CM Siddaramaiah: ಮುಡಾ ಹಗರಣ.. ಸಿಎಂ ಪರ ಸಲ್ಲಿಸಿದ್ದ ಅರ್ಜಿ ವಜಾ.. ಸಿದ್ದುಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ?

CM Siddaramaiah: ಮುಡಾ ಹಗರಣ.. ಸಿಎಂ ಪರ ಸಲ್ಲಿಸಿದ್ದ ಅರ್ಜಿ ವಜಾ.. ಸಿದ್ದುಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ?

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah)ಗೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಹೌದು, ಸಿಎಂ ಸಿದ್ದರಾಮಯ್ಯ‌(CM SIDDARAMAIAH) ವಿರುದ್ಧ ಸ್ನೇಹಮಯಿ ಕೃಷ್ಣ ಎನ್ನುವವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಏತ್ಮಮಧ್ಯೆ, ಆಲಂ ಪಾಷಾ ಪ್ರಾಸಿಕ್ಯೂಷನ್ ಅನುಮತಿ ಇಲ್ಲದೆ ಸಿಎಂ ವಿರುದ್ಧ ಪ್ರಕರಣವನ್ನೇ ಸ್ವೀಕರಿಸಬಾರದು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

Join our Telegram: https://t.me/dcgkannada

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಸಿಎಂ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಆದೇಶವನ್ನು ನೀಡಿದೆ. ಅಲ್ಲದೆ, ವಿಚಾರಣೆಯ ವೇಳೆ ಆಲಂ ಪಾಷಾ ಎನ್ನುವವರು ಪ್ರಾಜಸಿಕ್ಯೂಷನ್ ಗೆ ಅನುಮತಿ ಇಲ್ಲದೆ, ಸಿಎಂ ಕೇಸ್ ಸ್ವೀಕರಿಸದಂತೆ ಅರ್ಜಿಯನ್ನು ಯಾವ ಕಾನೂನಿನ ಅಡಿ ಅರ್ಜಿ ಸಲ್ಲಿಸಿದ್ದೀರಾ ಎಂದು ಮಧ್ಯಂತರ ಅರ್ಜಿದಾರರಿಗೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಶ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.

ಆಲಂ ಪಾಷಾ ಅವರ ಈ ವಾದಕ್ಕೆ ಜಡ್ಜ್ ಸಂತೋಷ ಗಜಾನನ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಅರ್ಜಿದಾರ ಆಲಂಪಾಷ ದೂರು ದಾಖಲಿಸಲು ಅನುಮತಿ ಕೇಳುತ್ತಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆನ್ನೇ ತಡೆಹಿಡಿಯಲು ಕೇಳುತ್ತಿದ್ದಾರೆ. ಹೀಗಾಗಿ, ಆಲಂಪಾಷ ಅರ್ಜಿ ವಜಾ ಗೊಳಿಸಲು ಅರ್ಹ ಎಂದು ಕೋರ್ಟ್ ಆದೇಶ ಹೊರಡಿಸಿದೆ.

ಇದನ್ನೂ ಓದಿ: Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

ಈ ವೇಳೆ ಆಲಂ ಪಾಷ ವಾದಕ್ಕೆ ಸ್ನೇಹಮಯಿ ಕೃಷ್ಣ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಸಂಬಂಧವಿಲ್ಲದ ವ್ಯಕ್ತಿಯ ವಾದ ಆಲಿಸಬಾರದು. ಕೋರ್ಟ್ ಸಮಯ ವ್ಯರ್ಥ ಮಾಡಿರುವುದಕ್ಕೆ ದಂಡ ವಿಧಿಸಬೇಕು ಎಂದು ದೂರುದಾರರ ಸ್ನೇಹಮಹಿನ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು.

ವಿಚಾರಣೆ ಸಂದರ್ಭದಲ್ಲಿ ಪಿಸಿಆರ್ ಅಂದರೆ ಪಬ್ಲಿಕ್ ಕಂಟ್ರೋಲ್ ರೂಂ ಎಂದು ಆಲಂಪಾಷ ಹೇಳಿದಾಗ, ಪಿ ಸಿ ಆರ್ ಎಂದರೇನು ಎಂದು ತಿಳಿಯದೆ ಅರ್ಜಿ ಸಲ್ಲಿಸಿದ್ದೀರಾ? ಕೋರ್ಟ್ನಲ್ಲಿ ತಮಾಷೆ ಮಾಡುತ್ತಿದ್ದೀರಾ ಎಂದು ಜಡ್ಜ್ ತರಾಟೆಗೆ ತೆಗೆದುಕೊಂಡಿದರು. ಅಲ್ಲದೆ, ನೀವು ಸಂತ್ರಸ್ತರಾ? ಅಥವಾ ದೂರುದಾರರಾ? ಸ್ಪಷ್ಟಪಡಿಸಿ ಎಂದು ಜಡ್ಜ್ ಗರಂ ಆಗಿ ಸೂಚಿಸಿದರು.

Latest News

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಲವೆಡೆ

ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳ ಕ್ರಾಸ್‌ದಿಂದ ಹುನಕುಂಟಿ ಗ್ರಾಮದ ಕ್ರಾಸವರೆಗೆ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಜು.3 ರಿಂದ ಮುದ್ದೇಬಿಹಾಳ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಆ ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಗೆ ಭದ್ರತೆ ಕೋರಿ ಮನವಿ ಕೊಟ್ಟಿರುವ ನೆರಬೆಂಚಿ, ಕೇಸಾಪೂರ, ಆಲೂರ,ಹುನಕುಂಟಿ ಗ್ರಾಮಗಳ ಗ್ರಾಮಸ್ಥರು, ಮುರಾಳ ಗ್ರಾಮದ ಕ್ರಾಸ್‌ದಿಂದ ನೆರಬೆಂಚಿ ಮೇಲೆ ಹುನಕುಂಟಿ ಕ್ರಾಸವರೆಗೂ ರಸ್ತೆ

ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಮುದ್ದೇಬಿಹಾಳ : ರೆಗ್ಯೂಲೆಟರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಅವಟಿ ಗಲ್ಲಿಯಲ್ಲಿ ನಡೆದಿದೆ. ಪಟ್ಟಣದ ಅವಟಿಗಲ್ಲಿ ನಿವಾಸಿ ಹುಸೇನಸಾಬ ನಾಗರಾಳ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.ಸಿಲಿಂಡರ್ ಸೋರಿಕೆಯಾಗುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಬೆAಕಿಗೆ ಮನೆಯಲ್ಲಿದ್ದ ಪ್ರಿಡ್ಜ್,ಕುಕ್ಕರ್,ಬಟ್ಟೆಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿಯ ಝಳಕ್ಕೆ