ಮುದ್ದೇಬಿಹಾಳ : ಸಂಪೂರ್ಣ ಬಂದ್ ಮಾಡಿ ಜನರು ಸಹಕರಿಸಿದ್ದಾರೆ.ಶಾಸಕ ನಾಡಗೌಡರ ಮಾತಿಗೆ ಜನರು ಬೆಲೆ ನೀಡಿಲ್ಲ.ಅನ್ನ ಉಣ್ಣುವ ಪ್ರತಿಯೊಬ್ಬರು ರೈತರ ಹೋರಾಟಕ್ಕೆ ಬೆಂಬಲಿಸಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಆವರಣದ ಸೈನಿಕ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ವೇದಿಕೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು.ಅಪ್ಪಾಜಿ ನಾಡಗೌಡರು ಸಂಪೂರ್ಣ ಹತಾಶೆಯಾಗಿದ್ದಾರೆ.ಕಾಂಗ್ರೆಸ್‌ನಲ್ಲಿ ಇವರಿಗೆ ಕಿಮ್ಮತ್ತು ಕೊಡುತ್ತಿಲ್ಲ.ಆರು ಸಲ ಶಾಸಕರಾದರೂ ಮಂತ್ರಿ ಮಾಡಲಿಲ್ಲ.ಕಾಂಗ್ರೆಸ್ ಸರ್ಕಾರ ಇವರ ನಿಗಮದ್ದು ಖುರ್ಚಿ ಕಸಿದುಕೊಂಡಿದೆ.ಮುದ್ದೇಬಿಹಾಳದ ಜನ ಕೂಡಾ ಛೀ ಥೂ ಎನ್ನುತ್ತಿದ್ದಾರೆ.ನಾಡಗೌಡರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ.ಸ್ವಲ್ಪ ದಿನ ಆರೋಗ್ಯದ ಚಿಕಿತ್ಸೆ ಪಡೆದುಕೊಂಡು ಸಾರ್ವಜನಿಕ ಸೇವೆಗೆ ಮರಳಲಿ ಎಂದು ನಡಹಳ್ಳಿ ಹೇಳಿದರು.
ಸೋಮವಾರದ ಒಳಗಡೆ ಕ್ಷೇತ್ರದ ಎರಡೂ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆ ಮಾಡಬೇಕು.ಶಾಸಕ ಅಪ್ಪಾಜಿ ನಾಡಗೌಡರೇ ಹೇಳಿದಂತೆ ಬರಪೀಡಿತ ತಾಲ್ಲೂಕು ಘೋಷಣೆ ಮಾಡದಿದ್ದರೆ ತಹಶೀಲ್ದಾರ್ ಕಚೇರಿ ಒಳಗಡೆ ಧರಣಿ ಕೂಡುತ್ತೇನೆ ಎಂದಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಧರಣಿ ಹೂಡಬೇಕು.ಇಲ್ಲದಿದ್ದಲ್ಲಿ ನಿಮಗೆ ಮಾತು ತಪ್ಪಿದ ಮಗ ಎಂಬ ಬಿರುದು ಜನ ಕೊಡುತ್ತಾರೆ.ಜನ ನಿಮ್ಮನ್ನು ಬಣ್ಣ ಬದಲಿಸುವ ಊಸರವಳ್ಳಿಗೆ ಹೋಲಿಸುತ್ತಾರೆ ಎಂದು ನಡಹಳ್ಳಿ ವ್ಯಂಗ್ಯವಾಡಿದರು.
ಅಡವಿ ಹುಲಗಬಾಳದ ರೈತ ಭೀಮಣ್ಣ ಬಿಜ್ಜೂರ ಮಾತನಾಡಿ, ಮಳೆಯಾಗದೇ ಇರುವುದರಿಂದ ಬಿತ್ತನೆ ಮಾಡಿದ ಬೀಜ,ಗೊಬ್ಬರ ಹಾಳಾಗಿದೆ.ಹೊಲಕ್ಕೆ ಹೋಗಬೇಕಾದರೆ ಕಣ್ಣೀರು ಹಾಕುತ್ತಿದ್ದೇವೆ ಎಂದು ಹೇಳಿದರು. ನಾಲತವಾಡ ಚಳಗೇರಿ ಮಾತನಾಡಿ, ಹೊಲಗೊಳದಲ್ಲಿ ಕಬ್ಬು,ಸಜ್ಜಿ,ಸೂರ್ಯಪಾನ,ತೊಗರಿ ಹಾಕಿದ್ದೇವೆ.ಮಳೆ ಇಲ್ಲದೇ ಎಲ್ಲವೂ ಒಣಗಿದೆ.ಎಂಎಲ್ ಅವರು ನೋಡಿದರೆ ಬೆಂಗಳೂರಲ್ಲಿ ಕೂಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಸ್.ಪಾಟೀಲ್,ಕೆoಚಪ್ಪ ಬಿರಾದಾರ,ಎಂ.ಬಿ.ಅoಗಡಿ,ಸoತೋಷ ಬಾದರಬಂಡಿ,ಗುರುನಾಥ ಬಿರಾದಾರ,ಮಲ್ಲಿಕಾರ್ಜುನ ತಂಗಡಗಿ,ಗೌರಮ್ಮ ಹುನಗುಂದ,ಸoಗಮ್ಮ ದೇವರಳ್ಳಿ,ಶಿವು ಕನ್ನೊಳ್ಳಿ, ಮದನಸ್ವಾಮಿ ಹಿರೇಮಠ, ಜಗದೀಶ ಪಂಪಣ್ಣವರ,ಸoಗಮೇಶ ಮೇಟಿ,ಗಿರೀಶಗೌಡ ಪಾಟೀಲ ಸೇರಿದಂತೆ ನೂರಾರು ರೈತ ಮುಖಂಡರು ಪಾಲ್ಗೊಂಡಿದ್ದರು.
ಕೊಟ್ಟು ಸತ್ರ ನಾವು ಸತ್ತಾಗ ಸಾವಿರ ಮಂದಿ ಅಳತಾರೆ.ಕೂಡಿಟ್ಟು ಸತ್ರ ಸತ್ತಿದ್ದು ಚೊಲೊ ಆಯ್ತೆಳ ಮಗ ಸತ್ತಿದ್ದು ಅನ್ನುತ್ತಾರೆ.ನಾನು ಕೊಟ್ಟು ಸಾಯುವ ಕುಲಕ್ಕೆ ಸೇರಿದವನು.ತಾಲ್ಲೂಕಿನ ರೈತಾಪಿ ವರ್ಗದ,ಅಭಿವೃದ್ಧಿ ಚಿಂತೆ ನನಗಿದೆ.ನಮ್ಮ ರೈತರು ಮುಗ್ದರು. ಜನರು,ರಾಜಕಾರಣಿಗಳು ಬದಲಾಗಬೇಕು.ಜನರನ್ನು ಕತ್ತಲಲ್ಲಿ ಇಟ್ಟು ಆಡಳಿತ ನಡೆಸುವವರ ಬಗ್ಗೆ ಜಾಗೃತಿಯಿಂದಿರಬೇಕು.
–-ಎ.ಎಸ್.ಪಾಟೀಲ ನಡಹಳ್ಳಿ,ಮಾಜಿ ಶಾಸಕರು.







