ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ: ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ: ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನ ವರದಿ ವರ್ಷದಲ್ಲಿ ಸಂಘದ ಆದಾಯ ಒಟ್ಟು 1.04 ಕೋಟಿ ರೂ.ಗಳಷ್ಟಾಗಿದ್ದು ಖರ್ಚು-ವೆಚ್ಚ ಕಳೆದ ಒಟ್ಟು 13.56 ಲಕ್ಷ ರೂ.ಲಾಭ ಗಳಿಸಿದೆ ಎಂದು ಶ್ರೀ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿದರು.

ಪಟ್ಟಣದ ಬಸವ ಗಾರ್ಡನ್ ಮುಂಭಾಗದಲ್ಲಿ ಗುರುವಾರ ನಡೆದ ಸಂಘದ 18 ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯನ್ನುದ್ದೇಶಿ ಅವರು ಮಾತನಾಡಿದರು.

ಸಮಾಜದ ಹಾಗೂ ಸಂಘದ ಹಿರಿಯರ ಪರಿಶ್ರಮದ ಫಲದಿಂದ ಸಂಘ ಸ್ಥಾಪಿಸಿದ್ದು ಸಹಕಾರಿ ಸಂಘದಲ್ಲಿ ಸದ್ಯ ಸಾಕಷ್ಟು ನಿಯಮಗಳು ಬದಲಾವಣೆ ಆಗಿವೆ. ಪಡೆದಂತ ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು.ಸಾಲಗಾರನಿಗಿಂತ ಜಾಮೀನುದಾರನ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.

ಹೆಸ್ಕಾಂ ಎಇಇ ಆರ್.ಆರ್.ಹಂಡಿ,ಸAಘದ ನಿರ್ದೇಶಕ ಸಿ.ಎಂ.ಹಾವರಗಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬ್ರಹ್ಮಕುಮಾರಿ ಶೋಭಾ ಅಕ್ಕನವರು ನಶೆಮುಕ್ತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು.

ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಎಸ್.ಕಡಿ, ನಿರ್ದೇಶಕರುಗಳಾದ ಎ.ಎಸ್.ಕೋಟಿ, ಬಿ.ಎಸ್.ಅಮರಾವತಿ, ಜಿ.ಎಸ್.ಕಡಕೋಳ, ಸಿ.ಎಸ್.ಬೇನಾಳ, ಬಿ.ಸಿ.ಕಲ್ಲೂರ,ಶ್ರೀಮತಿ ಜಿ.ಎಂ. ಉಪ್ಪಲದಿನ್ನಿ, ಎಸ್.ಜಿ.ಚಿತ್ತವಾಡಗಿ,ಎಂ.ಬಿ.ಕೋಲಕಾರ,ಎA.ಎA.ಗAಜಿಹಾಳ, ಬಿ.ಬಿ.ಹೆಗಡೆ, ಗೌರವ ನಿರ್ದೇಶಕರಾದ ಎಸ್.ಬಿ.ಹೊನ್ನಳ್ಳಿ,ಡಾ.ಎ.ಎ.ಚೌಧರಿ ಸೇರಿದಂತೆ ಪದಾಧಿಕಾರಿಗಳು ಸಂಘದ ಸದಸ್ಯರು ಶೇರುದಾರರು, ಸಿಬ್ಬಂದಿಗಳು ಭಾಗವಹಿಸಿದ್ದರು.

ವಾರ್ಷಿಕ ವರದಿ ವಾಚನವನ್ನು ವ್ಯವಸ್ಥಾಪಕ ಎಸ್.ಎಸ್.ಮಾಗಿ ಮಾಡಿದರು.ಸಿಬ್ಬಂದಿ ವಾಯ್.ಎ.ಹುಬ್ಬಳ್ಳಿ,ಎಸ್.ಆಯ್.ಶಾಬಾದಿ,ಬಿ.ಎಸ್.ಸೋಬಾನದ,ಬಿ.ಎಸ್.ಕುಂಬಾರ,ಎಚ್.ಸಿ.ಕಣಕಾಲ,ಎಚ್.ಎಸ್.ಹೊಳಿ,ಎಸ್.ಜಿ.ಅAಟರದಾನಿ ಮೊದಲಾದವರು ಇದ್ದರು.

Latest News

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಮುದ್ದೇಬಿಹಾಳ : ಆರೋಗ್ಯ ಇಲಾಖೆಯಲ್ಲಿ ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳು (ಬಿಎಚ್‌ಇಓ) ಹಾಗೂ ಪದವೀಧರ ಪ್ರಾಥಮಿಕ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಮುದ್ದೇಬಿಹಾಳ : ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಕ್ತಿವಂತ ದೇವರೆಂದೇ ಪ್ರಸಿದ್ಧಿಯಾದ ಶ್ರೀ ವೀರಭದ್ರೇಶ್ವರ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ:                                 ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ: ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ಮುದ್ದೇಬಿಹಾಳ : ಸಂಪೂರ್ಣ ಬಂದ್ ಮಾಡಿ ಜನರು ಸಹಕರಿಸಿದ್ದಾರೆ.ಶಾಸಕ ನಾಡಗೌಡರ ಮಾತಿಗೆ ಜನರು ಬೆಲೆ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು

ಮಾಜಿ ಶಾಸಕ ನಡಹಳ್ಳಿ ಆಗ್ರಹ:                                                           ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮಾಜಿ ಶಾಸಕ ನಡಹಳ್ಳಿ ಆಗ್ರಹ: ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮುದ್ದೇಬಿಹಾಳ : ರಾಜ್ಯದಲ್ಲಿ 199 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಾಂಗ್ರೆಸ್ ಸರ್ಕಾರ ರೈತರ ಐದು ಲಕ್ಷಗಳವರೆಗಿನ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು. ಪಟ್ಟಣದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆದಿರುವ ಧರಣಿ ಸತ್ಯಾಗ್ರಹದ ನಾಲ್ಕನೇ ದಿನದ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮುದ್ದೇಬಿಹಾಳ ತಾಲ್ಲೂಕು ಮಾತ್ರ ಬರಪಟ್ಟಿಗೆ ಸೇರ್ಪಡೆಯಾದರೆ ಸುಮ್ಮನಾಗುವುದಿಲ್ಲ.ಕ್ಷೇತ್ರದ ತಾಳಿಕೋಟಿ ತಾಲ್ಲೂಕು, ಜಿಲ್ಲೆಯ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ಸಂಸ್ಥೆಯ ವತಿಯಿಂದ ಸೆ.11 ರಂದು ಬೆಳಗ್ಗೆ 9ಕ್ಕೆ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿದ ಪೊಲೀಸರಿಗೆ,ಪೊಲೀಸ್ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸುವರು.ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಜ್ಯೋತಿ ಬೆಳಗಿಸುವರು.ಸಂಸ್ಥೆ ಅಧ್ಯಕ್ಷ ಕೆ.ವಾಯ್.ಬಿರಾದಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ನಾಡಗೌಡ್ರ,ಪ್ರಧಾನ ಕಾರ್ಯದರ್ಶಿ