ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ಔಷಧ ತಜ್ಞರು ವೈದ್ಯರ ಬೆನ್ನೆಲುಬಾಗಿದ್ದು ಜೀವ ಉಳಿಸುವ ಮಾರ್ಗದರ್ಶಕರಂತೆ ಕೆಲಸ ಮಾಡುತ್ತಿದ್ದಾರೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ ಏಪಿಎಂಸಿ ಸಭಾಂಗಣದಲ್ಲಿ ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ವೈದ್ಯರು ರೋಗ ಪತ್ತೆ ಹಚ್ಚಿದರೆ, ಔಷಧ ತಜ್ಞರು ಅದಕ್ಕೆ ಸರಿಯಾದ ಪರಿಹಾರ ನೀಡುತ್ತಾರೆ. ಗ್ರಾಮೀಣ ಭಾಗದಲ್ಲಿ ನಿಮ್ಮ ಪಾತ್ರ ದೇವರಿಗೆ ಸಮಾನ. ಔಷಧ ವ್ಯಾಪಾರಿ ಕೇವಲ ಮಾರಾಟಗಾರನಲ್ಲ, ಅವನು ರೋಗಿಯ ನೋವನ್ನು ಅರ್ಥಮಾಡಿಕೊಳ್ಳುವ ಸೇವಕ. ನಿಮ್ಮ ಕೈಯಿಂದ ಹೋಗುವ ಒಂದು ಮಾತ್ರೆ ರೋಗಿಗೆ ಮರುಜನ್ಮ ನೀಡುತ್ತದೆ. ಲಾಭಕ್ಕಿಂತ ಜೀವ ಮುಖ್ಯ. ನಕಲಿ ಔಷಧ, ಅವಧಿ ಮೀರಿದ ಔಷಧಗಳನ್ನು ತ್ಯಜಿಸಿ, ಧರ್ಮ ಮತ್ತು ಪ್ರಾಮಾಣಿಕತೆಯಿಂದ ವ್ಯಾಪಾರ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ವಿಜಯಪುರ ಸಹಾಯಕ ಔಷಧ ನಿಯಂತ್ರಕರಾದ ಆರ್.ಪರಶುರಾಮ ಮಾತನಾಡಿ, ಔಷಧ ವ್ಯಾಪಾರಸ್ಥರ ಸಂಘದಿAದ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಔಷಧ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್.ಎತ್ತಿನಮನಿ,ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಸಿದ್ದಾಪೂರ, ಆಯುಷ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಸಿ.ಕೆ.ಶಿವಯೋಗಿಮಠ ,ಸನ್ಮಾನಿತರ ಪರವಾಗಿ ಕರ್ನಾಟಕ ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ ಓಸ್ವಾಲ್, ಉದ್ಯಮಿ ಅಯೂಬ್ ಮನಿಯಾರ್ ಮಾತನಾಡಿದರು.

ಸಂಘದ ಗೌರವ ಕಾರ್ಯದರ್ಶಿ ಸಂಗಮೇಶ ಗುಡ್ಡೋಡಗಿ,ವೈದ್ಯರ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ಡಿ.ಬಿ.ಓಸ್ವಾಲ್,ಸಂಘದ ಅಧ್ಯಕ್ಷ ಜಿ.ಎಂ.ಹಿರೇಮಠ ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಶೈಲಜಾ ತುಕಾರಾಮ ಕಲಾಲ,ನೀಲಕಂಠರಾವ ನಾಡಗೌಡರ,ಸತೀಶ ಓಸ್ವಾಲ್,ಅಯ್ಯೂಬ ಮನಿಯಾರ,ಜಬ್ಬಾರ ಗೋಲಂದಾಜ,ವೈದ್ಯರಾದ ಡಾ.ಎಸ್.ಆಯ್.ಜುಲ್ಪೆ,ಡಾ.ಎಸ್.ಬಿ.ವಡವಡಗಿ,ಔಷಧ ತಜ್ಞ ಮಲ್ಲಿಕಾರ್ಜುನ ಕಲ್ಲುಂಡಿ,ಚೆನ್ನವೀರಯ್ಯ ಸಾಲಿಮಠ ಅವರನ್ನು ಸನ್ಮಾನಿಸಲಾಯಿತು.ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.ಹೇಮಾ ಬಿರಾದಾರ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಔಷಧ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Latest News

