ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ: ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ: ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಮುದ್ದೇಬಿಹಾಳ : ಸಮಾಜದಲ್ಲಿ ನಿನ್ನ ನೋಡಿಕೊಳ್ತೀನಿ ಎಂದವರು ಯಾರೂ ಉಳಿದಿಲ್ಲ. ಬಾಗಿದ್ದು ಮಾತ್ರ ಬಹಳ ದಿನ ಉಳಿಯುತ್ತದೆ.ಬೀಗಿದ್ದು ಬಹಳ ದಿನ ಉಳಿಯುವುದಿಲ್ಲ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.

ಪಟ್ಟಣದ ಏಪಿಎಂಸಿಯಲ್ಲಿರುವ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ ಚೇಂರ‍್ಸ್ ಆಫ್ ಕಾಮರ್ಸ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಉದ್ಯಮಿ ಶರಣು ಸಜ್ಜನ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಉದ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಂಡಿರುವ, ಎಲ್ಲರಿಗೂ ಬೇಕಾದ ವ್ಯಕ್ತಿ ಶರಣು ಸಜ್ಜನ. ಶಿಕ್ಷಣ, ಸಾಮಾಜಿಕ, ವಾಣಿಜ್ಯೋದ್ಯಮ , ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅವರನ್ನು ಎಲ್ಲರೂ ಪ್ರೀತಿಯಿಂದ,ಗೌರವದಿoದ ಕಾಣುತ್ತಿದ್ದಾರೆ.ಹಿರಿಯರ ಹೆಸರಿನಿಂದಷ್ಟೇ ಅಲ್ಲದೇ ತನ್ನ ಸ್ವಂತ ಪರಿಶ್ರಮದಿಂದ ಬೆಳೆದು ಬಂದಿರುವ ವ್ಯಕ್ತಿತ್ವ ಸಜ್ಜನರು ಹೊಂದಿದ್ದಾರೆ ಎಂದರು.

ಜಿಪA ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಸಜ್ಜನ ಅವರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಿರುಗಾಡಿದ್ದು ನೋಡಿದ್ದೇನೆ.ಈಗ ಸ್ವಂತ ಕಾರುಗಳಲ್ಲಿ ಓಡಾಡುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ.ನಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಉದ್ಯಮಿಗಳ ಉದಾಹರಣೆಗಳನ್ನು ಹೇಳುವ ಬದಲು ನೂರಾರು ಕೈಗಳಿಗೆ ಕೆಲಸ ಕೊಟ್ಟ ಶರಣು ಸಜ್ಜನ ಅಂತವರ ಸ್ಪೂರ್ತಿಯ ಕತೆಯನ್ನ ಹೇಳಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕ ಶರಣು ಸಜ್ಜನ ಮಾತನಾಡಿ, ಮುದ್ದೇಬಿಹಾಳಕ್ಕೆ ನನ್ನ ಪರಿಚಯಿಸಿದ್ದು ಮಿತ್ರ ಸತೀಶ ಕುಲಕರ್ಣಿ,ಉದ್ಯಮದಲ್ಲಿ ಸಹಕಾರ ಮಾಡಿದವರು ಇಲ್ಲೂರು ಸಾಹುಕಾರರು.ಮಿತ್ರರೆಲ್ಲರ ಪ್ರೋತ್ಸಾಹ,ಸಹಕಾರದಿಂದ ಈ ಸ್ಥಾನಕ್ಕೆ ಬಂದಿದ್ದೇನೆ.ಎAದಿಗೂ ನಿಮ್ಮ ಈ ಅಭಿನಂದನೆಯನ್ನು ಮರೆಯುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಕೋ ಆಪರೇಟಿವ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ,ಶರಣು ಸಜ್ಜನವರ ವಿಲ್ ಪವರ್ ಅಗಾಧವಾಗಿದೆ.ಹಿಡಿದ ಕೆಲಸ ಬಿಡುವ ಜಾಯಮಾನ ಶರಣು ಸಜ್ಜನ ಅವರದ್ದಲ್ಲ.ನೇರ ನುಡಿಯುವ ಸ್ವಭಾವದವರು ಎಂದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ತಾಪಂ ಮಾಜಿ ಅಧ್ಯಕ್ಷ ವಾಯ್.ಎಚ್.ವಿಜಯಕರ್,ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ವರ್ತಕ ಬಿ.ಎಸ್.ಮೇಟಿ,ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮತ್ತಿತರರು ಮಾತನಾಡಿದರು. ಏಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮುತ್ತು ಬಿರಾದಾರ,,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ನಿಂಗಣ್ಣ ಚಟ್ಟೇರ,ಗಣ್ಯ ವರ್ತಕ ವಸಂತ ಇಲ್ಲೂರ,ಭರತ್ ಭೋಸಲೆ ಮತ್ತಿತರರು ಇದ್ದರು.ವಿನೋದ ಪಟಗಾರ ಕಾರ್ಯಕ್ರಮ ನಿರೂಪಿಸಿದರು.ವಿವಿಧ ಸಂಘ ಸಂಸ್ಥೆಗಳ ಮುಖಂಡರು,ವ್ಯಾಪಾರಸ್ಥರು ಸನ್ಮಾನಿಸಿದರು.

