ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ ಅಭಿಮಾನಿಗಳು ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿ ಬಿಡುಗಡೆಯಾಗುತ್ತಲೇ ಅದರಲ್ಲಿ ಮುದ್ದೇಬಿಹಾಳ ತಾಲ್ಲೂಕು ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ,ಸಿಎಂ,ಕoದಾಯ ಮಂತ್ರಿ ಹಾಗೂ ಶಾಸಕ ಸಿ.ಎಸ್.ನಾಡಗೌಡರಿಗೆ ಜಯಘೋಷಗಳನ್ನು ಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡರು ಸತತ ಪಕ್ಷದ ಮೇಲೆ ಹಾಕಿದ ಒತ್ತಡ ಹಾಗೂ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು,ಶಾಸಕ ಸಿ.ಎಸ್.ನಾಡಗೌಡರ ಪರಿಶ್ರಮದಿಂದ ಬರಪೀಡಿತ ತಾಲ್ಲೂಕು ಘೋಷಣೆಯಾಗಿದೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಉದ್ಯಮಿ ಶರಣು ಸಜ್ಜನ ಮಾತನಾಡಿ, ಶಾಸಕ ನಾಡಗೌಡರ ಪ್ರಯತ್ನದ ವಿಶೇಷ ಶ್ರಮದಿಂದ ಬರಪೀಡಿತ ತಾಲ್ಲೂಕು ಘೋಷಣೆ ಆಗಿದೆ.ರೈತರ ಹೆಸರಲ್ಲಿ ನಾಟಕ ಮಾಡುವವರಿಂದ ಆಗಿಲ್ಲ ಎಂದು ಹೇಳಿದರು. ಯುವ ಮುಖಂಡ ಮಹ್ಮದರಫೀಕ ಶಿರೋಳ ಮಾತನಾಡಿದರು. ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಮುಖಂಡರಾದ ಸಂಗನಗೌಡ ಬಿರಾದಾರ,ಸಿಕಂದರ ಜಾನ್ವೇಕರ,ಬಾಪುಗೌಡ ಪೀರಾಪೂರ,ಮುತ್ತು ಕಡಿ,ಬಸವರಾಜ ಗೋನಾಳ,ರಂಜಾನ ನದಾಫ,ಗೋಪಿ ಮಡಿವಾಳರ,ಸಂತೋಷ ನಾಯ್ಕೋಡಿ,ಯಲ್ಲಪ್ಪ ನಾಯ್ಕಮಕ್ಕಳ,ಸೋಯೇಬ ಪಟೇಲ ಮೊದಲಾದವರು ಇದ್ದರು.

ಬರ ಬಿದ್ದರೂ ಪಟಾಕಿ ಸಿಡಿಸಿದ ಕಾರ್ಯಕರ್ತರು:
ಮಳೆ,ಬೆಳೆ ಇಲ್ಲದೇ ಹೊಲ ನೋಡದ ಪರಿಸ್ಥಿತಿಯಲ್ಲಿ ಅನ್ನದಾತನಿದ್ದಾನೆ.ಬರಪೀಡಿತ ತಾಲ್ಲೂಕು ಘೋಷಣೆಯ ಪೈಪೋಟಿಗೆ ಬಿದ್ದಿರುವ ಎರಡು ರಾಷ್ಟಿçÃಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ತಮ್ಮ ನಾಯಕರ ಹೋರಾಟದಿಂದಲೇ ಬರಪೀಡಿತ ತಾಲ್ಲೂಕು ಘೊಷಣೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುoಖವಾಗಿ ಸಂದೇಶಗಳನ್ನು ಹರಿಬಿಡುತ್ತಲೇ ಇದ್ದಾರೆ.ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,ಮುಖಂಡರು ಬರಪೀಡಿತ ಪಟ್ಟಿಯಲ್ಲಿ ಮುದ್ದೇಬಿಹಾಳ ಹೆಸರು ಬಂದಿದ್ದಕ್ಕೇನೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.ಸಾಮಾನ್ಯ ಜನರು ಇದೇನು ಯಾರಾದರೂ ಪಕ್ಷದವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೋ,ದೇಶದ ಯಾವುದಾದರೂ ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯಿತೆಂದು ಇವರು ಸಂಭ್ರಮಾಚರಣೆ ಮಾಡಿದ್ದಾರೆ ಎಂಬುದು ಹಲವು ಬಗೆಯಲ್ಲಿ ಚರ್ಚೆಯ ವಸ್ತುವಾಗಿದೆ.ರೈತರು ದುಃಖದಲ್ಲಿದ್ದರೂ ಇವರು ವಿಜಯೋತ್ಸವ ಆಚರಿಸಿರುವುದು ಅದು ಸ್ವಪಕ್ಷದ ಸರ್ಕಾರ ಇದ್ದಾಗಲೇ ಈ ಕಾರ್ಯ ಮಾಡಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬಂದಿವೆ.

