾಡಿಕೊಟ್ಟಿರಲಿಲ್ಲ. ಈ ವರ್ಷ 67 ಲಕ್ಷ ಠೇವಣಿದಾರರ ಬಡ್ಡಿ 8.50 ಲಕ್ಷ ಬಡ್ಡಿ ಅನುಮಾಡಿಕೂಟ್ಟಿದ್ದಾಕ್ಕಾಗಿ ಲಾಭ ಕಡಿಮೆಯಾಗಿದೆ. ಇದಕ್ಕೆ ಹಿಂದಿನ ಮುಖ್ಯಕಾರ್ಯನಿರ್ವಾಹಕ ( ಕಾರ್ಯದರ್ಶಿ) ಮಾಡಿದ ತಪ್ಪಿನಿಂದ ನಷ್ಟ ಅನುಭವಿಸಬೇಕಾಗಿದೆ ಎಂದರು.
ಸಂಘದ ಕಟ್ಟಡ ಕಾಮಗಾರಿ ವಿಳಂಬವಾಗಿದೆ. ಸದ್ಯ ಡಿಸಿಸಿ ಬ್ಯಾಂಕ್ ನಬಾರ್ಡ್ನಿಂದ ಕಡಿಮೆ ದರದ ಬಡ್ಡಿಯಲ್ಲಿ ಸಾಲ ಮಂಜೂರಾತಿ ಪಡೆದು ಕಟ್ಟಡ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ ಅವರಿಂದ 10 ಲಕ್ಷ ರೂ ಅನುದಾನ ಹಾಗೂ ಶಾಸಕ ಸಿ.ಎಸ್ ನಾಡಗೌಡರು 10 ಲಕ್ಷ ರೂ.ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಬರುವ ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವ್ಹಿಡಿಸಿಸಿ ಬ್ಯಾಂಕ್ ಢವಳಗಿ ಶಾಖೆಯ ಕ್ಷೇತ್ರಾಧಿಕಾರಿ ಪ್ರವೀಣ ಚಿಕ್ಕೂಂಡ ಮಾತನಾಡಿದರು.ವೃತ್ತಿಪರ ನಿರ್ದೇಶಕ ಡಿ.ಬಿ.ಬೇಲಾಳ ವಾರ್ಷಿಕ ವರದಿ ವಾಚನ ಮಾಡಿದರು. ಸಭೆಯಲ್ಲಿ ರೈತರು ಭೀಕರ ಬರಗಾಲವಿದೆ ಸರಕಾರ ರೈತರ ಸಾಲಮನ್ನಾ ಅಥವಾ ಬಡ್ಡಿ ಮನ್ನಾ ಮಾಡಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.ಸಭೆಯ ಸಾನಿಧ್ಯವಹಿಸಿದ್ದ ಶರಣಸೋಮನಾಳದ ಮಹಾದೇವಯ್ಯಶಾಸ್ತ್ರೀ ಆಶೀರ್ವಚನ ನೀಡಿದರು.
ಸಭೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಾಬು ಸೂಳಿಭಾವಿ, ನಿರ್ದೇಶಕರಾದ ಸಿಂಧುಬಲ್ಲಾಳ ನಾಡಗೌಡ, ಸುನಿಲ್‌ಕುಮಾರ ಸೂಳಿಭಾವಿ, ಎಸ್.ಎನ್.ಮೇಟಿ, ಬಿ.ಬಿ.ಪಾಟೀಲ್, ಎಲ್.ಆರ್. ಸೋಮನಾಳ, ಶಾಂತಪ್ಪ ಸಂಕನಾಳ, ಎಂ.ಬಿ, ತಳವಾರ, ಪಾರ್ವತಿ ಸಾಲಿಮಠ, ಸಿದ್ದಮ್ಮ ಬಿರಾದಾರ, ಎಸ್.ಬಿ.ಚಲವಾದಿ ಸೇರಿದಂತೆ ಸಂಘದ ಶೇರುದಾರರು ಸದಸ್ಯರು ರೈತರು ಭಾಗವಹಿಸಿದ್ದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಸನಗೌಡ ಕೊಣ್ಣೂರ ವಾರ್ಷಿಕ ಪಕ್ಷಿನೋಟ ವಿವರಿಸಿದರು.ಶಿಕ್ಷಕ ಪ್ರಕಾಶ ಗೂಂಧಳೆ ಕಾರ್ಯಕ್ರಮ ನಿರೂಪಿಸಿದರು.ಮಂಜುನಾಥ ಚಲವಾದಿ ವಂದಿಸಿದರು.