ಸ್ನೇಹದ ಅನುಭವ ಹಂಚಿಕೊoಡ ಕುಚಿಕು ಗೆಳೆಯರು: ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿರುವ ಉದ್ಯಮಿ ಶರಣು ಸಜ್ಜನವರ ಕುಚಿಕು ಗೆಳೆಯರಾದ ಸತೀಶ ಕುಲಕರ್ಣಿ, ಸುನೀಲ್ ಇಲ್ಲೂರ ಮಾತನಾಡಿ, ಯುವ ಉದ್ಯಮಿ ಶರಣು ಹಿಡಿದ ಕೆಲಸ ಬಿಡುವ ವ್ಯಕ್ತಿಯಲ್ಲ.ಯಾವುದೇ ವಿಷಯ ಇದ್ದರೂ ಎದುರಿನವರ ಮುಖದ ಮೇಲೆ ಹೇಳುವ ನೇರ ದಿಟ್ಟ ಸ್ವಭಾವದವರು ಎಂದು ಅನುಭವ ಹಂಚಿಕೊAಡರು.

Latest News

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ:                                        ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಮುದ್ದೇಬಿಹಾಳ : ಸುಮಾರು 30-40 ವರ್ಷದಿಂದ ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಸರ್ಕಾರದಿಂದ

ನಾಗರಬೆಟ್ಟ ಏತ ನೀರಾವರಿ ಯೋಜನೆ:                                ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ನಾಗರಬೆಟ್ಟ ಏತ ನೀರಾವರಿ ಯೋಜನೆ: ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 2018ರಲ್ಲಿಯೇ ಟೆಂಡರ್ ಆಗಿದ್ದು ಕಳೆದ ಎಂಟು

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುದ್ದೇಬಿಹಾಳ : ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ:                              ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದರು. ಪಟ್ಟಣದ ಮುದ್ದೇಬಿಹಾಳ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ(ಪಿಕಾರ್ಡ್)ದ ಬ್ಯಾಂಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 62ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಸತತ ಮೂರುಬಾರಿ ಜಿಲ್ಲೆಗೆ ಪ್ರಥಮ

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ:                     ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ: ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಮುದ್ದೇಬಿಹಾಳ : ಸರ್ಕಾರ ಕಾಲುವೆಗಳ ದುರಸ್ತಿಗೆ ಹಣ ಕೊಡುತ್ತಿಲ್ಲ.ನೀವೇ ಪಟ್ಟಿ ಹಾಕಿಕೊಂಡು ಕಾಲುವೆ ರಿಪೇರಿ ಮಾಡಿಕೊಳ್ಳಬೇಕು ಎಂದು ಕೆಬಿಜೆಎನ್‌ಎಲ್ ಎಎಲ್‌ಬಿಸಿ ಉಪವಿಭಾಗ ನಂ.2ದ ಅಧಿಕಾರಿ ನಮ್ಮ ರೈತರಿಗೆ ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ ಎಂದು ನಾಲತವಾಡದ ಯುವ ರೈತ ಮುಖಂಡ ಸಂಗಮೇಶ ಮೇಟಿ ಆರೋಪಿಸಿದರು. ತಾಲ್ಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಲ್ಯಾಟರಲ್ ನಂ.10ರ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ಹುಡ್ಕೋದಲ್ಲಿರುವ ಸಂಬAಧಿಸಿದ