ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದರು.

ಪಟ್ಟಣದ ಮುದ್ದೇಬಿಹಾಳ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ(ಪಿಕಾರ್ಡ್)ದ ಬ್ಯಾಂಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 62ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಕಳೆದ 3 ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಸತತ ಮೂರುಬಾರಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯದಲ್ಲಿ 6 ನೇ ಸ್ಥಾನದಲ್ಲಿದ್ದೇವೆ.ಕಳೆದ 62 ವರ್ಷಗಳಿಂದ ಬ್ಯಾಂಕು ಅನೇಕ ಬಾರಿ ಪ್ರಕೃತಿ ವಿಕೋಪ ಹಾಗೂ ನೆರೆ ಹಾವಳಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಸಹ ತಾಲೂಕಿನ ರೈತ ಬಾಂಧವರಿಗೆ ಭೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ತಾಲ್ಲೂಕಿನಲ್ಲಿ ಭೀಕರ ಬರಪರಿಸ್ಥಿತಿ ಇದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ಪಡೆದುಕೊಂಡಿರುವ ಸಾಲವನ್ನು ಕಟ್ಟಲಾಗದ ಪರಿಸ್ಥಿತಿಯಲ್ಲಿದ್ದು ಸರಕಾರ ರೈತರು ಪಡೆದ ಸಾಲ ಅಥವಾ ಸಾಲದ ಬಡ್ಡಿಯನ್ನಾದರೂ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಸಂಘದ ಹಿರಿಯ ನಿರ್ದೇಶಕ ಮನೋಹರ ಮೇಟಿ ಮಾತನಾಡಿ, ಪಿಕಾರ್ಡ್ ಬ್ಯಾಂಕ್ ಸಾಮಾನ್ಯ ಸಭೆಯಲ್ಲಿ ರೈತರ ಮುಂದೆ ಪ್ರಸ್ತಾಪಿತವಾದ ವಿಷಯಗಳನ್ನೇ ಠರಾವಿನಲ್ಲಿ ನಮೂದಿಸಬೇಕು ಎಂದು ಬ್ಯಾಂಕ್ ಅಧ್ಯಕ್ಷರ ಗಮನಕ್ಕೆ ತಂದರು. ಪಿಕಾರ್ಡ್ ವ್ಯವಸ್ಥಾಪಕ ಎ.ಜಿ ಲಮಾಣಿ ವಾರ್ಷಿಕ ವರದಿ ವಾಚನ ಮಾಡಿದರು.

ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ.ಬಿ.ಕಮರಿ, ನಿರ್ದೇಶಕರಾದ ನೀಲಕಂಠರಾವ ಎಸ್ ದೇಶಮುಖ,ನಿಂಗಪ್ಪಗೌಡ ಬಪ್ಪರಗಿ, ಬಿ.ಸಿ ಬಗಲಿ, ಎಸ್.ಎಸ್.ಸೋಮನಾಳ, ಬಿ.ಜಿ ನರೂಡಿ, ಎ.ಬಿ ನಡಹಳ್ಳಿ, ಎಲ್. ಜೆ.ಪೂಜಾರಿ, ಆರ್.ಎಚ್.ಬಿರಾದಾರ, ಆರ್ .ಜಿ.ನಾಯಕ, ಸಿ.ಎಸ್. ಭಂಗಿ ವಿಜಯಪುರದ ಲೆಕ್ಕ ಪರಿಶೋಧಕ ಅಧಿಕಾರಿ ಕಿರಣ್ ಇನಾಮದಾರ ಸೇರಿದಂತೆ ಬ್ಯಾಂಕ್ ಶೇರುದಾರರು, ರೈತರು, ಸದಸ್ಯರು ಹಾಗೂ ಪಿಕಾರ್ಡ್ ಬ್ಯಾಂಕ್ ಸಿಬ್ಬಂದಿ ಇದ್ದರು.

Latest News

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಮುದ್ದೇಬಿಹಾಳ : ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಕ್ತಿವಂತ ದೇವರೆಂದೇ ಪ್ರಸಿದ್ಧಿಯಾದ ಶ್ರೀ ವೀರಭದ್ರೇಶ್ವರ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ:                                 ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ: ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ಮುದ್ದೇಬಿಹಾಳ : ಸಂಪೂರ್ಣ ಬಂದ್ ಮಾಡಿ ಜನರು ಸಹಕರಿಸಿದ್ದಾರೆ.ಶಾಸಕ ನಾಡಗೌಡರ ಮಾತಿಗೆ ಜನರು ಬೆಲೆ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ಸಂಸ್ಥೆಯ ವತಿಯಿಂದ ಸೆ.11 ರಂದು ಬೆಳಗ್ಗೆ 9ಕ್ಕೆ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿದ ಪೊಲೀಸರಿಗೆ,ಪೊಲೀಸ್ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸುವರು.ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಜ್ಯೋತಿ ಬೆಳಗಿಸುವರು.ಸಂಸ್ಥೆ ಅಧ್ಯಕ್ಷ ಕೆ.ವಾಯ್.ಬಿರಾದಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ನಾಡಗೌಡ್ರ,ಪ್ರಧಾನ ಕಾರ್ಯದರ್ಶಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು 20.34 ಲಕ್ಷ ರೂ.ಲಾಭ ಮಾಡಿದೆ ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಮನೋಹರ ಎಸ್.ಮೇಟಿ(ಬಸರಕೋಡ) ಹೇಳಿದರು. ಪಟ್ಟಣದ ಏಪಿಎಂಸಿಯಲ್ಲಿರುವ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 69ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಆರ್ಥಿಕ ವ್ಯವಹಾರವನ್ನು ಸಭೆಗೆ ತಿಳಿಸಿದರು. ರೈತರು