RTJ Rajugowda inaugurated the tournament

ಆರ್.ಟಿ. ಜೆ. ಟೂರ್ನಾಮೆಂಟ್ ಉದ್ಘಾಟಿಸಿದ ರಾಜುಗೌಡ

ಆರ್.ಟಿ. ಜೆ. ಟೂರ್ನಾಮೆಂಟ್ ಉದ್ಘಾಟಿಸಿದ ರಾಜುಗೌಡ

ಹುಣಸಗಿ: ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಭಾನುವಾರ ನಡೆದ ಎ.ಎನ್.ಸಿ.ಸಿ ಕ್ರೀಡಾಂಗಣದಲ್ಲಿ 24ನೇ ಬಾರಿಗೆ ಹಾರ್ಡ್ ಟೆನಿಸ್ ಬಾಲ್ ಓಪನ್ ಕ್ರಿಕೇಟ್ ಟೂರ್ನಾಮೆಂಟ್ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಟೂರ್ನಾಮೆಂಟ್ ಆರ್.ಟಿ. ಜೆ . ಗ್ರೂಪ್ಸ್ ನಾರಾಯಣಪುರರವರು ನರಸಿಂಹನಾಯಕ (ರಾಜುಗೌಡ) ಹುಟ್ಟು ಹಬ್ಬದ ಪ್ರಯುಕ್ತವಾಗಿ ಈ ಟೂರ್ನಾಮೆಂಟ್ ಆಯೋಜಿಸುತ್ತಾರೆ.

ಟೂರ್ನಾಮೆಂಟ್ ಉದ್ಘಾಟನೆಯನ್ನು ಮಾಜಿ ಸಚಿವರು ಸುರಪುರ ನರಸಿಂಹನಾಯಕ (ರಾಜುಗೌಡ) ಮಾಡಿದರು. ಯುವಕರು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ. ಸೋಲು -ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು. ಈ ವೇಳೆ ನೆರೆದಿದ್ದ ವಿವಿಧ ತಂಡಗಳ ಆಟಗಾರರಿಗೆ ಶುಭ‌ ಕೋರಿದರು.

ಪ್ರಥಮ ಬಹುಮಾನ : 3.00.000 = ರೂ &ಆರ್.ಟಿ.ಜೆ ಟ್ರೋಫಿ ಕೊಡುಗೆ: ಶ್ರೀ ಎಸ್.ಪಿ.ದಯಾನಂದ ಮಾಲಕರು ಡಿ.ಎಸ್.ಮ್ಯಾಕ್ ಬೆಂಗಳೂರು, ದ್ವೀತಿಯ ಬಹುಮಾನ : 150.000 = ರೂ & ಆರ್.ಟಿ.ಜೆ ಟ್ರೋಫಿ ಕೊಡುಗೆ: ಶ್ರೀ ಡಾ|| ಬಿ.ಎಮ್.ಅಚ್ಛಿಕೋಟೆ ಪ್ರಥಮ ದರ್ಜೆ ಗುತ್ತಿಗೆದಾರರು ರಾಜನಕೋಳೂರ, ತೃತೀಯಾ ಬಹುಮಾನ : 55.000 = ರೂ & ಆರ್.ಟಿ.ಜೆ ಟ್ರೋಫಿ ಕೊಡುಗೆ: ಶ್ರೀ ಬಿ.ಎನ್.ಪೋಲೀಸ್ ಪಾಟೀಲ್ ಪ್ರಥಮ ದರ್ಜೆ ಗುತ್ತಿಗೆದಾರ. ಕೊಡುಗೆ: ಶ್ರೀ ಮತ್ತು ನವಲಗುಡ್ಡ ಪ್ರಥಮ ದರ್ಜೆ ಗುತ್ತಿಗೆದಾರರು ಕೊಡೇಕಲ, ಚತುರ್ಥ ಬಹುಮಾನ : 55.000 = ರೂ & ಆರ್.ಟಿ.ಜೆ ಟ್ರೋಫಿ ಉಡುಗೊರೆಯಾಗಿ ನೀಡಿದರು

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ. ಹಣಮಂತನಾಯಕ (ಬಬ್ಲೂಗೌಡ) ಬಿ.ಜೆ.ಪಿ ಯುವ ಮುಖಂಡರು ಕೊಡೇಕಲ್, ಕುಶಾಲ್ ಧಣಿ, ದೇವು ಗೋಪಳ್ಳಿ, ಚಿನ್ನಪ್ಪ ಡೊಳ್ಳಿ, ತಿಮ್ಮಪ್ಪ ರೋಡಲಬಂಡ, ಮಲ್ಲಿಕಾರ್ಜುನ್ ಅಮ್ಮಾಪುರ್, ಸುರೇಶ್ ಸಜ್ಜನ್, ವಾಸಿಗೌಡ, ಆಂಜನೇಯ ದೊರೆ, ಸಂಗಣ್ಣ ಬಸಪ್ಪ ಶೆಟ್ಟರ್, ಸೇಕ್ ಅಹ್ಮದ್, ರಮೇಶ್ ಕೋಳೂರು, ಶಿವು ಬಿರಾದರ್, ಜಟ್ಟಪ್ಪ ಗೊಳಸಂಗಿ, ಇನ್ನಿತರರು ಇದ್ದರು.

ವರದಿ : ಶಿವು ರಾಠೋಡ

Latest News

JavaScript isn’t montys millions slot free spins readily available

ArticlesTotally free Revolves | montys millions slot free spinsTrendy Fruits Slot

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಮುದ್ದೇಬಿಹಾಳ : ಕೆಲವು ಸ್ವಾಮೀಜಿಗಳಿರುತ್ತಾರೆ.ಜನರಿಗೆ ತಾವು ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಪುಕ್ಕಟೆ ಉಪದೇಶ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಡಾ. ಎ.ಆರ್. ಗೋವಿಂದಸ್ವಾಮಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ತೆರವಾಗಿದ್ದ ಸ್ಥಾನಕ್ಕೆ ಡಾ. ಮೋತಿಲಾಲ ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಡಾ. ಮೋತಿಲಾಲ ರೂ. ಚವ್ಹಾಣ