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿಯ ಕೆಪಿಎಸ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಥ್ರೋಬಾಲ್ ಬಾಲಕರು,ಬಾಲಕಿಯರ ವಿಭಾಗದಲ್ಲಿ

ತೊಗರಿ ಖರೀದಿ ಕೇಂದ್ರಕ್ಕೆ ಪ್ರಸ್ತಾವನೆ :                                 ಕೇಸಾಪೂರ PKPSಗೆ ಪೆಟ್ರೋಲ್ ಬಂಕ್ ಮಂಜೂರಿ

ತೊಗರಿ ಖರೀದಿ ಕೇಂದ್ರಕ್ಕೆ ಪ್ರಸ್ತಾವನೆ : ಕೇಸಾಪೂರ PKPSಗೆ ಪೆಟ್ರೋಲ್ ಬಂಕ್ ಮಂಜೂರಿ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲ ಒದಗಿಸಿಕೊಡಲು ನಮ್ಮ ಸಂಘಕ್ಕೆ ಮಂಜೂರಾಗಿದ್ದ ಮದ್ಯದಂಗಡಿಯನ್ನು

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ:   ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ: ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯೊoದು ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಇತಿಹಾಸ ನಿರ್ಮಿಸಿದೆ.

ಪೌರಕಾರ್ಮಿಕರಿಗೆ 3.50 ಲಕ್ಷ ರೂ.ವಿಶೇಷ ಭತ್ಯೆ: ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರು-ಬಿರಾದಾರ

ಪೌರಕಾರ್ಮಿಕರಿಗೆ 3.50 ಲಕ್ಷ ರೂ.ವಿಶೇಷ ಭತ್ಯೆ: ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರು-ಬಿರಾದಾರ

ಮುದ್ದೇಬಿಹಾಳ : ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದು ಅವರ ಸೇವೆ ಅನನ್ಯವಾದದ್ದು ಎಂದು

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ:                                       ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಉದ್ಯಮಿ ಶರಣು ಸಜ್ಜನರಿಗೆ ಅಭಿನಂದನೆ: ‘ನಿನ್ನ ನೋಡಿಕೊಳ್ತೀನಿ ಅನ್ನೋರು ಯಾರೂ ಉಳಿದಿಲ್ಲ’-ಕೂಚಬಾಳ

ಮುದ್ದೇಬಿಹಾಳ : ಸಮಾಜದಲ್ಲಿ ನಿನ್ನ ನೋಡಿಕೊಳ್ತೀನಿ ಎಂದವರು ಯಾರೂ ಉಳಿದಿಲ್ಲ. ಬಾಗಿದ್ದು ಮಾತ್ರ ಬಹಳ ದಿನ ಉಳಿಯುತ್ತದೆ.ಬೀಗಿದ್ದು ಬಹಳ ದಿನ ಉಳಿಯುವುದಿಲ್ಲ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು. ಪಟ್ಟಣದ ಏಪಿಎಂಸಿಯಲ್ಲಿರುವ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ ಚೇಂರ‍್ಸ್ ಆಫ್ ಕಾಮರ್ಸ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಉದ್ಯಮಿ ಶರಣು ಸಜ್ಜನ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಉದ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಕಂಡಿರುವ,

9.49 ಲಕ್ಷ ರೂ.ಲಾಭ :                                                           ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

9.49 ಲಕ್ಷ ರೂ.ಲಾಭ : ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ಈ ಆರ್ಥಿಕ ವರ್ಷದಲ್ಲಿ ಒಟ್ಟು 4.47 ಕೋಟಿ ರೂ.ಸಾಲ ರೈತರಿಗೆ ಹಂಚಿಕೆ ಮಾಡಲಾಗಿದ್ದು ಸಂಘವು ಒಟ್ಟು 9.49 ಲಕ್ಷ ರೂ.ಲಾಭ ಮಾಡಿದೆ ಎಂದು ಹಡಲಗೇರಿ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗಪ್ಪ ಸಿ.ಮುದ್ನಾಳ ಹೇಳಿದರು. ತಾಲ್ಲೂಕಿನ ಹಡಲಗೇರಿಯಲ್ಲಿ ಸೋಮವಾರ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ 15 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ಪಡೆದುಕೊಂಡ ಸಾಲವನ್ನು