ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಮುದ್ದೇಬಿಹಾಳ : ಸುಮಾರು 30-40 ವರ್ಷದಿಂದ ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಸರ್ಕಾರದಿಂದ ಮನೆಯ ಹಕ್ಕುಪತ್ರ ಮತ್ತು ಉತಾರೆ ಹಾಗೂ ಮೂಲಭೂತ ಸೌರ್ಕಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಪಿಲೇಕೆಮ್ಮ ನಗರದ ನಿವಾಸಿಗಳು ಅಪರ ಜಿಲ್ಲಾಧಿಕಾರಿಗಳಾದ ಔದ್ರಾಮ್ ಅವರಿಗೆ ಈಚೇಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸರ್ಕಾರದಿಂದ 24-03-2020 ಆದೇಶದಂತೆ ಕೊಳಗೇರಿ ಮಂಡಳಿಯವರಿಗೆ ಸರ್ವೆ ಮಾಡಿ ಹಕ್ಕುಪತ್ರ ಮತ್ತು ನಿಗದಿತ ಅವಧಿಯೊಳಗೆ ಎಲ್ಲಾ ಸ್ಲಂ ನಿವಾಸಿಗಳಿಗೆ ಉತಾರೆ ಮತ್ತು ಮೂಲಭೂತ ಸೌರ್ಕಾಗಳನ್ನು ನೀಡಲು ಸರಕಾರ ಆದೇಶ ಮಾಡಿದೆ.ಅದರಂತೆ ಕೊಳಗೇರಿ ಮಂಡಳಿಯವರು ಸರ್ವೆ ಮಾಡಿಸಿ ಕೆಲವರಿಗೆ ಹಕ್ಕುಪತ್ರ ನೀಡಿ ಐದಾರು ವರ್ಷಗಳು ಕಳೆದರೂ ಬಹುತೇಕ ಜನರಿಗೆ ಉತಾರೆ ಹಾಗೂ ಇನ್ನುಳಿದ ಹಕ್ಕುಪತ್ರಗಳನ್ನು ನೀಡಿಲ್ಲ.ಸಾಕಷ್ಟು ಸಲ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರೂ ಕೂಡ ಸಂಬAಧಿಸಿದ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಸರಕಾರದ ಆದೇಶವನ್ನು ಗಾಳಿಗೆ ತೂರಿ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದು ಇದರಿಂದ ಸ್ಲಂ ನಿವಾಸಿಗಳ ಮನೆ ದುರಸ್ತಿಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಯ ಖರ್ಚುವೆಚ್ಚ , ಇನ್ನಿತರರ ಶುಭ ಸಮಾರಂಭಗಳಿಗಾಗಿ ಬ್ಯಾಂಕಿಗೆ ಸಾಲ ಪಡೆಯಲು ಅರ್ಜಿ ಕೊಟ್ಟರೆ ಬ್ಯಾಂಕಿನವರು ಮನೆಯ ಉತಾರೆ ಕೇಳುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸರಕಾರವು ಸ್ಲಂ ನಿವಾಸಿಗಳಿಗಾಗಿಯೇ ಸಾಕಷ್ಟು ಯೋಜನೆಗಳು ಜಾರಿಗೊಳಿಸಿದ್ದರೂ ಅದರ ಪ್ರಯೋಜನ ಇಲ್ಲಿನ ನಿವಾಸಿಗಳಿಗೆ ದೊರೆಯುತ್ತಿಲ್ಲ.ವಾರ್ಡಗಳ ರಸ್ತೆಗಳಂತೂ ಹದಗೆಟ್ಟಿದ್ದು ಚರಂಡಿಗಳು ತುಂಬಿ ಹರಿದರೂ ಸಂಬAಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.ಈ ವಿಷಯವಾಗಿ ಶಾಸಕ ಸಿ.ಎಸ್.ನಾಡಗೌಡರು ಸ್ಲಂ ಅಧಿಕಾರಿಗಳಿಗೆ ಸೂಚನೆ ಕೊಟ್ಟರೂ ಕೂಡ ಕೊಳಗೇರಿ ಮಂಡಳಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ ಎಂದು ತಿಳಿಸಿದ್ದಾರೆ.

ಕೂಡಲೇ ಬಾಕಿ ಉಳಿದಿರುವ ಹಕ್ಕುಪತ್ರ ಹಾಗೂ ಉತಾರೆಗಳನ್ನು ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಚಂದ್ರಶೇಖರ್ ಎಲ್. ಬಿಳೇಭಾವಿ, ಪ್ರಭಯ್ಯ ಮಠ, ಅಜರುದ್ದೀನ್ ಮೂಲಿಮನಿ, ರಾಜೇಸಾಬ ದೇವೂರ್, ಸಾಹೇಬಲಾಲ ರಿಸಲ್ದಾರ್, ರಾಮು ಲಮಾಣಿ, ಡೊಂಗರಿಸಾಬ್ ಕೂಡಗಿ, ಗುಲಾಬಶಾ ಮಕಾನದಾರ್ , ಸಿದ್ಧಾರ್ಥ್ ಎ. ಪಾದಗಟ್ಟಿ, ಬಸವರಾಜ್ ಕಟ್ಟಿ,ವೈ.ವೈ.ಮಲಘಾಣ, ಶಾಂತಗೌಡ ಪಾಟೀಲ್, ಎಂ. ಎಚ್. ಬಡಿಗೇರ್ ಮೊದಲಾದವರು ಮನವಿಗೆ ಸಹಿ ಮಾಡಿದ್ದಾರೆ.

Latest News

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ತಾಲ್ಲೂಕು ಬರಪೀಡಿತ ಎಂದು ಘೋಷಣೆಗೆ ಸ್ಥಳ ಪರಿಶೀಲನೆಗೆ ಆದೇಶ ಮಾಡಿದ್ದಾರೆ.ಅಧಿಕೃತವಾಗಿ ಬರಪೀಡಿತ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ

ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ:                                ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ: ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನ ವರದಿ ವರ್ಷದಲ್ಲಿ ಸಂಘದ ಆದಾಯ ಒಟ್ಟು 1.04

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ:                              ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟದ ಭಾಗವಾಗಿ ಆರನೇ ದಿನದ ಪ್ರತಿಭಟನೆಯನ್ನು ಮುದ್ದೇಬಿಹಾಳ ಬಂದ್ ಕರೆ ನೀಡುವ ಮೂಲಕ ಮುಂದುವರೆಸಲಾಗಿತ್ತು.ಬoದ್‌ಗೆ ವ್ಯಾಪಾರಸ್ಥರು,ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುದ್ದೇಬಿಹಾಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಲ್ಲ ಅಂಗಡಿ

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ 50 ಸಾವಿರ ರೂ.ಗಳಿಂದ ಗರಿಷ್ಠ 5 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ.ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಿವಾನಂದ ಪಿ. ಹೇಳಿದರು. ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶುಕ್ರವಾರ ನಡೆದ ಸಿಡ್ಬಿ ಸಮೃದ್ಧಿ