ಸೀರತ್ ಅಭಿಯಾನ : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ-ಅಕ್ಬರ್‌ಅಲಿ ಉಡುಪಿ

ಸೀರತ್ ಅಭಿಯಾನ : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ-ಅಕ್ಬರ್‌ಅಲಿ ಉಡುಪಿ

ಮುದ್ದೇಬಿಹಾಳ : ಜಾತಿ, ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಪ್ರೀತಿ, ತ್ಯಾಗ ಹಾಗೂ ಸಮಾನತೆಯ ಮೌಲ್ಯಗಳನ್ನು ಸಾರಿದ ಪ್ರವಾದಿ ಮಹಮ್ಮದ್ ಪೈಗಂಬರ ಅವರ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್‌ಅಲಿ ಉಡುಪಿ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ ಸೀರತ್ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರವಾದಿ ಮಹಮ್ಮದ್ ಅವರ ಸಂದೇಶ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿನ ಅಸಮಾನತೆ, ಬಡತನ ಹಾಗೂ ಶೋಷಣೆಯ ವಿರುದ್ಧ ಧ್ವನಿ ಎತ್ತಿ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಬದುಕಿನ ಮಾರ್ಗವನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಎಲ್ಲ ಧರ್ಮಗಳ ಸಾರವೂ ಅಂತಿಮವಾಗಿ ಮಾನವೀಯತೆ, ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಯನ್ನೇ ಸಾರುತ್ತದೆ ಎಂದು ಅವರು ಹೇಳಿದರು.

ಓಂ ಶಾಂತಿ ಭವನದ ಬಿಕೆ ರೇಣುಕಾ ಅಕ್ಕನವರು ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಜಾತಿ-ಧರ್ಮದ ಭೇದಗಳನ್ನು ಮೀರಿ ಪ್ರೀತಿ, ತ್ಯಾಗ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪರಿವರ್ತನೆ ತಂದುಕೊAಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಫಾದರ್ ಸುನಿಲ್ ಮಾತನಾಡಿ, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಸರ್ವಧರ್ಮ ಸಮನ್ವಯದ ಆಶಯವನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ ಹಾಗೂ ಸಹೋದರತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎಂ.ಜಿ.ವಿ.ಸಿ ಕಾಲೇಜಿನ ಪ್ರೊ. ಆರ್.ಎಚ್. ಸಜ್ಜನ,ಜಮೆಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದ ಸಂಚಾಲಕ ನೂರೇನಬಿ ನದಾಫ,ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ನಾಸಿರ್ ಹುಸೇನ್ ಪ್ರವಾದಿ ಮೊಹ್ಮದ ಅವರ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Latest News

ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳದ ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘ ನಿಯಮಿತ 9

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ:                                       ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ: ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಮುದ್ದೇಬಿಹಾಳ : ಸಮಾಜದಲ್ಲಿ ನಿನ್ನ ನೋಡಿಕೊಳ್ತೀನಿ ಎಂದವರು ಯಾರೂ ಉಳಿದಿಲ್ಲ. ಬಾಗಿದ್ದು ಮಾತ್ರ ಬಹಳ

9.49 ಲಕ್ಷ ರೂ.ಲಾಭ :                                                           ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

9.49 ಲಕ್ಷ ರೂ.ಲಾಭ : ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ಈ ಆರ್ಥಿಕ ವರ್ಷದಲ್ಲಿ ಒಟ್ಟು 4.47 ಕೋಟಿ ರೂ.ಸಾಲ ರೈತರಿಗೆ ಹಂಚಿಕೆ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ : ಪ್ರಸಕ್ತ ವರ್ಷ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದು ರೈತರು ಸಂಕಷ್ಟದಲ್ಲಿದ್ದು ಶಾಸಕ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುದ್ದೇಬಿಹಾಳ : ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಸೆ.20ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ವಿದ್ಯಾನಗರದಲ್ಲಿರುವ ಓಸ್ವಾಲ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರಾಟೆ ಶಿಕ್ಷಕರ ಸಂಘದ ವಕ್ತಾರ ಶಿವಕುಮಾರ ಶಾರದಳ್ಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ

ಸನ್ಮಾನ,ಗೌರವಗಳು ಜವಾಬ್ದಾರಿ ಹೆಚ್ಚಿಸಿವೆ-ಮಕಾನದಾರ

ಸನ್ಮಾನ,ಗೌರವಗಳು ಜವಾಬ್ದಾರಿ ಹೆಚ್ಚಿಸಿವೆ-ಮಕಾನದಾರ

ಮುದ್ದೇಬಿಹಾಳ : ಸಮಾಜದಲ್ಲಿ ನಮಗೆ ದೊರೆಯುತ್ತಿರುವ ಗೌರವ,ಸನ್ಮಾನಗಳು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿವೆ ಎಂದು ಅಂಜುಮನ್ ಇಸ್ಲಾಂ ಕಮೀಟಿ ಹಿರಿಯ ಸದಸ್ಯ ಅಬ್ದುಲಗಫೂರ ಮಕಾನದಾರ ಹೇಳಿದರು. ಪಟ್ಟಣದ ಅಮಾನತ್ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಜುಮನ್ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಹಳ ವರ್ಷಗಳ ನಂತರ ಅಂಜುಮನ್ ಕಮೀಟಿಗೆ ಹೊಸ ಆಡಳಿತ ಮಂಡಳಿ ರಚನೆಯಾಗಿದೆ.ಇಸ್ಲಾಂ ಸಮಾಜದ ಏಳ್ಗೆಗೆ ಎಲ್ಲರೂ ಪಣ ತೊಟ್ಟು ಶ್ರಮಿಸೋಣ