Latest News

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಮುದ್ದೇಬಿಹಾಳ : ಆರೋಗ್ಯ ಇಲಾಖೆಯಲ್ಲಿ ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳು (ಬಿಎಚ್‌ಇಓ) ಹಾಗೂ ಪದವೀಧರ ಪ್ರಾಥಮಿಕ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಮುದ್ದೇಬಿಹಾಳ : ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಕ್ತಿವಂತ ದೇವರೆಂದೇ ಪ್ರಸಿದ್ಧಿಯಾದ ಶ್ರೀ ವೀರಭದ್ರೇಶ್ವರ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ:                                 ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ: ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ಮುದ್ದೇಬಿಹಾಳ : ಸಂಪೂರ್ಣ ಬಂದ್ ಮಾಡಿ ಜನರು ಸಹಕರಿಸಿದ್ದಾರೆ.ಶಾಸಕ ನಾಡಗೌಡರ ಮಾತಿಗೆ ಜನರು ಬೆಲೆ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು

ಮಾಜಿ ಶಾಸಕ ನಡಹಳ್ಳಿ ಆಗ್ರಹ:                                                           ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮಾಜಿ ಶಾಸಕ ನಡಹಳ್ಳಿ ಆಗ್ರಹ: ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮುದ್ದೇಬಿಹಾಳ : ರಾಜ್ಯದಲ್ಲಿ 199 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಾಂಗ್ರೆಸ್ ಸರ್ಕಾರ ರೈತರ ಐದು ಲಕ್ಷಗಳವರೆಗಿನ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು. ಪಟ್ಟಣದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆದಿರುವ ಧರಣಿ ಸತ್ಯಾಗ್ರಹದ ನಾಲ್ಕನೇ ದಿನದ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮುದ್ದೇಬಿಹಾಳ ತಾಲ್ಲೂಕು ಮಾತ್ರ ಬರಪಟ್ಟಿಗೆ ಸೇರ್ಪಡೆಯಾದರೆ ಸುಮ್ಮನಾಗುವುದಿಲ್ಲ.ಕ್ಷೇತ್ರದ ತಾಳಿಕೋಟಿ ತಾಲ್ಲೂಕು, ಜಿಲ್ಲೆಯ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ಸಂಸ್ಥೆಯ ವತಿಯಿಂದ ಸೆ.11 ರಂದು ಬೆಳಗ್ಗೆ 9ಕ್ಕೆ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿದ ಪೊಲೀಸರಿಗೆ,ಪೊಲೀಸ್ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸುವರು.ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಜ್ಯೋತಿ ಬೆಳಗಿಸುವರು.ಸಂಸ್ಥೆ ಅಧ್ಯಕ್ಷ ಕೆ.ವಾಯ್.ಬಿರಾದಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ನಾಡಗೌಡ್ರ,ಪ್ರಧಾನ ಕಾರ್ಯದರ್ಶಿ